ಚಿಕ್ಕಬಳ್ಳಾಪುರ: ಅಂಬೇಡ್ಕರ್ ಅವರು ಹಾಕಿಕೊಟ್ಟ ಪರಂಪರೆ, ಆದರ್ಶಗಳು ಮತ್ತು ವಿಚಾರಗಳನ್ನು ಪ್ರತಿಯೊಬ್ಬರು ಅರಿತು ಪಾಲಿಸಬೇಕು. ಆ ಮೂಲಕ ನಾವು ಅವರಿಗೆ ಋಣಿ ಆಗಿರಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿ ರಂಗಪ್ಪ ತಿಳಿಸಿದರು.

ನಗರದಲ್ಲಿ ಈಚೆಗೆ ಜಿಲ್ಲಾ ಮತ್ತು ತಾಲ್ಲೂಕು ಕಸಾಪದಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿದರು.

ಅಜ್ಞಾನ, ಅಸಮಾನತೆಯ ಕಾರಣ ದೇಶದಲ್ಲಿ ಕೋಟ್ಯಂತರ ಜನರು ಶೋಷಣೆ ಮತ್ತು ತಾರತಮ್ಯಗಳಿಗೆ ಒಳಗಾಗುತ್ತಿದ್ದರು. ಅಂತಹ ಸಮಾಜದ ಪರಿವರ್ತನೆಗಾಗಿ ಅಂಬೇಡ್ಕರ್ ಅವರು ಶಾಸನಾತ್ಮಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ನೈತಿಕವಾಗಿ ಜನರನ್ನು ಸಶಕ್ತಗೊಳಿಸಿದರು ಎಂದು ಸ್ಮರಿಸಿದರು.

ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಎಂ. ಶಂಕರ್, ದೇಶದಲ್ಲಿ ಅಂಬೇಡ್ಕರ್ ಅವರು ಹುಟ್ಟದಿದ್ದರೆ ಕೆಳ ವರ್ಗದ ಯಾರು ಸಹ ಬದುಕಿ ಬಾಳಲು ಆಗುತ್ತಿರಲಿಲ್ಲ ಎಂದರು.

ಸಾಹಿತಿ ಸರ್ದಾರ್ ಚಾಂದ್ ಪಾಷಾ, ಪುಸ್ತಕ ಸಂಸ್ಕೃತಿ ಬೆಳೆಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು. ಅಂಬೇಡ್ಕರ್ ಅವರ ಬದುಕಿನ ಕುರಿತು ಮಾತನಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಗೌರವ ಕಾರ್ಯದರ್ಶಿ ಕೆ.ಎಂ ರೆಡ್ಡಪ್ಪ, ಅಧ್ಯಾಪಕ ಕೃಷ್ಣಮೂರ್ತಿ, ಪಿ.ಆರ್. ರವಿ, ಚರಣ್, ಅಣ್ಣಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-16-979428104

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.