ಚೇಳೂರು: ಪ್ರತಿಯೊಬ್ಬರೂ ಸೌಹಾರ್ದ, ಪರಸ್ಪರ ಗೌರವ ಮತ್ತು ನಂಬಿಕೆಯಿಂದ ಹಬ್ಬ ಆಚರಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಚೇಳೂರು ಸಬ್ ಇನ್ ಸ್ಪೆಕ್ಟರ್ ಗಣೇಶ್.ಕೆ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಮುಂಬರುವ ಪವಿತ್ರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಧರ್ಮದ ಪ್ರಮುಖರು ಹಾಗೂ ನಾಗರಿಕರ ಶಾಂತಿ ಸಭೆ ನೇತೃತ್ವ ವಹಿಸಿ ಮಾತನಾಡಿದರು.

ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿ ಧಕ್ಕೆ ಬಾರದಂತೆ ಸಾರ್ವಜನಿಕರು ಅತ್ಯಂತ ಶಾಂತಿಯುತವಾಗಿ ಹಾಗೂ ಶಿಸ್ತಿನಿಂದ ಹಬ್ಬ ಆಚರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಯಾವುದೇ ಗೊಂದಲ ಅಥವಾ ಅನುಮಾನಸ್ಪದ ಘಟನೆ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಬ್ಬದ ದಿನದಂದು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಮೂಲಸೌಕರ್ಯ ಕುರಿತು ಚರ್ಚಿಸಲಾಯಿತು. ಈ ಸೌಹಾರ್ದ ಸಭೆಯಲ್ಲಿ ಪೊಲೀಸ್ ಸಿಬ್ಬಂದಿ ಸುಧಾಕರ್ ಮತ್ತು ಬೀರಣ್ಣ ಉಪಸ್ಥಿತರಿದ್ದರು.

ಮುಸ್ಲಿಂ ಸಮುದಾಯದ ಪ್ರಮುಖರಾದ ಜಾಮಿಯಾ ಮಸೀದಿಯ ಅಬ್ದುಲ್ ಲತೀಫ್, ಮದೀನಾ ಮಸೀದಿಯ ಅಲೀಂ ಬಾಷಾ, ಹಿರಿಯ ಮುಖಂಡರಾದ ಅಹ್ಮದ್, ಚಕಲಿ ಫಕ್ರುದ್ದೀನ್, ಮೆಕಾನಿಕ್ ನಯಾಜ್, ಬುಲೆಟ್ ಬಾಬು, ನವಾಜ್ ಫುಟ್ವೇರ್, ಫುಟ್ವೇರ್ ಬಾಷಾ, ಶೌಕತ್ ಸಭೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-16-283022378

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.