ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು ಶಾಲೆಯಲ್ಲಿ ಮಾದರಿ ಮೇಷ್ಟ್ರು: ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷಕ

Last Updated 5 ಆಗಸ್ಟ್ 2022, 3:47 IST
ಅಕ್ಷರ ಗಾತ್ರ

ಚೇಳೂರು: ಗಬ್ಬು ನಾರುತ್ತಿರುವ ಶಾಲೆಯ ಶೌಚಾಲಯವನ್ನು ಮುಖ್ಯ ಶಿಕ್ಷಕ ಖುದ್ದು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಪಾಠ
ಮಾಡಿದ್ದಾರೆ.

ಇಂತಹ ಮಾದರಿ ಶಿಕ್ಷಕ ಇರುವುದು ಚೇಳೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮುಖ್ಯ ಶಿಕ್ಷಕ ಐ.ವಿ.ಕೃಷ್ಣಾರೆಡ್ಡಿ ಅವರು ಆಗ್ಗಾಗೆ ತಮ್ಮ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ಶಾಲೆಯ ಸ್ವಚ್ಛತಾ ರಾಯಬಾರಿ ಎನ್ನಿಸಿದ್ದಾರೆ.

ಕೃಷ್ಣಾರೆಡ್ಡಿ ಅವರು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬ್ರಷ್, ಪೊರಕೆ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಸಾವಿರಾರು ಮಂದಿ ಶಿಕ್ಷಕರ ನಡೆಯನ್ನು ಶ್ಲಾಘಿಸಿದ್ದಾರೆ.

ವರ್ಷದ ಹಿಂದೆ ರಜಾ ದಿನಗಳಲ್ಲಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಕಿಡಿಗೇಡಿಗಳು ಬಾಗಿಲು ಮುರಿದು ಹಾಳು ಮಾಡಿದ್ದರು. ಕಸ, ಕಡ್ಡಿ ಮತ್ತು ಪ್ಲಾಸ್ಟಿಕ್‌ನಿಂದ ಶೌಚಾಲಯ ಮುಚ್ಚಿ ಹೋಗಿತ್ತು. ತ್ಯಾಜ್ಯವನ್ನು ವಿಲೇವಾರಿ ಮಾಡಿ, ಶುಚಿಗೊಳಿಸಿ ವಿದ್ಯಾರ್ಥಿಗಳು ಶೌಚಾಲಯ ಬಳಸಲು ಅನುಕೂಲ ಆಗುವಂತೆಮಾಡಿದ್ದಾರೆ.ಈಮೂಲಕ ಗ್ರಾಮಸ್ಥರ ಗಮನವನ್ನೂ ಸೆಳೆದಿದ್ದಾರೆ.

ಯಾವುದೇ ಮುಜುಗರ ಇಲ್ಲದೆ ಗಬ್ಬುನಾರುತ್ತಿರುವ ಶೌಚಾಲಯ ಸ್ವಚ್ಛತೆ ಮಾಡುತ್ತಿರುವುದು ಪೋಷಕರ ಮೆಚ್ಚುಗೆಗೂ
ಪಾತ್ರರಾಗಿದ್ದಾರೆ.

ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸುವ ಎಷ್ಟೋ ಶಿಕ್ಷಕರ ನಡುವೆ ಇಲ್ಲಿ ಮುಖ್ಯ ಶಿಕ್ಷಕರೇ ಶೌಚಾಲಯ ಶುಚಿಗೊಳಿರುವುದು ಮಾದರಿ ಕಾರ್ಯ. ಇಂಥ ಶಿಕ್ಷಕರನ್ನು ಎಲ್ಲೂ ನೋಡಿಲ್ಲ ಎನ್ನುತ್ತಾರೆ ಚೇಳೂರು ಗ್ರಾಮ ಪಂಚಾಯಿತಿ ಸದಸ್ಯ ಬಿಂಗಾಪ್ಪಗಾರಿ ಮಲ್ಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT