ಚಿಕ್ಕಬಳ್ಳಾಪುರ: ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಖುರ್ಚಿ ಖಾಲಿ ಮಾಡಿ. ಮುಂದಿನ ಚುನಾವಣೆಗಳಲ್ಲಿ ಒಳ ಮೀಸಲಾತಿ ವಿರೋಧಿಗಳನ್ನು ಸೋಲಿಸುತ್ತೇವೆ ಎಂದು ಇಲ್ಲಿ ಶುಕ್ರವಾರ ನಡೆದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಮತ್ತು ಅಸೆಂಬ್ಲಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧಾರ ಕೈಗೊಳ್ಳಲಾಯಿತು.

ಪಕ್ಷದ ರಾಜ್ಯದ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ನಮಗೆ ಮತದಾನದ ಅಧಿಕಾರ ಬಂದಿದೆ. ಆ ಮತದ ಹಕ್ಕು ಇರುವುದರಿಂದ ನಮ್ಮ ಕಾಲೊನಿಗಳು ಇವೆ. ನಮ್ಮ ಬಳಿ ಮತವಿದೆ ಎನ್ನುವ ಕಾರಣಕ್ಕಾಗಿಯೇ ನಮಗೆ ಕೈ ಮುಗಿಯುತ್ತಾರೆ. ಇಲ್ಲದಿದ್ದರೆ ನಮ್ಮನ್ನು ನೋಡುವವರೇ ಇರಲಿಲ್ಲ ಎಂದು ಹೇಳಿದರು.

ಈ ದೇಶದ ಸಂಪತ್ತು ಸರಿ ಸಮಾನವಾಗಿ ಹಂಚಿಕೆ ಆಗಬೇಕು ಎನ್ನುತ್ತದೆ ಸಂವಿಧಾನ. ಆದರೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಧಿಕಾರದ ಅವಧಿಯಲ್ಲಿ ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡಿವೆ. ಇಂದಿರಾ ಗಾಂಧಿ ನಮ್ಮಮ್ಮ ಎಂದು ನಮ್ಮ ಜನರು ಮತ ಹಾಕಿದರು. ಕಾಂಗ್ರೆಸ್ನವರು ಮತ ಪಡೆದು ನಮಗೆ ನಾಮ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇ 90ರಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರು ದೇಶದಲ್ಲಿ ಇದ್ದಾರೆ. ಉದ್ಯೋಗ ಇತ್ಯಾದಿ ಮೀಸಲಾತಿಯಿಂದ ಶೇ 15ರಷ್ಟು ಜನರು ಚೆನ್ನಾಗಿದ್ದಾರೆ. ಉಳಿದವರು ಇಂದಿಗೂ ಶೋಷಣೆಗೆ ಒಳಗಾಗಿದ್ದಾರೆ ಎಂದರು.

ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರ ಮೋದಿ ಹೇಳಿದ್ದರು. ಅವರು ಪ್ರಧಾನಿಯಾಗಿ 11 ವರ್ಷವಾದರೂ ಉದ್ಯೋಗ ಸೃಷ್ಟಿ ಆಗಲಿಲ್ಲ ಎಂದು ದೂರಿದರು.

ಪಕ್ಷದ ರಾಜ್ಯ ಸಂಯೋಜಕ ಆರ್.ಮುನಿಯಪ್ಪ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಇವರ ಕೈಯಲ್ಲಿ ಅಧಿಕಾರವಿದ್ದಾಗ ದೇಶದ ಬಹುಸಂಖ್ಯಾತರಿಗೆ ಮೋಸ ಮಾಡಿದ್ದಾರೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಿಲ್ಲ. ಒಳಮೀಸಲಾತಿ ಜಾರಿ ಮೂಲಕ ನ್ಯಾಯ ದೊರಕಿಸಿಕೊಡಬೇಕು. 56 ಸಾವಿರ ಹುದ್ದೆಗಳು ಒಳ ಮೀಸಲಾತಿ ಇಲ್ಲದೆ ನೇಮಕವಾಗುತ್ತಿವೆ. ನಮ್ಮವರೇ ಈ ನೇಮಕದಲ್ಲಿ ಒಳ ಮೀಸಲಾತಿ ಬೇಡ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಹೊಟ್ಟೆ ತುಂಬಾ ಊಟ ಮಾಡಿರುವ ನಮ್ಮವರು ‘ನಾವೆಲ್ಲರೂ ಒಂದು’ ಎನ್ನುತ್ತಾರೆ. ಆದರೆ ಹಸಿದಿರುವ ನಾವು ಮತ್ತು ಹೊಟ್ಟೆ ತುಂಬಿರುವ ಅವರು ಹೇಗೆ ಒಂದೇ ಎನ್ನಲು ಸಾಧ್ಯ. ಮಾತಿನಲ್ಲಿ ಮಾತ್ರ ಅಂಬೇಡ್ಕರ್ವಾದವಿದೆ. ಆದರೆ ಮನಸ್ಥಿತಿಯಲ್ಲಿ ಮನುವಾದವಿದೆ ಎಂದು ಟೀಕಿಸಿದರು.

ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರ. ಆದ್ದರಿಂದ ಸಮುದಾಯದವರು ಶಿಕ್ಷಣ ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.

ಪಕ್ಷದ ಜಿಲ್ಲಾ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಈ ವೇಳೆ ನೇಮಕ ಮಾಡಲಾಯಿತು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಉಪಾಧ್ಯಕ್ಷ ಬಿ.ಎನ್.ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ನಾಗಪ್ಪ, ಜಿಲ್ಲಾ ಅಧ್ಯಕ್ಷ ಕೋಡಿಗಲ್ ರಮೇಶ್, ಪದಾಧಿಕಾರಿಗಳಾದ ಮುನಿಕೃಷ್ಣಪ್ಪ, ವಿಜಯ ನರಸಿಂಹ, ವೆಂಕಟೇಶ್, ದಿನೇಶ್, ಆನಂದ್, ಹರೀಶ್, ಬಾಗೇಪಲ್ಲಿ ರಮೇಶ್, ವರ್ಲಕೊಂಡ ದೇವರಾಜ್, ನಾರಾಯಣಸ್ವಾಮಿ, ಸುರೇಶ್, ಅನಿತಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.