ಬುಧವಾರ, ಜನವರಿ 22, 2020
19 °C

ಚಿಕ್ಕಬಳ್ಳಾಪುರ: ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಡಿ.18ರಂದು ಬುಧವಾರ ಬೆಳಿಗ್ಗೆ 11ರಿಂದ 12.30 ಗಂಟೆಯವರೆಗೆ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

* ದಾಖಲೆಗಳು ಸರಿ ಇದ್ದರೂ ಎಲ್ಲೆಂದರಲ್ಲಿ ತಡೆದು ಪೊಲೀಸರು ದಂಡ ವಿಧಿಸುತ್ತಿದ್ದಾರಾ?
* ಸಂಚಾರ ಪೊಲೀಸ್‌ ಠಾಣೆಗಳು ಜನಸ್ನೇಹಿ ಆಗಿಲ್ಲವೇ?
* ಟ್ರಾಫಿಕ್ ಪೊಲೀಸರು ಜನಸ್ನೇಹಿಯೇ ಅಥವಾ ಕಿರಿಕಿರಿ ಉಂಟು ಮಾಡುತ್ತಿದ್ದಾರಾ?
* ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ, ಸಿಗ್ನಲ್ ದೀಪಗಳೂ ಕೆಲಸ ಮಾಡದೆ ತೊಂದರೆ ಆಗುತ್ತಿದೆಯೇ?
* ಹೊಸ ಮೋಟಾರು ವಾಹನ ಕಾಯ್ದೆಯ ಅಂಶಗಳನ್ನು ತಿಳಿದುಕೊಳ್ಳಬೇಕೇ?
* ವಾಹನಗಳ ಅತಿವೇಗಕ್ಕೆ ಕಡಿವಾಣ, ಕರ್ಕಶ ಹಾರ್ನ್‌ ಬಳಕೆ ನಿಷೇಧ ಆಗಿದೆಯೇ?
* ಕಳ್ಳತನ, ಸುಲಿಗೆ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆಯೇ?
* ರಾತ್ರಿ ಗಸ್ತು ಹೆಚ್ಚಿಸಬೇಕೇ? ಜನಸ್ನೇಹಿ ಪೊಲೀಸ್‌ ಬಗ್ಗೆ ನಿಮ್ಮ ಸಲಹೆ ಮತ್ತು ಸಹಭಾಗಿತ್ವ ಏನು?

ಹೀಗೆ ಜಿಲ್ಲೆಯ ಸಾರ್ವಜನಿಕರು ಹಾಗೂ ನೊಂದವರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಹಾಗೂ ಸಂಚಾರ ವ್ಯವಸ್ಥೆ ಇನ್ನಿತರೆ ಸುಧಾರಣೆಗಳ ಬಗ್ಗೆ ಸಲಹೆಗಳು ಇದ್ದಲ್ಲಿ ಕರೆ ಮಾಡಬಹುದು. ನಿಮ್ಮ ಪ್ರಶ್ನೆ, ಅನುಮಾನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರಿಸಲಿದ್ದಾರೆ.

ಕರೆ ಮಾಡಿ

ದಿನಾಂಕ: ಡಿ.18 (ಬುಧವಾರ)

ಸಮಯ: ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ

ದೂರವಾಣಿ ಸಂಖ್ಯೆ: 08156–275776

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು