ಬಾಲಕಿ ಪ್ರಾಣ ರಕ್ಷಿಸಿದ ಬಾಲಕರು

7

ಬಾಲಕಿ ಪ್ರಾಣ ರಕ್ಷಿಸಿದ ಬಾಲಕರು

Published:
Updated:
Deccan Herald

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗುರುವಾರ ಸಂಜೆ ಸಂಪ್‌ನೊಳಗೆ ಬಿದ್ದ ಪೂರ್ವಿಕಾಳನ್ನು (5) ಅದೇ ಗ್ರಾಮದ ಸಾತ್ವಿಕ್‌ (6) ಮತ್ತು ದೀಪಕ್‌ (5) ಅಪಾಯದಿಂದ ರಕ್ಷಿಸಿದ್ದಾರೆ.  

ಗಣೇಶಪ್ಪ ಎಂಬುವವರು ಮನೆ ನಿರ್ಮಿಸುತ್ತಿದ್ದು ಅಲ್ಲಿ ಒಂಬತ್ತು ಅಡಿ ಆಳದ ಸಂಪ್ ಇದೆ. ಕಡ್ಡಿಗಳನ್ನು ಸಂಪ್‌ಗೆ ಅಡ್ಡ ಇಟ್ಟಿದ್ದಾರೆ. ಆಟವಾಡುತ್ತ ಬಂದ ಪೂರ್ವಿಕಾ ಕಾಲುಜಾರಿ ನೀರು ತುಂಬಿದ ಸಂಪ್‌ನೊಳಗೆ ಬಿದ್ದಿದ್ದಾಳೆ. ಆಕೆಯ ಹಿಂದೆಯೇ ಬರುತ್ತಿದ್ದ ಸಾತ್ವಿಕ್ ಮತ್ತು ದೀ‍ಪಕ್ ಕಿರುಚಾಡಿದ್ದಾರೆ. ಆಕೆಯ ಕೈಗಳನ್ನು ಹಿಡಿದು ಮೇಲೆ ಎತ್ತಿದ್ದಾರೆ.

ಮಕ್ಕಳ ಕೂಗು ಕೇಳಿ ಪೂರ್ವಿಕಾ ಅಜ್ಜಿ ಉಮಾ ಮತ್ತು ದೀಪಕ್‌ ತಾಯಿ ಮುನಿರತ್ನಮ್ಮ ಓಡಿ ಬಂದಿದ್ದಾರೆ. ಪ್ರಜ್ಞೆ ತಪ್ಪಿದ್ದ ಆಕೆಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ಪೂರ್ವಿಕಾ ತಂದೆ ರವಿಪ್ರಸಾದ್‌ ಬಾಬು ಮತ್ತು ತಾಯಿ ಅನಿತಾ ದೇವನಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಮಗುವು ಅಜ್ಜಿ ಆರೈಕೆಯಲ್ಲಿ ಬೆಳೆಯುತ್ತಿದೆ.

ಬರಹ ಇಷ್ಟವಾಯಿತೆ?

 • 37

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !