ನರೇಂದ್ರ ಕೆ

ಚೇಳೂರು: ತಾಲ್ಲೂಕಿನಾದ್ಯಂತ ಸಂಚರಿಸುತ್ತಿರುವ ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಸಾಗಣೆ ಟಿಪ್ಪರ್ಗಳು ಸಾರ್ವಜನಿಕರ ನೆಮ್ಮದಿ ಕೆಡಿಸಿವೆ.

ಟಿಪ್ಪರ್ಗಳಲ್ಲಿ ಮರಳು ಮತ್ತು ಜಲ್ಲಿಕಲ್ಲುಗಳನ್ನು ಲೋಡ್ ಮಾಡಿದ ಬಳಿಕ ರಸ್ತೆಯಲ್ಲಿ ಚೆಲ್ಲದಂತೆ ಮುಚ್ಚಬೇಕು ಎಂಬ ನಿಯಮವಿದೆ. ಆದರೆ, ಟಿಪ್ಪರ್ ಮಾಲೀಕರು ಮತ್ತು ಚಾಲಕರು ಈ ನಿಯಮಗಳನ್ನಿುಗಾಳಗೆ ತೂರಿದ್ದಾರೆ. ಇದರಿಂದ ಟಿಪ್ಪರ್ಗಳು ವೇಗವಾಗಿ ಚಲಿಸುವಾಗ ಎಂ. ಸ್ಯಾಂಡ್ ಗಾಳಿಗೆ ಚದುರುತ್ತಿದ್ದರೆ, ಜಲ್ಲಿಕಲ್ಲುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ವಿವಿಧ ಕ್ರಷರ್ ಘಟಕಗಳಿಂದ ಜಲ್ಲಿ ಮತ್ತು ಎಂ–ಸ್ಯಾಂಡ್ ಅನ್ನು ತಾಲ್ಲೂಕಿಗೆ ಹೊತ್ತು ತರುವ ಬೃಹತ್ ವಾಹನಗಳು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ವೇಗವಾಗಿ ಚಲಿಸುವಾಗ ರಸ್ತೆಯ ತಿರುವುಗಳಲ್ಲಿ ಹಾಗೂ ಹುಬ್ಬುಗಳಲ್ಲಿ ವಾಹನಗಳು ವಾಲಿದಾಗ ಮೇಲ್ಭಾಗದಲ್ಲಿನ ಜಲ್ಲಿಕಲ್ಲುಗಳು ರಸ್ತೆ ಮೇಲೆ ಸಾರಾಸಗಟಾಗಿ ಚೆಲ್ಲುತ್ತಿವೆ. ಇದು ರಸ್ತೆಯ ಅಂದಗೆಡಿಸುವ ಜೊತೆಗೆ ವಾಹನ ಸವಾರರಿಗೆ ಮರಣಶಾಸನವಾಗಿ ಪರಿಣಮಿಸುತ್ತಿದೆ.

ರಸ್ತೆ ಮಧ್ಯೆ ಮತ್ತು ಬದಿಗಳಲ್ಲಿ ಬಿದ್ದಿರುವ ಈ ಸಣ್ಣ ಜಲ್ಲಿಕಲ್ಲುಗಳು ದ್ವಿಚಕ್ರ ವಾಹನ ಸವಾರರಿಗೆ ಮರಣಶಾಸನವಾಗಿವೆ. ತಿರುವುಗಳಲ್ಲಿ ಬ್ರೆಕ್ ಹಾಕಿದಾಗ ಅಥವಾ ವೇಗವಾಗಿ ಚಲಿಸುವಾಗ ಈ ಕಲ್ಲುಗಳ ಮೇಲೆ ಚಕ್ರ ಜಾರಿ ಸವಾರರು ಕೆಳಕ್ಕೆ ಬಿದ್ದು ತೀವ್ರ ಗಾಯಗಳಾಗುತ್ತಿರುವ ಘಟನೆಗಳು ನಿತ್ಯ ಸಂಭವಿಸುತ್ತಿವೆ.

ಸಾರಿಗೆ ಇಲಾಖೆ ನಿಯಮದಂತೆ ಯಾವುದೇ ಕಟ್ಟಡ ಸಾಮಗ್ರಿಗಳನ್ನು ಮುಕ್ತವಾಗಿ ಸಾಗಿಸುವಂತಿಲ್ಲ. ಗಾಳಿಗೆ ದೂಳು ಹಾರದಂತೆ ಮತ್ತು ಕಲ್ಲುಗಳು ಬೀಳದಂತೆ ದಪ್ಪನೆಯ ಪರಧೆಗಳಿಂದ ಮುಚ್ಚುವುದು ಕಡ್ಡಾಯ. ಆದರೆ, ಚೇಳೂರು ತಾಲ್ಲೂಕಿನಲ್ಲಿ ಈ ನಿಯಮ ಕಾಗದಕ್ಕೆ ಸೀಮಿತವಾಗಿದೆ. ಮಿತಿಮೀರಿದ ವೇಗ ಮತ್ತು ಅತಿಯಾದ ಲೋಡ್ ಹೇರಿ ಕೊಂಡು ಸಾಗುವ ಈ ಟಿಪ್ಪರ್ಗಳನ್ನು ಯಾರೂ ತಡೆದು ಪರಿಶೀಲಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಜಲ್ಲಿ, ಎಂ– ಸ್ಯಾಂಡ್ ಸಾಗಿಸುವ ಪ್ರತಿ ವಾಹನಕ್ಕೆ ತಾರ್ಪಲ್ ಕಡ್ಡಾಯಗೊಳಿಸಬೇಕು. ಜನವಸತಿ ಪ್ರದೇಶಗಳಲ್ಲಿ ಟಿಪ್ಪರ್ಗಳ ವೇಗಕ್ಕೆ ಮಿತಿ ಹೇರಬೇಕು. ರಸ್ತೆ ಮೇಲೆ ಬಿದ್ದಿರುವ ಜಲ್ಲಿಕಲ್ಲುಗಳನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ದಾಳಿ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-16-657722501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.