ಚಿಕ್ಕಬಳ್ಳಾಪುರ: ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಪರಮಾತ್ಮನನ್ನು ಯಾರು ನಂಬುತ್ತಾರೊ, ಅಂತಹವರನ್ನು ಭಗವಂತ ಎಂದಿಗೂ ಕೈಬಿಡುವುದಿಲ್ಲ. ದೇವರನ್ನು ನಂಬಬೇಕು. ಅಂತಹ ನಂಬಿಕೆಯು ಹೆಚ್ಚುವಂತೆ ಭಾಗವತವು ಮಾಡುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದರು.

ನಗರದ ಧರ್ಮಛತ್ರದ ರಸ್ತೆಯ ವಿದ್ಯಾಗಣಪತಿ ದೇವಾಲಯದಲ್ಲಿ ಹಮ್ಮಿಕೊಂಡಿರುವ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಕೈವಾರ ಯೋಗಿ ನಾರೇಯಣ ಮಠದಿಂದ ಒಂದು ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶ ಎಂದರೆ ಆತ್ಮದ ಉದ್ಧಾರ ಎಂದರು.

ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನ ಮಾಡಬಹುದು. ಆಸೆ, ಕ್ರೋಧ, ದ್ವೇಷ, ಮಾತ್ಸರ್ಯಗಳನ್ನು ಹೊಡೆದೊಡಿಸಲು ಭಾಗವತವು ಸಹಕಾರಿ ಆಗಿದೆ ಎಂದರು.

ವಚನಕಾರ ಮಂಕಾಲ ಶ್ರೀಹರಿಶರ್ಮ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ನೀಡಿದರು.

ಏಳು ದಿನಗಳ ಕಾಲ ಸಂಜೆ 6.30 ರಿಂದ 8ರವರೆಗೂ ಭಾಗವತ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮೊದಲು ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ಹಾಗೂ ಚಿಂತಲಪಲ್ಲಿ ಕಿಶೋರ್ ಕುಮಾರ್ ಶಿಷ್ಯವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಾಂತಲಾ ಅರಸ್ ತಂಡದವರಿಂದ ಪ್ರಾರ್ಥನೆ ನಡೆಯಿತು.

ಕೈವಾರ ಯೋಗಿನಾರೇಯಣ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಕೆ.ವಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್ಕಿರಣ್, ರಾಮಕೋಟಿಯ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ಉಪಾಧ್ಯಕ್ಷ ರಂಗಣ್ಣ, ಜಿ.ಎನ್.ವೆಂಕಟೇಶ್, ಗಾಯಿತ್ರಿ ಮಹಿಳಾ ಮಂಡಳಿ ಸದಸ್ಯರು, ಬಾಲಕೃಷ್ಣ ಭಜನಾ ಮಂಡಳಿಯ ಕಲಾವಿದರು, ನಿವೃತ್ತ ಶಿಕ್ಷಕ ಗುಡಿಬಂಡೆ ಗಂಗಾಧರ್, ಲಲಿತಾ ಮಾತೃ ಮಂಡಳಿ ಸದಸ್ಯರು, ರಾಮಕೋಟಿ ಸದಸ್ಯರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-16-1866170775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.