ಚಿಕ್ಕಬಳ್ಳಾಪುರ: ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರೇಸಂದ್ರ ಠಾಣೆ ಪೊಲೀಸರು ರಾಜಸ್ಥಾನದ 22 ವರ್ಷದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನೂ ಸುಪರ್ದಿಗೆ ಪಡೆದಿದ್ದಾರೆ.

ತಾಲ್ಲೂಕಿನ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ಏ.30ರಂದು ಮಮತಾ ಎಂಬುವವರ ಮಾಂಗಲ್ಯದ ಸರವನ್ನು ಇಬ್ಬರು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಮಮತಾ ಪೆರೇಸಂದ್ರ ಠಾಣೆಗೆ ದೂರು ನೀಡಿದ್ದರು.

ಖುದ್ದು ಎಸ್ಪಿ ಕುಶಾಲ್ ಚೌಕ್ಸೆ ಅವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಗುಡಿಬಂಡೆ ಸಿಪಿಐ ಮುನಿಕೃಷ್ಣ ಡಿ.ಎಚ್ ನೇತೃತ್ವದ ತಂಡವನ್ನು ತನಿಖೆಗೆ ರಚಿಸಿದ್ದರು. ತಂಡವು 300ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿತ್ತು.

ಕಳ್ಳರು ಈ ಹಿಂದೆ ಕೋಲಾರದಲ್ಲಿ ಬೈಕ್ ಕಳ್ಳತನ ಮಾಡಿದ್ದರು. ಆ ಬೈಕ್ ಬಳಸಿ ಸರಗಳ್ಳತನ ಮಾಡಿದ್ದರು. ತಮ್ಮ ಕಾರಿನಲ್ಲಿ ರಾಜಸ್ಥಾನಕ್ಕೆ ತೆರಳಿದ್ದರು. ಪೊಲೀಸರು ಜೈಪುರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜೈಪುರ ಜಿಲ್ಲೆಯ ಅಕೀಪುರ ಅಂಚೆಯ ಹರ್ಮಾಡಾದ ಆಟಿಕೆಗಳ ವ್ಯಾಪಾರಿ ವಿಕ್ಕಿ ಬಗಾರಿಯಾ (22) ಬಂಧಿತ. ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕಿ ಮತ್ತು ಬಾಲಕನನ್ನು ಪತ್ತೆ ಮಾಡಿದ ಪೊಲೀಸರು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿದ್ದಾರೆ.

ಆರೋಪಿಯಿಂದ ₹ 4.50 ಲಕ್ಷ ಮೌಲ್ಯದ 30 ಗ್ರಾಂ ತೂಕದ ಮಾಂಗಲ್ಯದ ಸರ, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ವಶಕ್ಕೆ ಪಡೆಯಲಾಗಿದೆ.

ಪಿಎಸ್ಐ ಗುಣವತಿ, ರಮೇಶ್ ಕೆ., ಸಿಬ್ಬಂದಿ ಅರುಣ್, ಮಾರುತಿ, ಅನಸೂಯಮ್ಮ, ಮೋಹನ್ ಕುಮಾರ್, ಮಂಜುನಾಥ್, ಮಂಜುನಾಯ್ಡು, ಮುರುಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-16-1186764621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.