ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ನಾಲ್ಕು ಬಜೆಟ್ಗಳನ್ನು ಮಂಡಿಸಿದ್ದಾರೆ.

2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 2023ರ ಜುಲೈ 7ರಂದು ಬಜೆಟ್ ಮಂಡಿಸಿದ್ದರು. 2024ರ ಫೆ.16, 2026ರ ಮಾ.17 ಮತ್ತು 2026ರ ಮಾ.6ರಂದು ಬಜೆಟ್ ಮಂಡಿಸಿದ್ದಾರೆ.

ಈ ನಾಲ್ಕು ಬಜೆಟ್ಗಳಲ್ಲಿ ಜಿಲ್ಲೆಗೆ ಘೋಷಣೆಯಾದ ಯೋಜನೆಗಳಲ್ಲಿ ಎಲ್ಲ ಯೋಜನೆಗಳು ಕಾರ್ಯಗತವಾಗಿವೇ ಎಂದು ಗಮನಿಸಿದರೆ ಬಹಳಷ್ಟು ಯೋಜನೆಗಳು ಇಂದಿಗೂ ಕಾರ್ಯಗತವೇ ಆಗಿಲ್ಲ.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರುತ್ತಿ
ದ್ದಂತೆ ಜುಲೈ 7ರಂದು ಬಜೆಟ್ ಮಂಡಿಸಿದರು. ಆ ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣ ಗೊಳಿಸಲು ಭೂಮಿ ಸ್ವಾಧೀನಕ್ಕೆ ಕ್ರಮ, ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ನಂದಿ
ಬೆಟ್ಟದ ಭೋಗ ನಂದೀಶ್ವರ ದೇವಸ್ಥಾನ ಬಳಿ ‘3ಡಿ ಪ್ರಾಜೆಕ್ಷನ್ ಮಲ್ಟಿಮೀಡಿಯಾ ಸೌಂಡ್ ಮತ್ತು ಲೈಟ್ ಶೋ ಸೌಲಭ್ಯ... ಎಂದು ಘೋಷಿಸಿದ್ದರು. ಆದರೆ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆಗಳು ಆಮೆಗತಿಯಲ್ಲಿದೆ.

ಪ್ರತಿ ಬಾರಿಯ ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆಯು ಪ್ರಸ್ತಾಪವಾಗುತ್ತಿದ್ದರೂ ಜಿಲ್ಲೆಗೆ ಮಾತ್ರ ನೀರು ದೊರೆತಿಲ್ಲ.

2024ರ ಬಜೆಟ್ನಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು ಆರು ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣಕ್ಕೆ ₹ 350 ಕೋಟಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಬಯೊ ಸಿಎನ್ಜಿ ಘಟಕ ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಪ್ರಕಟಿಸಿದ್ದ ಯೋಜನೆಗಳೂ ಜಾರಿಯಾಗಿಲ್ಲ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೇಳೂರಿನಲ್ಲಿ ತಾಲ್ಲೂಕು ಆಡಳಿತ ಭವನ ಪ್ರಜಾಸೌಧಗಳು ನಿರ್ಮಾಣವಾಗಿಲ್ಲ. 2025ರ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎರಡೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರಜಾಸೌಧ ನಿರ್ಮಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಬಜೆಟ್ನಲ್ಲಿ ಘೋಷಣೆಯಾಗಿ ವರ್ಷವಾದರೂ ಚೇಳೂರಿನಲ್ಲಿ ಪ್ರಜಾಸೌಧ ಕಾಮಗಾರಿಗಳು ಆರಂಭವಾಗಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ
ದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್
ಹೂವಿನ ಮಾರುಕಟ್ಟೆ ಸ್ಥಾಪನೆ, ನಂದಿಬೆಟ್ಟದ ಬಳಿಯ ಕೋಡುಗುರ್ಕಿ ಬಳಿ ಭಾರತೀಯ ಮೀಸಲು ಪೊಲೀಸ್ ಪಡೆಯ ಕೇಂದ್ರ ಸ್ಥಾಪನೆ, ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣದ ಬಗ್ಗೆ ಬಜೆಟ್ನಲ್ಲಿ
ಪ್ರಸ್ತಾಪಿಸಲಾಗಿತ್ತು. ಈ ಯೋಜನೆಗಳೂ ಸಹ ಕಾರ್ಯಾರಂಭವಾಗಿಲ್ಲ.

ಹೀಗೆ ಜಿಲ್ಲೆಗೆ ಸಿದ್ದರಾಮಯ್ಯ ಅವರು ಕಳೆದ ಮೂರು ಬಜೆಟ್ಗಳಲ್ಲಿ ನೀಡಿದ ಕೊಡುಗೆಗಳಲ್ಲಿ ಕೆಲವು ಯೋಜನೆಗಳು ಕಾರ್ಯಗತವೇ ಆಗಿಲ್ಲ.

‘ದೊರೆಯದ ನೀರಿನ ಆಸರೆ’

ಎಚ್.ಎನ್.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣ ಕೃಷ್ಣಾ ನದಿ ನೀರು ಜಿಲ್ಲೆಗೆ ಹರಿಸಬೇಕು ಮತ್ತು ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸುವ ಕಾಮಗಾರಿಗೆ ವೇಗ ನೀಡಬೇಕು ಎನ್ನುವುದು ನೀರಾವರಿ ಹೋರಾಟಗಾರರು ಮತ್ತು ಜನಸಾಮಾನ್ಯರ ಆಗ್ರಹ. ಆದರೆ ಕಳೆದ ಮೂರು ಬಜೆಟ್ನಲ್ಲಿ ಜಿಲ್ಲೆಗೆ ನೀರಾವರಿ ವಿಚಾರವಾಗಿ ನೀಡಿದ್ದೇನು ಎನ್ನುವುದನ್ನು ಗಮನಿಸಿದರೆ ನಿರಾಸೆ ಎದ್ದು ಕಾಣುತ್ತದೆ. ಬಾಯಾರಿರುವ ಜಿಲ್ಲೆಗೆ ಮುಖ್ಯಮಂತ್ರಿ ಗುಟುಕು ನೀರಿನ ಭರವಸೆ ಸಹ ನೀಡಿಲ್ಲ.

3 ಬಜೆಟ್ಗಳಲ್ಲಿ ವ್ಯಾಲಿಯದ್ದೇ ಜಪ

ಪ್ರಸಕ್ತ ಬಜೆಟ್ನಲ್ಲಿ ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ₹ 237 ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಈ ಹಿಂದಿನ ಬಜೆಟ್ಗಳಲ್ಲಿಯೂ ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಗಳ ಬಗ್ಗೆಯೇ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. 2025ರ ಬಜೆಟ್ನಲ್ಲಿ ₹ 70 ಕೋಟಿ ಮೊತ್ತದಲ್ಲಿ ಎಚ್.ಎನ್.ವ್ಯಾಲಿ ಎರಡನೇ ಹಂತದ ಯೋಜನೆಯಡಿ 24 ಕೆರೆ ಭರ್ತಿ ಮಾಡುವುದಾಗಿ ಪ್ರಕಟಿಸಲಾಗಿತ್ತು. 2023ರ ಬಜೆಟ್ನಲ್ಲಿ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳ ಎರಡನೇ ಹಂತದಲ್ಲಿ ₹ 529 ಕೋಟಿ ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 296 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.