ಶಿಡ್ಲಘಟ್ಟ: ಜಿಲ್ಲೆಯ 50 ರೈತರು ಪುತ್ತೂರಿನಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಗೋಡಂಬಿ ಬೆಳೆ ಬೆಳೆಯುವ ಕುರಿತು ತರಬೇತಿ ತರಬೇತಿ ಪಡೆದಿದ್ದಾರೆ.

ಬೆಂಗಳೂರಿನ ಜಿಕೆವಿಕೆ ವಿಶ್ವವಿದ್ಯಾಲಯ ಆಯೋಜಿಸಿದ್ದ ಅಧ್ಯಯನ ಪ್ರವಾಸದಲ್ಲಿ ಜಿಲ್ಲೆಯ 25 ರೈತರು ಮತ್ತು 25 ರೈತ ಮಹಿಳೆಯರು ಪಾಲ್ಗೊಂಡಿದ್ದು, ‘ಗೋಡಂಬಿ ಬೆಳೆಯ ಸುಧಾರಿತ ತಾಂತ್ರಿಕತೆಗಳು’ ಹಾಗೂ ‘ಗೋಡಂಬಿ ಭವಿಷ್ಯವುಳ್ಳ ತೋಟಗಾರಿಕೆ ಬೆಳೆ’ ಎಂಬ ವಿಷಯ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ತೋಟಗಳಿಗೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿದರು.

ತರಬೇತಿಯಲ್ಲಿ ಹಣ್ಣಿನ ಜ್ಯೂಸ್, ಪಲ್ಪ್, ಲಾಲಿಪಪ್, ಪೇಡಾ, ಉಪ್ಪಿನಕಾಯಿ, ಮಾಲ್ಟ್ ಹಾಗೂ ಬೀಜದಿಂದ ಯಾವ ರೀತಿ ಗೋಡಂಬಿ ಪಲ್ಪ್ ತಯಾರಿಸಬಹುದು ಎಂಬುದಾಗಿ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ತಳಿಗಳ ಅಭಿವೃದ್ಧಿ ಕ್ಷೇತ್ರವಾದ ಉಳ್ಳಾಲ, ಮೂಡಿಗೆರೆಯಲ್ಲಿರುವ ನರ್ಸರಿ, ಶಿವಮೊಗ್ಗದ ತಾಂತ್ರಿಕ ಕೇಂದ್ರ ಮತ್ತು ನರ್ಸರಿ ಹಾಗೂ ಪ್ರಗತಿಪರ ರೈತರ ಮಿಶ್ರ ಬೆಳೆಯ ತೋಟಗಳನ್ನು ವೀಕ್ಷಿಸಿ ರೈತರು ಅನುಭವಗಳನ್ನು ಹಂಚಿಕೊಂಡರು.

ಜಿಕೆವಿಕೆ ಪ್ರಾಧ್ಯಾಪಕರಾದ ಡಾ.ಪ್ರಮೀಳ , ಡಾ.ಮಧುಶ್ರೀ, ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ಶಿವಾನಂದ, ಗೋಪಾಲಕೃಷ್ಣ, ಕುಮಾರ, ಮಳ್ಳೂರು ವನಿತಾ, ಕಾಚಹಳ್ಳಿ ಶೈಲಜ, ಪ್ರಭ ರಾಜಣ್ಣ, ಕೇಶವರೆಡ್ಡಿ, ದೊಡ್ಡಪಾಪಣ್ಣ, ಜಯರಾಮ್, ನಾರಾಯಣಸ್ವಾಮಿ ಇದ್ದರು.

ಬಯಲು ಸೀಮೆಯಲ್ಲೂ ಬೆಳೆಯಬಹುದು

ಗೋಡಂಬಿಯನ್ನು ಬಡ ರೈತರು ಬೆಳೆದರೆ ಶ್ರೀಮಂತರು ತಿನ್ನುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ತೋಟ ಮತ್ತು ಮನೆ ಅಂಗಳದಲ್ಲಿ ಸಸಿ ನೆಟ್ಟರೆ ವರ್ಷಕ್ಕೆ ಆಗುವಷ್ಟು ಗೋಡಂಬಿ ದೊರೆಯುತ್ತದೆ. ಇಳಿಜಾರು ಹಾಗೂ ಗುಡ್ಡಗಳಂತಹ ಜಮೀನು ಇದಕ್ಕೆ ಸೂಕ್ತ. ನೀರಿಲ್ಲದ ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಗೋಡಂಬಿ ಬೆಳೆಯಬಹುದು ಎಂದು ರೈತ ಅಧ್ಯಯನ ಪ್ರವಾಸದ ಸಂಯೋಜಕ ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.