ಆಹಾರ, ಆರೋಗ್ಯದ ಬಗ್ಗೆ ಕಾಳಜಿ ಇರಲಿ: ಡಾ.ಸತ್ಯನಾರಾನಾಯಣರೆಡ್ಡಿ

7

ಆಹಾರ, ಆರೋಗ್ಯದ ಬಗ್ಗೆ ಕಾಳಜಿ ಇರಲಿ: ಡಾ.ಸತ್ಯನಾರಾನಾಯಣರೆಡ್ಡಿ

Published:
Updated:
Deccan Herald

ಬಾಗೇಪಲ್ಲಿ: ‘ಇಂದಿನ ಆಹಾರ ಪದಾರ್ಥಗಳಲ್ಲಿ ಅನೇಕ ರಾಸಾಯನಿಕ, ವಿಷಕಾರಿ ಅಂಶಗಳಿವೆ. ಆದ್ದರಿಂದ ಆರೋಗ್ಯ ಸ್ವಸ್ಥವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿತ್ಯ ಯೋಗ, ವ್ಯಾಯಾಮ, ಪ್ರಾಣಾಯಾಮವನ್ನು ಮಾಡುವುದು ರೂಢಿಸಿಕೊಳ್ಳುವ ಅಗತ್ಯವಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸತ್ಯನಾರಾನಾಯಣರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಯುವ ರೆಡ್ ಕ್ರಾಸ್ ಘಟಕ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಏಡ್ಸ್ ಹಾಗೂ ಟಿ.ಬಿ ರೋಗದ ಜಾಗೃತಿ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇವತ್ತು ಅತಿಯಾದ ಕೆಲಸದ ಒತ್ತಡದಿಂದಾಗಿ ಅನೇಕರು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ನಾಲಿಗೆ ರುಚಿಗೆ ತಿನ್ನುವ ಅನೇಕ ಕುರುಕಲು ತಿನಿಸುಗಳಲ್ಲಿ ವಿಷಕಾರಿ ಅಂಶಗಳ ಮಿಶ್ರಣವಿರುತ್ತದೆ. ಮೊಳಕೆ ಕಾಳುಗಳು, ತರಕಾರಿ, ಹಣ್ಣು ಹೆಚ್ಚಾಗಿ ಆಹಾರದಲ್ಲಿ ಸೇವಿಸಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಅದು ಪ್ಲೋರೋಸಿಸ್ ರೋಗ ಹರಡುತ್ತದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಮ್ಮ ಆಹಾರ ಕ್ರಮ ಬದಲಾಯಿಸಿಕೊಳ್ಳಬೇಕಿದೆ. ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಹಾರ ಪದ್ಧತಿ ಹಾಗೂ ಜೀವನದ ಶೈಲಿ ಬದಲಾಯಿಸಿಕೊಂಡಾಗ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ, ಪ್ರಾಧ್ಯಾಪಕರಾದ ಕೆ.ಎಂ.ನಯಾಜ್‍ಅಹಮದ್, ವೆಂಕಟರಾಮರೆಡ್ಡಿ, ಬಿ.ಎನ್.ಪ್ರಭಾಕರ್, ಪ್ರೊ.ಕೇಶವಮೂರ್ತಿ, ಎಲ್.ಶ್ರೀನಿವಾಸ್, ವೈದ್ಯರಾದ ಶಬ್ಬೀರ್ ಆಲಿ, ಡಾ.ಸಲ್ಮಾ, ಡಾ.ಎಂ.ಎಂ.ಸಿಂಧು, ಡಾ.ಎಚ್.ಎನ್.ಲಾವಣ್ಯ, ಡಾ.ಸತ್ಯ, ಶುಶ್ರೂಷಕಿ ಎ.ಕಳಾವತಿ, ನೇತ್ರ ಸಹಾಯಕಿ ಶಮೀನಾ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಇ ನರಸಿಂಹಮೂರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !