ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆ ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಪ್ರಭು, ಕಡತಗಳ ಸ್ಥಿತಿ, ಇ–ಖಾತೆಗಳ ವಿಲೇವಾರಿಯಲ್ಲಿನ ಲೋಪ, ನಾಗರಿಕರಿಂದ ಬಂದ ಅರ್ಜಿಗಳಿಗೆ ಸ್ವೀಕೃತಿ ನೀಡದಿರುವುದು... ಹೀಗೆ ವಿವಿಧ ಅವ್ಯವಸ್ಥೆಗಳನ್ನು ಕಂಡು ಕೆಂಡಾಮಂಡಲರಾದರು.

ಸುಮಾರು ಎರಡು ತಾಸು ನಗರಸಭೆ ಕಚೇರಿಯಲ್ಲಿಯೇ ಬೀಡುಬಿಟ್ಟ ಅವರು ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಕಡತಪರಿಶೀಲಿಸಿದರು. ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅವರ ಅನಿರೀಕ್ಷಿತ ಭೇಟಿಗೆ ಸಿಬ್ಬಂದಿ ಮತ್ತು ಅಧಿಕಾರಿಗಳು ತಡಬಡಾಯಿಸಿದರು. ಉತ್ತರ ನೀಡಲು ತಿಣುಕಾಡಿದರು.

ನಗರಸಭೆಯಲ್ಲಿ ಆಡಳಿತ ಲೋಪಗಳನ್ನು ಜಿಲ್ಲಾಧಿಕಾರಿ ಸಮಗ್ರವಾಗಿ ಪಟ್ಟಿ ಮಾಡಿದ್ದಾರೆ. ಅವರು ದಾಖಲೆಗಳನ್ನು ಪರಿಶೀಲಿಸಿರುವುದು ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗೆ ಆಂತಕ ಉಂಟಾಗಿದೆ. ನಗರಸಭೆಯ ಕೆಲವು ವಿಭಾಗಗಳ ಸಿಬ್ಬಂದಿಯ ಮೇಲೆ ಅಮಾನತಿನ ತೂಗುಗತ್ತಿಯೂ ನೇತಾಡುತ್ತಿದೆ ಎನ್ನುತ್ತವೆ ಜಿಲ್ಲಾಡಳಿತ ಮೂಲಗಳು.

ಈ ಹಿಂದೆಯೂ ನಗರಸಭೆಗೆ ಜಿಲ್ಲಾಧಿಕಾರಿ ಭೇಟಿ ನೀಡುತ್ತಿದ್ದರು. ಇದು ಅಧಿಕೃತ ಭೇಟಿ ಆಗಿರುತ್ತಿತ್ತು. ಆದರೆ ಗುರುವಾರ ಏಕಾಏಕಿ ಜಿಲ್ಲಾಧಿಕಾರಿ ಬರುತ್ತಿದ್ದಂತೆ ಸಿಬ್ಬಂದಿ ಮತ್ತು ಅಧಿಕಾರಿಗಳು ಅವಕ್ಕಾದರು. ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಚೇರಿಗೆ ಗೈರಾಗಿದ್ದ ಅಧಿಕಾರಿಗೆ ಹಾಜರಾತಿ ನೀಡಿರುವ ವಿಚಾರ, ಸಾರ್ವಜನಿಕರ ಅರ್ಜಿಗಳಿಗೆ ಸ್ವೀಕೃತಿ ನೀಡದಿರುವುದು ಹಾಗೂ ದಾಖಲೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಇದೇನ್ ಧರ್ಮಛತ್ರನಾ’ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ಜನರ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಇ–ಖಾತೆ ಮತ್ತು ನಾಗರಿಕರಿಂದ ಬಂದ ದೂರು ಮತ್ತಿತರ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೇಳಿದರು. ಸ್ಪಷ್ಟಉತ್ತರ ದೊರೆಯದಿದ್ದಾಗ, ‘ನಾನು ಇಲ್ಲೇಕುಳಿತಿರುವೇ, ಎಷ್ಟು ದಿನಗಳಿಂದ ಎಷ್ಟು ಅರ್ಜಿಗಳು ಬಾಕಿ ಇವೆ. ಅವುಗಳ ಸಮಗ್ರ ಮಾಹಿತಿ ಕೊಡಿ’ ಎಂದರು.

ನಾನಾ ಕಾರಣ ಹೇಳಲು ಸಿಬ್ಬಂದಿ ಮುಂದಾದಾಗ, ‘ಅರ್ಜಿಗಳನ್ನು ಹರಿದು ಹಾಕಿದ್ದೀರಾ’ ಎಂದರು. ಕಚೇರಿಯಲ್ಲಿ ಹಾಜರಿರದಿದ್ದರೂ ಕೆಲವು ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುವುದು ಗಮನಕ್ಕೆ ಬಂದಿತು. ‘ಅಧಿಕೃತವಾಗಿ ರಜೆ ಕೊಡಿ. ರಜೆಯಲ್ಲಿ ಇದ್ದಾರೆ ಎಂದು ಹೇಳುವಿರಿ ಆದರೆ ಇಲ್ಲಿ ಸಹಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ನಗರಸಭೆಯಲ್ಲಿ ಕೆಲಸ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಗೆ ದೂರುಗಳು ಬರುತ್ತಿವೆ. ಇ–ಸ್ವತ್ತು, ಕಟ್ಟಡ ಪರವಾನಗಿ ಸೇರಿ ಯಾವ ಕೆಲಸಗಳು ಆಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ’ ಎಂದರು.

ನಾಗರಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸ್ವೀಕೃತಿ ಸಂಖ್ಯೆ ನೀಡಬೇಕು. ಒಂದು ವೇಳೆ ಆ ಕೆಲಸಗಳು ಸಾಧ್ಯವಾಗದಿದ್ದರೆ ವಿವರಣಾತ್ಮಕ ಹಿಂಬರಹ ನೀಡಬೇಕು. ಆಡಳಿತ ವ್ಯವಸ್ಥೆ ಸ್ಪಷ್ಟವಾಗಿ ಇರಬೇಕು ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಈ ವೇಳೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-16-1130908081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.