ಚಿಕ್ಕಬಳ್ಳಾಪುರ: ಕಾಲುವೆ ಉರುಳಿದ ಆಂಧ್ರ ಸಾರಿಗೆ ಬಸ್‌; ತಪ್ಪಿದ ಜೀವಹಾನಿ 

7
ಚದುಲಪುರ ಕ್ರಾಸ್‌ ಬಳಿ ಪರಿವೀಕ್ಷಣಾ ಮಂದಿರದ ಎದುರಿನ ದೊಡ್ಡ ಕಾಲುವೆಯಲ್ಲಿ ಪಲ್ಟಿ,

ಚಿಕ್ಕಬಳ್ಳಾಪುರ: ಕಾಲುವೆ ಉರುಳಿದ ಆಂಧ್ರ ಸಾರಿಗೆ ಬಸ್‌; ತಪ್ಪಿದ ಜೀವಹಾನಿ 

Published:
Updated:

ಚಿಕ್ಕಬಳ್ಳಾಪುರ: ನಗರ ಹೊರವಲಯದ ಚದುಲಪುರ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ಮಂಗಳವಾರ ಮಧ್ಯಾಹ್ನ ಆಂಧ್ರಪ್ರದೇಶದ ಸಾರಿಗೆ ಬಸ್‌ವೊಂದು ಕಾಲುವೆಗೆ ಉರುಳಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದವರಿಗೆ ಪ್ರಾಣಹಾನಿಯಾಗಲಿ, ಗಾಯಗಳಾಗಲಿ ಆಗಿಲ್ಲ. 

ಬೆಂಗಳೂರಿನಿಂದ ಆಂಧ್ರಪ್ರದೇಶದತ್ತ ತೆರಳುತ್ತಿದ್ದ ಬಸ್ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚದುಲಪುರ ಕ್ರಾಸ್‌ ಬಳಿ ಏಕಾಏಕಿ ಪರಿವೀಕ್ಷಣಾ ಮಂದಿರದ ಎದುರಿನ ದೊಡ್ಡ ಕಾಲುವೆಗೆ ಉರುಳಿದೆ. ಈ ವೇಳೆ ಬಸ್‌ನಲ್ಲಿ ಚಾಲಕ, ನಿರ್ವಾಹಕ ಮತ್ತು 16 ಪ್ರಯಾಣಿಕರಿದ್ದರು. ಬಸ್‌ ವೇಗ ಕಡಿಮೆ ಇದ್ದ ಕಾರಣಕ್ಕೆ ದೊಡ್ಡ ಅನಾಹುತ ತಪ್ಪಿದೆ.

ಯಾವ ಕಾರಣದಿಂದಾಗಿ ಬಸ್‌ ಕಾಲುವೆಗೆ ಉರುಳಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್‌ ಪರಿಶೀಲಿಸಿದ ಬಳಿಕವಷ್ಟೇ ನಿಖರವಾಗಿ ಹೇಳಲು ಸಾಧ್ಯ ಎಂದು ಪೊಲೀಸರು ತಿಳಿಸಿದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !