ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಕಾರಿನ ಗಾಜು ಒಡೆದು ₹2 ಲಕ್ಷ ಕಳವು

Published 14 ಆಗಸ್ಟ್ 2024, 13:59 IST
Last Updated 14 ಆಗಸ್ಟ್ 2024, 13:59 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಕೋಲಾರ ರಸ್ತೆಯ ಹೋಟೆಲ್ ಒಂದರ ಮುಂದೆ ಬುಧವಾರ ಮಧ್ಯಾಹ್ನ ಕಾರು ನಿಲ್ಲಿಸಿ ಊಟಕ್ಕಾಗಿ ಹೋಗಿದ್ದಾಗ ಕಳ್ಳನೊಬ್ಬ ಕಾರಿನ ಗಾಜು ಒಡೆದು ₹2 ಲಕ್ಷ ಕದ್ದು ಪರಾರಿಯಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಿವಾಸಿ ಶಿವಕುಮಾರ್ ಎಂಬುವವರು ಮರ ತುಂಡರಿಸುವ ಯಂತ್ರ ಖರೀದಿಸಲು ಬಂದಿದ್ದರು. ಕೆನರಾ ಬ್ಯಾಂಕ್ ಬಳಿ ಖರೀದಿ ವ್ಯವಹಾರ ನಡೆಸಿದ್ದಾರೆ. ನಂತರ ಹೋಟೆಲ್‌ಗೆ ಕಾರಿನಲ್ಲೇ ಹೋಗಿದ್ದಾರೆ. ಅಲ್ಲಿ ಕಾರನ್ನು ನಿಲ್ಲಿಸಿ ಊಟ ಮಾಡಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ ಎಂದು ಶಿವಕುಮಾರ್ ತಿಳಿಸಿದರು.

ವ್ಯಕ್ತಿಯೊಬ್ಬ ಕಾರಿನ ಬಳಿ ಬಂದು ಕಾರಿನ ಗ್ಲಾಸ್ ಒಡೆದು ಹಣ ತೆಗೆದುಕೊಂಡು ಹೋಗುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ವ್ಯಕ್ತಿಯ ಮುಖ ಕಾಣುವುದಿಲ್ಲ. ನಗರ ಠಾಣೆ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದರು.

ನಗರಠಾಣೆ ಇನ್‌ಸ್ಪೆಕ್ಟರ್ ವಿಜಿ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT