ಚಿಕ್ಕಬಳ್ಳಾಪುರ: ಪ್ರತಿ ರಾಜಕೀಯ ಪಕ್ಷದ ಸ್ಥಾಪನೆಗೂ ನಿರ್ದಿಷ್ಟ ಕಾರಣ, ಉದ್ದೇಶವಿದೆ. ಪಕ್ಷಗಳು ತಮ್ಮದೇ ಆದ ವಿಭಿನ್ನ ಕಾರ್ಯಶೈಲಿ ಹೊಂದಿರುತ್ತವೆ. ಅದೇ ರೀತಿಯಲ್ಲಿ ಬಿಜೆಪಿ ಮತ್ತು ಈ ಹಿಂದಿನ ಜನಸಂಘದ ಸ್ಥಾಪನೆಗೂ ನಿರ್ದಿಷ್ಟ ಕಾರಣವಿದೆ. ಬಿಜೆಪಿ ನಿರ್ದಿಷ್ಟ ಕಾರ್ಯಸೂಚಿ ಹೊಂದಿ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದರು.

ದೇವನಹಳ್ಳಿಯ ರೆಸಾರ್ಟ್ವೊಂದರಲ್ಲಿ ಸೋಮವಾರ ನಡೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಶಿಕ್ಷಣ ವರ್ಗದ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ಕಾಂಗ್ರೆಸ್ನ ಮಾಲೀಕರು ಯಾರು ಎಂದರೆ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೆಸರು ಹೇಳುವರು. ಜನತಾದಳದ ಮಾಲೀಕರು ಯಾರು ಎಂದರೆ ಅದನ್ನು ಬಿಡಿಸಿ ಹೇಳುವುದಿಲ್ಲ. ಆರ್ಜೆಡಿ ಮಾಲೀಕರು ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್. ಸಮಾಜವಾದಿ ಪಕ್ಷದ ಮಾಲೀಕರು ಮುಲಾಯಂ ಸಿಂಗ್, ಅಖಿಲೇಶ, ಡಿಂಪಲ್ ಯಾದವ್ ಹೀಗೆ ಆ ಪಕ್ಷಗಳಿಗೆ ಅದರದ್ದೇ ಆದ ಮಾಲೀಕರು ಇದ್ದಾರೆ ಎಂದರು.

ಆದರೆ ಬಿಜೆಪಿ ಮಾಲೀಕರು ಯಾರ? ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ನಮ್ಮ ನಾಯಕರೇ ಹೊರತು ಮಾಲೀಕರಲ್ಲ. ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿಯ ಮಾಲೀಕ ಎಂದು ಪ್ರತಿಪಾದಿಸಿದರು.

ಭಾರತ ಈಗ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿ. ಒಂದೇ ವರ್ಷದಲ್ಲಿ ಭಾರತ ಕೌಶಲ ಭರಿತ ರಾಷ್ಟ್ರವಾಗಬೇಕು ಎಂದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸಿದರು ಎಂದರು.

ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ನರೇಂದ್ರ ಮೋದಿ ಅವರು ಈಗ ವಿಶ್ವನಾಯಕ. ಇದು ಬಿಜೆಪಿಯ ಶಕ್ತಿ. ಬಿಜೆಪಿಯು ದೀನ್ ದಯಾಳ್ ಉಪಾಧ್ಯಾಯ ಅವರು ನೀಡಿದ ಏಕಾತ್ಮ ಮಾನವ ದರ್ಶನವನ್ನು ತನ್ನ ಸಿದ್ಧಾಂತವನ್ನಾಗಿಸಿಕೊಂಡಿದೆ ಎಂದು ಹೇಳಿದರು.

ನಮಗೆ ದೇಶ ಮೊದಲು. ನಂತರ ಪಕ್ಷ ಆ ನಂತರ ವ್ಯಕ್ತಿ. ಆದರೆ ಕಾಂಗ್ರೆಸ್ನಲ್ಲಿ ಇದು ಉಲ್ಟಾ. ಮೊದಲು ಆ ಪಕ್ಷದಲ್ಲಿ ಲೀಡರ್. ನಂತರ ಪಕ್ಷ. ಆ ನಂತರ ದೇಶ. ರಾಷ್ಟ್ರವಾದ ಮತ್ತು ರಾಷ್ಟ್ರೀಯತೆ ಮತ್ತು ಮೌಲ್ಯಾಧಾರಿತ ರಾಜಕೀಯ ನಮ್ಮ ಉದ್ದೇಶ ಎಂದು ಹೇಳಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಟಿಎಂಸಿಯಲ್ಲಿ ಇದ್ದ ಸುವೇಂದು ಅಧಿಕಾರಿ ಅಲ್ಲಿನ ಭ್ರಷ್ಟಾಚಾರ ರೀತಿ ನೀತಿಗೆ ಬೇಸತ್ತು ಬಿಜೆಪಿ ಸೇರಿದರು. ಈಗ ಆ ರಾಜ್ಯದಲ್ಲಿ ನಾವು ಅಧಿಕಾರ ಹಿಡಿಯುತ್ತಿದ್ದೇವೆ ಎಂದರು.

ಅದೇ ರೀತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಪಕ್ಷವು ಈ ಹಿಂದಿನಿಂದಲೂ ಅಶಕ್ತವಾಗಿ ಇರಲಿಲ್ಲ. ಆದರೆ ಡಾ.ಕೆ.ಸುಧಾಕರ್ ಬಿಜೆಪಿ ಸೇರಿದ ನಂತರ ಈ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ದೃಢವಾಗುತ್ತಿದೆ ಎಂದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ‘ಬಿಜೆಪಿ ಕಾರ್ಯಕರ್ತರ ಪಕ್ಷ. ನಾಯಕರ ಪಕ್ಷವಲ್ಲ. ಸೈದ್ಧಾಂತಿಕ ಸ್ಪಷ್ಟತೆ, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಅಂತ್ಯೋದಯ ತತ್ವದ ಆಧಾರದಲ್ಲಿ ಪಕ್ಷವನ್ನು ಕಟ್ಟಬೇಕಿದೆ’ ಎಂದು ಹೇಳಿದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಬಿಜೆಪಿಯು ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ನಮಗೆ ಸ್ಪಷ್ಟವಾದ ಕಾರ್ಯಕ್ರಮಗಳು ಇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ನಮ್ಮ ಪರಂಪರೆಯನ್ನು ಸದೃಢಗೊಳಿಸಬೇಕು ಎನ್ನುವುದು ಪಕ್ಷದ ನಿಲುವು ಎಂದರು.

ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಧೀರಜ್ ಮುನಿರಾಜು, ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಮಟ್ಟದ ಮುಖಂಡರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-18-95326960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.