ಚಿಕ್ಕಬಳ್ಳಾಪುರ: ‘ಕೆಟ್ಟ ಮನಸ್ಥಿತಿಯ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಇನ್ನು ಮುಂದೆ ಅಧಿಕೃತವಾದ ಯಾವುದೇ ಕಾರ್ಯಕ್ರಮಗಳಲ್ಲಿಯೂ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಕಟಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮಕ್ಕೆ ನನ್ನ ಹೆಸರು ಹಾಕಲಿ, ಹಾಕದೆಯೇ ಇರಲಿ, ಕರೆಯಲಿ, ಬಿಡಲಿ ನನಗೆ 8.50 ಲಕ್ಷ ಜನರು ಆಶೀರ್ವಾದ ಮಾಡಿದ್ದಾರೆ. ಜಿಲ್ಲೆಯ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದರು.

ನಾನು ಸಚಿವನಾಗಿದ್ದ ವೇಳೆ ಜಿಲ್ಲೆಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಕ್ರಮವಹಿಸಿದ್ದೆ. ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅವುಗಳನ್ನು ಉದ್ಘಾಟಿಸಿದ್ದಾರೆ. ನಾನು ಏನು ಅಭಿವೃದ್ಧಿ ಮಾಡಿದ್ದೆ ಎನ್ನುವುದನ್ನು ಕಣ್ಣು ಬಿಟ್ಟು ನೋಡಲಿ ಎಂದರು.

ಅಲ್ಪಸಂಖ್ಯಾತರು ಬಿಜೆಪಿಗೆ ವಿರುದ್ಧ ಎನ್ನುತ್ತಾರೆ. ಆದರೆ ಚಿಂತಾಮಣಿಯ ಮುರುಗಮಲ್ಲದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿಯೇ ಮಾನಸಿಕ ಆರೋಗ್ಯ ಕೇಂದ್ರ ಮಾಡಿಸಿದೆ ಎಂದು ಹೇಳಿದರು.
.ಸುಧಾಕರ್– ಪ್ರದೀಪ್ ನಡುವೆ ಜಿದ್ದು: ಶಿಷ್ಟಾಚಾರದ ಅಡಕತ್ತರಿಯಲ್ಲಿ ಅಧಿಕಾರಿಗಳು.ಚಿಕ್ಕಬಳ್ಳಾಪುರ: ಸಂಸದ ಸುಧಾಕರ್ಗಿಲ್ಲ ಆಹ್ವಾನ; ‘ನಂದಿ’ಯಲ್ಲಿ ಆಕ್ರೋಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.