ಚೇಳೂರು: ಎಲ್ಪಿಜಿ ಸಿಲಿಂಡರ್ಗಳ ಬಳಕೆಗೆ ಒಗ್ಗಿಕೊಂಡಿದ್ದ ಹೋಟೆಲ್ ಉದ್ಯಮಕ್ಕೆ ಈಗ ಗ್ಯಾಸ್ ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆ ಎದುರಾಗಿದೆ. ಚೇಳೂರು ತಾಲ್ಲೂಕಿನಾದ್ಯಂತ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗುತ್ತಿರುವ ದಿಢೀರ್ ಏರಿಕೆ ಹಾಗೂ ಸಮರ್ಪಕ ಪೂರೈಕೆಯಿಲ್ಲದ ಕಾರಣ, ಕಂಗಾಲಾಗಿರುವ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಮತ್ತೆ ಹಳೆಯ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಹೋಟೆಲ್ಗಳು, ಟೀ ಅಂಗಡಿ ಮತ್ತು ಉಪಹಾರ ಗೃಹಗಳ ಮುಂಭಾಗದಲ್ಲಿ ಈಗ ಗ್ಯಾಸ್ ಸಿಲಿಂಡರ್ಗಳ ಬದಲಿಗೆ ಸೌದೆ ತುಂಡುಗಳು ರಾಶಿ ಬಿದ್ದಿರುವುದು ಸಾಮಾನ್ಯ ದೃಶ್ಯವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರುತ್ತಿವೆ. ಇದರೊಂದಿಗೆ ಸಾರಿಗೆ ವೆಚ್ಚ ಮತ್ತು ಏಜೆನ್ಸಿಗಳ ಕಮಿಷನ್ ಸೇರಿ ಹೋಟೆಲ್ ಮಾಲೀಕರು ಒಂದು ಸಿಲಿಂಡರ್ಗೆ ದುಬಾರಿ ಮೊತ್ತವನ್ನು ತೆರಬೇಕಾಗಿದೆ.

ಕೇವಲ ಬೆಲೆ ಏರಿಕೆ ಮಾತ್ರವಲ್ಲದೆ, ಚೇಳೂರು ತಾಲ್ಲೂಕಿನಲ್ಲಿ ವಾಣಿಜ್ಯ ಸಿಲಿಂಡರ್ಗಳ ಸಮರ್ಪಕ ಪೂರೈಕೆಯೂ ಇಲ್ಲದಂತಾಗಿದೆ. ಸಕಾಲಕ್ಕೆ ಸಿಲಿಂಡರ್ ಸಿಗದೆ ಹೋಟೆಲ್ಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ಯಾಸ್ ಏಜೆನ್ಸಿಗಳಿಗೆ ಮುಂಚಿತವಾಗಿ ಬುಕ್ ಮಾಡಿದರೂ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹೋಟೆಲ್ ಉದ್ಯಮದಲ್ಲಿ ಪ್ರತಿದಿನವೂ ವ್ಯವಹಾರ ನಡೆಯಬೇಕಿರುವುದರಿಂದ, ಪೂರೈಕೆಯ ಈ ಅನಿಶ್ಚಿತತೆಯನ್ನು ನಂಬಿಕೊಂಡು ಕೂರಲು ಸಾಧ್ಯವಾಗದೆ ಮಾಲೀಕರು ಪರ್ಯಾಯ ಮಾರ್ಗವಾಗಿ ಸೌದೆ ಒಲೆಗಳನ್ನು ಆಶ್ರಯಿಸುತ್ತಿದ್ದಾರೆ.

ಗ್ಯಾಸ್ ಬಿಟ್ಟು ಸೌದೆ ಒಲೆಯ ಮೊರೆ ಹೋಗುತ್ತಿರುವ ಹೋಟೆಲ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ತಾಲ್ಲೂಕಿನಲ್ಲಿ ಸೌದೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೋಟೆಲ್ಗಳ ಹಿಂಭಾಗದಲ್ಲಿ ಹಾಗೂ ಗೋದಾಮುಗಳಲ್ಲಿ ಸೌದೆ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಗ್ಯಾಸ್ ಸಿಲಿಂಡರ್ಗೆ ಹೋಲಿಸಿದರೆ ಸೌದೆ ಒಲೆಯಲ್ಲಿ ಆಹಾರ ಸಿದ್ಧಪಡಿಸುವುದು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಲಾಭದಾಯಕವಾಗಿದೆ ಎಂದು ಹೋಟೆಲ್ ಕಾರ್ಮಿಕರು ಹೇಳುತ್ತಾರೆ .ಸೌದೆ ಒಲೆಯಲ್ಲಿ ಬೇಯಿಸುವ ಅನ್ನ, ಸಾಂಬಾರ್ ಹಾಗೂ ಟೀ ಹೆಚ್ಚು ರುಚಿಯಾಗಿರುತ್ತದೆ ಎಂದು ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ಹೋಟೆಲ್ ಮಾಲೀಕರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಗ್ಯಾಸ್ ಒಲೆಗಳ ಬಳಕೆಯಿಂದಾಗಿ ಹೋಟೆಲ್ ಅಡುಗೆ ಕೋಣೆಗಳು ಸ್ವಚ್ಛ ಹಾಗೂ ಹೊಗೆ ಮುಕ್ತವಾಗಿದ್ದವು. ಆದರೆ ಈಗ ಮತ್ತೆ ಸೌದೆ ಒಲೆಗಳು ಬಂದಿರುವುದರಿಂದ ಹೋಟೆಲ್ ಕಾರ್ಮಿಕರು ಹೊಗೆಯ ನಡುವೆಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ, ಹೊಟ್ಟೆಪಾಡಿಗಾಗಿ ಮತ್ತು ಉದ್ಯಮವನ್ನು ಉಳಿಸಿಕೊಳ್ಳಲು ಮಾಲೀಕರು ಹಾಗೂ ಕಾರ್ಮಿಕರು ಈ ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಸಣ್ಣ ಸಣ್ಣ ಹೋಟೆಲ್ಗಳು ಮತ್ತು ಖಾನಾವಳಿಗಳು ಇಂದಿನ ಪರಿಸ್ಥಿತಿಯಲ್ಲಿ ಬದುಕುಳಿಯುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಚೇಳೂರು ತಾಲ್ಲೂಕಿನ ಹೋಟೆಲ್ ಮಾಲೀಕರು ಆಗ್ರಹಿಸಿದ್ದಾರೆ.

ಪರ್ಯಾಯ ಮಾರ್ಗವಾಗಿ ಸೌದೆ ಒಲೆ

ಪ್ರತಿ ತಿಂಗಳು ವಾನಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಹೋದರೆ ನಾವು ಹೋಟೆಲ್ ನಡೆಸುವುದು ಹೇಗೆ? ಇತ್ತ ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಅತ್ತ ಬೆಲೆ ಏರಿಸದಿದ್ದರೆ ನಮಗೆ ಅಸಲೂ ಸಿಗುವುದಿಲ್ಲ. ಅದರಲ್ಲೂ ಈಚೆಗೆ ಗ್ಯಾಸ್ ಸಿಲಿಂಡರ್ ಕೇಳಿದ ತಕ್ಷಣ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸೌದೆ ಒಲೆಯಲ್ಲಿ ಆಹಾರ ತಯಾರಿಸುತ್ತಿದ್ದೇವೆ.

– ಚೌಡರೆಡ್ಡಿ, ಜೈ ಶ್ರೀರಾಮ್ ಹೋಟೆಲ್

ಸೌದೆ ಬೆಲೆಯೂ ಏರಿಕೆ

ಗ್ಯಾಸ್ ಒಲೆ ಬಳಸುತ್ತಿದ್ದಾಗ ಅಡುಗೆ ಮನೆ ಸ್ವಚ್ಛ ಇರುತ್ತಿತ್ತು, ಕೆಲಸವೂ ಬೇಗ ಮುಗಿಯುತ್ತಿತ್ತು. ಆದರೆ ಈಗಿನ ಬೆಲೆ ಏರಿಕೆಗೆ ಹೆದರಿ ಮತ್ತೆ ಸೌದೆ ಒಲೆಗೆ ಶರಣಾಗಿದ್ದೇವೆ. ತಾಲ್ಲೂಕಿನಾದ್ಯಂತ ಸೌದೆಗೆ ಬೇಡಿಕೆ ಹೆಚ್ಚಾಗಿ ಈಗ ಸೌದೆ ಬೆಲೆಯೂ ಏರತೊಡಗಿದೆ. ಹೊಗೆಯಲ್ಲೇ ನಿಂತು ಅಡುಗೆ ಮಾಡುವುದು ಕಷ್ಟವಾದರೂ, ಉದ್ಯಮವನ್ನು ಮತ್ತು ನಮ್ಮ ಹೊಟ್ಟೆಪಾಡನ್ನು ಉಳಿಸಿಕೊಳ್ಳಲು ಈ ಕಷ್ಟ ಸಹಿಸಲೇಬೇಕಾಗಿದೆ.

– ವೆಂಕಟರವಣಪ್ಪ, ಹೋಟೆಲ್ ಮಾಲೀಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-16-135547910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.