ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಂಬಗಿರಿಯಲ್ಲಿ ದೀಪೋತ್ಸವ

Last Updated 2 ಡಿಸೆಂಬರ್ 2020, 2:35 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಆಲಂಬಗಿರಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಮಾಸದ ಹುಣ್ಣಿಮೆಯಂದು ಸೋಮವಾರ ರಾತ್ರಿ ವಿಷ್ಣು ದೀಪೋತ್ಸವವನ್ನು ಶಾಸ್ತ್ರೋಕ್ತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ದೇವಾಲಯದ ಆವರಣದಲ್ಲಿ ಮಹಿಳೆಯರು ಮಣ್ಣಿನ ಹಣತೆಗಳನ್ನು ಹಚ್ಚಿ ತಮ್ಮ ಭಕ್ತಿಯನ್ನು ಮೆರೆದರು. ರಾಜಗೋಪುರದ ಮುಂದೆ ಇರುವ ಮೂರು ದೀಪಸ್ತಂಭಗಳಿಗೂ ದೊಡ್ಡ ದೀಪಗಳನ್ನು ಹಚ್ಚಿ ಇಡಲಾಗಿತ್ತು. ಎತ್ತರದ ದೀಪಸ್ತಂಭವನ್ನು
ಏರಲು ಅಟ್ಟಣಿಗೆಯನ್ನು ಹಾಕಲಾಗಿತ್ತು. ವಿದ್ಯುತ್ ದೀಪಗಳಿದ ಅಲಂಕರಿಸಲಾಗಿತ್ತು.

ಶ್ರೀದೇವಿಭೂದೇವಿ ಸಮೇತ ಶ್ರೀ ವೆಂಕಟರಮಣಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರವನ್ನು ಮಾಡಲಾಗಿತ್ತು. ದೇವಾಲಯವನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗಿತ್ತು. ಪ್ರಾಂಗಣದಲ್ಲಿರುವ ಅಮ್ಮನವರ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಕೈವಾರದ ಯೋಗಿನಾರೇಯಣ ಮಠದ ಸಂಕೀರ್ತನಾ ಯೋಜನೆಯಿಂದ ಸಂಕೀರ್ತನಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂಸೇರಿದಂತೆ ನೂರಾರು ಜನ ಭಕ್ತರು ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT