ಚಿಕ್ಕಬಳ್ಳಾಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 2026-27 ನೇ ಸಾಲಿನ ರಸಗೊಬ್ಬರ ಪೂರೈಕೆ ಮತ್ತು ಸಮರ್ಪಕ ನಿರ್ವಹಣೆ, ಸಮತೋಲನ ಬಳಕೆ ಮತ್ತು ಪರ್ಯಾಯ ರಸಗೊಬ್ಬರಗಳ ಅರಿವು ಮೂಡಿಸುವ ಕುರಿತು ಸಭೆ ನಡೆಯಿತು.

ಸಹಾಯಕ ಕೃಷಿ ನಿರ್ದೇಶಕ ಸಿ. ಮುನಿರಾಜು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ವಿತರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ದಾಸ್ತಾನು ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು. ಕಡ್ಡಾಯವಾಗಿ ಪಿಒಎನ್ ಯಂತ್ರದ ಮೂಲಕವೇ ರೈತರ ಆಧಾರ್ ವಿವರಗಳನ್ನು ಪಡೆದು ವಿತರಿಸಬೇಕು. ಕಡ್ಡಾಯವಾಗಿ ರೈತರಿಗೆ ರಸೀದಿ ನೀಡಬೇಕು ಎಂದರು.

ಪ್ರತಿ ತಿಂಗಳ 5ನೇ ತಾರೀಖಿನೊಳಗೆ ದಾಸ್ತಾನು ಮತ್ತು ವಿತರಣೆ ವಿವರಗಳನ್ನು ಕಚೇರಿಗೆ ಸಲ್ಲಿಸಬೇಕು. ಡಿಎಪಿ ಮತ್ತು ಯೂರಿಯಾ ಗೊಬ್ಬರವನ್ನು ತಾಲ್ಲೂಕಿನಲ್ಲಿ ಹಂಗಾಮುವಾರು ಬೆಳೆಯುವ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಬೇಕು. ಮುಂದೆ ರಸಗೊಬ್ಬರ ಅಭಾವ ಬರುತ್ತದೆ ಎಂದು ಭಾವಿಸಿ ರೈತರು ಮುಂಗಡವಾಗಿ ಖರೀದಿಸಿ ಶೇಖರಣೆ ಮಾಡಿಕೊಳ್ಳುವ ಸಂಭವವಿದ್ದರೆ ಮಾಹಿತಿ ನೀಡಬೇಕು ಎಂದರು.

ಪ್ರಸ್ತುತ ಮುಂಗಾರು ಹಂಗಾಮ ಪ್ರಾರಂಭವಾಗಿಲ್ಲ. ರಸಗೊಬ್ಬರಕ್ಕೆ ಅತಿಯಾದ ಬೇಡಿಕೆಯೂ ಇಲ್ಲ. ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ರಸಗೊಬ್ಬರ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಡಿಎಪಿ ಮತ್ತು ಯೂರಿಯಾ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುತ್ತಿದ್ದು ಎಲ್ಲಾ ಮಾರಾಟಗಾರರು ಬೆಳೆಗಳಿಗೆ ಶಿಫಾರಸ್ಸಿನ ಅನ್ವಯ ರಸಗೊಬ್ಬರ ವಿತರಿಸಬೇಕು ಎಂದು ಸೂಚಿಸಿದರು.

ಯೂರಿಯಾ ಗೊಬ್ಬರದ ಅತಿಯಾದ ಬಳಕೆ ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕೆ-ಕಿಸಾನ್ ತಂತ್ರಾಂಶದ ಮೂಲಕ ವಿಶೇಷ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ. ವಿತರಣೆ ಸಮಯದಲ್ಲಿ ರೈತರ ನೋಂದಣಿ ಸಂಖ್ಯೆ (ಎಫ್.ಐ.ಡಿ ನಂಬರ್) ಕಡ್ಡಾಯವಾಗಿದೆ. ಪ್ರತಿ ರೈತರಿಗೆ ಅವರು ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಪ್ರತಿ ಎಕರೆಗೆ ಒಂದು ಬ್ಯಾಗ್ ನಂತೆ ಅವರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಸಾರ ವಿತರಿಸಲಾಗುವುದು. ಈ ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸುತ್ತದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ ಮೋಹನ್ ಮಾತನಾಡಿ, ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಮಾರಾಟ ಸಂದರ್ಭದಲ್ಲಿ ಕಾಯ್ದೆಗಳ ಅನ್ವಯ ನಿಗದಿತ ದಾಸ್ತಾನು ವಹಿ, ರಸೀದಿ ವಹಿ ಹಾಗೂ ಇತರೆ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ರಸಗೊಬ್ಬರ ಮತ್ತು ಬಿತ್ತನೆ ಬೀಜ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವುದರಿಂದ ದಾಸ್ತಾನು ವಿತರಣೆ ಮತ್ತು ಶೇಖರಣೆಯಲ್ಲಿ ವಿಶೇಷ ಗಮನ ಹರಿಸಿ, ರೈತರಿಗೆ ವಿತರಿಸಬೇಕು ಎಂದು ಸೂಚಿಸಿದರು.

ಕೀಟ ನಾಶಕ ವಿತರಣೆ ಸಂದರ್ಭದಲ್ಲಿ ಅಧಿಕೃತ ಸರಬರಾಜುದಾರರು ಅಥವಾ ವಿತರಕರಿಂದ ಪಡೆದು ಸೂಕ್ತ ದಾಖಲೆ ನಿರ್ವಹಿಸಿ ಮಾರಾಟ ಮಾಡಬೇಕು ಎಂದರು.

ಎಸ್.ಎಂ ಮೋಹನ್, ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್, ಕೃಷಿ ಅಧಿಕಾರಿ ರಾಮಚಂದ್ರ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಮತ್ತು ತಾಲ್ಲೂಕಿನ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟ ನಾಶಕ ಮಾರಾಟಗಾರರು ಸಭೆಯಲ್ಲಿಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-16-658373897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.