ಚಿಕ್ಕಬಳ್ಳಾಪುರ: ದೇಶದಾದ್ಯಂತ ಜನಗಣತಿ–2027 ಎರಡು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದ ‘ಮನೆ ಗಣತಿ’ ಕಾರ್ಯ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿರುವ 4,79,270 ಮನೆಗಳನ್ನು ಗಣತಿ ಮಾಡಿದ್ದು, ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ.

ಮೊದಲ ಹಂತದಲ್ಲಿ ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆದಿದೆ. ಎರಡನೇ ಹಂತದ ಜನಗಣತಿಯು 2027ರ ಫೆಬ್ರವರಿಯಲ್ಲಿ ನಡೆಯಲಿದೆ.

3092 ಮನೆಪಟ್ಟಿ ಬ್ಲಾಕ್ (ಎಚ್.ಎಲ್.ಬಿ)ಗಳಲ್ಲಿ ಒಟ್ಟು 4,79,270 ಮನೆಗಳ ಗಣತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 150 ರಿಂದ 200 ಮನೆಗಳನ್ನು ಒಳಗೊಳ್ಳುವಂತೆ ಈ ಬ್ಲಾಕ್ಗಳು ಇದ್ದವು. ಈ ಮನೆ ಗಣತಿಯನ್ನು ಒಟ್ಟು 3,18,500 ಕಟ್ಟಡಗಳಲ್ಲಿ ನಡೆಸಲಾಗಿದೆ. ಕೆಲವು ಕಟ್ಟಡಗಳಲ್ಲಿ ಎರಡು ಮನೆಯಿಂದ ಹಿಡಿದು 10 ಮನೆಗಳು ಇವೆ. ಗಣತಿ ಕಾರ್ಯದಿಂದ ಜಿಲ್ಲೆಯಲ್ಲಿ 12,80,830 ಜನಸಂಖ್ಯೆ ಇರುವುದು ದಾಖಲಾಗಿದೆ. 600 ಬೀಗ ಹಾಕಿದ ಮನೆಗಳು ಕಂಡುಬಂದಿವೆ. ಬೀಗ ಹಾಕಿದ ಮನೆಗಳನ್ನು ಪುನರ್ ಗಣತಿ ಸಹ ನಡೆಯಲಿದೆ.

ಚಿಕ್ಕಬಳ್ಳಾಪುರದಲ್ಲಿ ಜನ ಗಣತಿ ಕಾರ್ಯದ ಮೊದಲನೇ ಹಂತವಾಗಿ ಸ್ವಯಂ ಜನಗಣತಿ ಕಾರ್ಯವು ಏ.1ರಿಂದ 15ರವರೆಗೆ ನಡೆದಿತ್ತು. ತಮ್ಮ ಮನೆ ಮತ್ತು ವೈಯಕ್ತಿಕ ವಿವರಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿದವರ ಸಂಖ್ಯೆ 5,355. ನಂತರ ಗಣತಿಗೆ ನೇಮಕವಾಗಿರುವ ಗಣತಿದಾರರು ಮನೆಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.

ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯಕ್ಕೆ 2,537 ಗಣತಿದಾರರರನ್ನು ನೇಮಿಸಲಾಗಿತ್ತು. 442 ಮಂದಿ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ.

ಜನಗಣತಿ ಸಂವಿಧಾನದತ್ತ ಕಾರ್ಯ. ಜನಗಣತಿ ಕಾರ್ಯಕ್ಕೆ ನಿಯೋಜನೆ ಆಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜನಗಣತಿಯ ಅವಧಿಯಲ್ಲಿ ರಜೆಯ ಅವಕಾಶವೇ ಇರುವುದಿಲ್ಲ. ಇದರ ಮಹತ್ವ ಅರಿತು ನಿಯೋಜಿತರೆಲ್ಲರೂ ಕರ್ತವ್ಯ ನಿರ್ವಹಿಸಬೇಕು. ತಮಗೆ ನಿಯೋಜನೆ ಆಗಿರುವ ಕೆಲಸವನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಜಿಲ್ಲೆಯ ಯಾವ ಬ್ಲಾಕ್ ಗಳಲ್ಲಿ ಜನಗಣತಿ ಕಾರ್ಯ ಕುಂಠಿತವಾಗಿದೆ, ಆ ಬಗ್ಗೆ ಸಮಗ್ರ ಮಾಹಿತಿ ಪಡೆದು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮಕ್ಕೆ ವರದಿ ಮಾಡಬೇಕು ಎಂದು ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಆ ಪರಿಣಾಮ ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯ ಪರಿಣಾಮಕಾರಿಯಾಗಿ ನಡೆದಿತ್ತು.

ಗಣತಿದಾರರು ಸೆನ್ಸಸ್ ಮ್ಯಾನೇಜ್ಮೆಂಟ್ ಅಂಡ್ ಮಾನಿಟರಿಂಗ್ ಸಿಸ್ಟಂ (ಸಿ.ಎಂ.ಎಂ.ಎಸ್) ತಂತ್ರಾಂಶದ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಮೇಲ್ವಿಚಾರಕರು ಪರಿಶೀಲಿಸಿ, ತಮ್ಮ ಲಾಗಿನ್ ಮೂಲಕ ಅಂತಿಮಗೊಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಗಣತಿದಾರರಿಗೆ ನಿಖರ ಮತ್ತು ಸಂಪೂರ್ಣ ಮಾಹಿತಿ ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳಿಂದ ಜಾಗೃತಿ ಮೂಡಿಸಲಾಗಿತ್ತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಜನಗಣತಿ ಸಮಿತಿ ರಚಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿವಿಧ ಹಂತಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ‘ಚಾರ್ಜ್ ಅಧಿಕಾರಿ’ಗಳನ್ನಾಗಿ ನೇಮಿಸಲಾಗಿತ್ತು.

ತಾಲ್ಲೂಕು ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಭಾಗಕ್ಕೆ ಪ್ರತ್ಯೇಕವಾಗಿ ‘ಮಾಸ್ಟರ್ ಟ್ರೈನರ್’ ಕೂಡ ನಿಯೋಜಿಸಲಾಗಿತ್ತು. ಗಣತಿದಾರರಾಗಿ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-276053627

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.