ಚಿಕ್ಕಬಳ್ಳಾಪುರ: ಹಸಿರು ಸ್ವಯಂ ಸೇವಾ ಸಂಸ್ಥೆಯಿಂದ ‘ಸ್ವಚ್ಛ ಸುಂದರ ಅಭಿನಯ’ದಡಿ ಈಚೆಗೆ ನಗರದ ಕೋರ್ಟ್ ರಸ್ತೆಯ ಕಸದ ತಾಣವನ್ನು ಸುಂದರಗೊಳಿಸಲಾಯಿತು.

ಇಲ್ಲಿ ಜನರು ಮೂತ್ರವಿಸರ್ಜಿಸುತ್ತಿದ್ದರು. ಗೋಡೆಗಳ ಬಣ್ಣವೂ ಹಾಳಾಗಿತ್ತು. ಗೋಡೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು, ಚಿತ್ರಗಳನ್ನು ಬಿಡಿಸಲಾಯಿತು.

ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರ ಜೊತೆ ಎಸ್ಜೆಸಿಐಟಿ ವಿದ್ಯಾರ್ಥಿಗಳು, ಸಿಟಿಜನ್ ಬ್ಯಾಡ್ಮಿಂಟನ್ ಕ್ಲಬ್ ಸದಸ್ಯರು ಸಹ ಈ ಕಾರ್ಯಕ್ಕೆ ಸಾಥ್ ನೀಡಿದರು.

ಸಂಸ್ಥೆಯ ಸ್ವಯಂಸೇವಕರು ಗೋಡೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಬಣ್ಣ ಬಳಿದು, ಆಕರ್ಷಕ ವರ್ಣರಂಜಿತ ಚಿತ್ರಗಳನ್ನು ಬಿಡಿಸಿದರು. ಆ ಪ್ರದೇಶಕ್ಕೆ ಹೊಸ ರೂಪ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಹಸಿರು ಸ್ವಯಂ ಸೇವಾ ಸಂಸ್ಥೆಯು ಸ್ವಚ್ಛ ಸುಂದರ ಅಭಿಯಾನ ನಡೆಸುತ್ತಿದೆ. ಸೌಂದರ್ಯ ಮತ್ತು ಸ್ವಚ್ಛತೆಗೆ ಒತ್ತು ನೀಡುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಗರದ ಪ್ರಮುಖ ಜನಸಂದಣಿ ಪ್ರದೇಶವಾದ ಕೋರ್ಟ್ ರಸ್ತೆಯಲ್ಲಿ ಸಾರ್ವಜನಿಕರು ಮೂತ್ರವಿಸರ್ಜಿಸುತ್ತಿದ್ದರು. ಗೋಡೆಗಳು ಅನೈರ್ಮಲ್ಯಗೊಂಡಿದ್ದವು. ಪಾಳುಬಿದ್ದ ಗೋಡೆಯ ಮೇಲೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಅಂದವನ್ನು ಹೆಚ್ಚಿಸಲಾಗಿದೆ ಎಂದು ಹಸಿರು ಸೇವಾ ಸಂಸ್ಥೆಯು ತಿಳಿಸಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಯಂ ಸೇವಕರನ್ನು ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-16-1104258154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.