ಚಿಕ್ಕಬಳ್ಳಾಪುರ: ನಗರದ ಎಸ್ಜೆಸಿಐಟಿಯ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ‘ಸಂಭ್ರಮ–2026’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣವು ಸಾಂಸ್ಕೃತಿಕ ವಾತಾವರಣದಲ್ಲಿ ಮುಳುಗಿತ್ತು. ಗಣ್ಯರು ಕಾಲೇಜು ಮುಂಭಾಗಕ್ಕೆ ಬಂದಾಗ ಅವರನ್ನು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆ ತರಲಾಯಿತು. ವೀರಗಾಸೆ, ಡೊಳ್ಳು ಕುಣಿತ, ನೃತ್ಯ, ಭರತನಾಟ್ಯ, ಜನಪದ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳು ಜರುಗಿದವು.

ಮುಖ್ಯ ಅತಿಥಿ ನಟ ದೊಡ್ಡಣ್ಣ ಮಾತನಾಡಿ, ಆದಿಚುಂಚನಗಿರಿ ಮಠವು ನಾಡಿನಲ್ಲಿ ಅಕ್ಷರ, ಅನ್ನ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಸಮಾಜ ಕಟ್ಟುವಲ್ಲಿ ಮಹತ್ವದ ಪಾತ್ರವಹಿಸಿದೆ. ನಾಡಿನಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿಯೇ ಗುರಿಯನ್ನು ಹೊಂದಬೇಕು. ಆ ಗುರಿ ಸಾಧನೆಗಾಗಿ ಮುನ್ನಡೆಯಬೇಕು. ಇದರಿಂದ ಅವರ ಜೀವನ ಉಜ್ವಲವಾಗುತ್ತದೆ. ನೀವು ಕಲಿಯುವ ವಿದ್ಯೆ, ಸಂಸ್ಕಾರ ನಿಮ್ಮ ಬದುಕನ್ನು ಬೆಳಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಾಡು, ನುಡಿಯ ಪರಂಪರೆಯನ್ನು ನಾವು ತಿಳಿದುಕೊಳ್ಳಬೇಕು. ಗುರುವನ್ನು ನಂಬಿಕೆಟ್ಟವರು ಇತಿಹಾಸದಲ್ಲಿ ಇಲ್ಲ. ಕಷ್ಟಪಡದೆಯೇ ಯಾವುದೂ ಸಿಗುವುದಿಲ್ಲ. ಮೊಬೈಲ್ ಮಿತವಾಗಿ ಬಳಸಬೇಕು. ರಾಮಾಯಣ, ಮಹಾಭಾರತ ಸೇರಿದಂತೆ ಉತ್ತಮ ಗ್ರಂಥಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದರು.

ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿ ಜೀವನವು ಮಹತ್ವದ ಘಟ್ಟ. ಈ ಅವಧಿಯು ನಿಮ್ಮ ಬದುಕನ್ನು ನೀವೇ ಉತ್ತಮವಾಗಿ ರೂಪಿಸಿಕೊಳ್ಳಲು ಇರುವ ಸುವರ್ಣಕಾಲ. ಪೋಷಕರು, ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಪೋಷಕರು ನಿಮ್ಮ ಮೇಲೆ ಅಪಾರ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುವುದರಿಂದ ನಿಮ್ಮ ಭವಿಷ್ಯವೂ ಉತ್ತಮವಾಗುತ್ತದೆ. ಪೋಷಕರು, ಸಮಾಜಕ್ಕೂ ಹೆಸರು ತರುತ್ತೀರಿ ಎಂದು ಹೇಳಿದರು.

ತಂದೆ ತಾಯಿಯನ್ನು ಗೌರವಿಸಬೇಕು. ಅವರು ನಿಮ್ಮ ಜೀವನವನ್ನು ರೂಪಿಸಲು ಕಷ್ಟಪಡುವರು ಎಂದರು.

ಪ್ರಾಂಶುಪಾಲ ಜಿ.ಟಿ.ರಾಜು ಮಾತನಾಡಿ, ದೊಡ್ಡಣ್ಣ ಅವರು ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂತಹ ಹಿರಿಯ ಕಲಾವಿದರು ನಮ್ಮ ಕಾಲೇಜಿಗೆ ಬಂದಿರುವುದು ಸಂತೋಷವನ್ನು ತಂದಿದೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಡಳಿತಾಧಿಕಾರಿ ಜಿ.ಆರ್.ರಂಗಸ್ವಾಮಿ, ಮಂಜುನಾಥ್ ಕುಮಾರ್ ಬಿ.ಎಚ್., ಜಿ.ನಾರಾಯಣ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-16-44483198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.