ಚಿಕ್ಕಬಳ್ಳಾಪುರ: ‘ನಾವು ನಮ್ಮ ಚುನಾವಣೆಗಳಲ್ಲಿ ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಈ ಬಗ್ಗೆ ಭೋಗ ನಂದೀಶ್ವರ ದೇಗುಲದಲ್ಲಿ ಆಣೆಗೆ ಸಿದ್ಧ. ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ ಅವರು ದೇಗುಲಕ್ಕೆ ಬರಲಿ’ ಎಂದು ಕಾಂಗ್ರೆಸ್ ಮುಖಂಡರು ಸವಾಲು ಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದ ಸಂಸದ ಡಾ.ಕೆ.ಸುಧಾಕರ್, ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಅವರ ಬಗ್ಗೆ ನೀಡಿದ್ದ ಹೇಳಿಕೆ ವಿರೋಧಿಸಿ ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಮಾಧ್ಯಮಗೋಷ್ಠಿ ನಡೆಸಿದ್ದರು. ಅಲ್ಲಿ ಸುಧಾಕರ್ ಡಿಸಿಸಿ ಬ್ಯಾಂಕ್ ಮತ್ತು ಚಿಮುಲ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ ದೂರಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಮುಲ್ ಎನ್.ಸಿ. ವೆಂಕಟೇಶ್ ಮಾತನಾಡಿ, ‘ನಾನು ಕೋಚಿಮುಲ್ ನಿರ್ದೇಶಕನಾಗಿ ರೈತರ ಪರ ಕೆಲಸ ಮಾಡಿದ್ದೇನೆ. ಆ ಕೆಲಸಕ್ಕೆ ಕೂಲಿ ಕೊಡಿ ಎಂದು ಚುನಾವಣೆ ಎದುರಿಸಿದೆ. ಡೆಲಿಗೇಟ್ಗಳು ಗೆಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸಹಕಾರದಿಂದ ಗೆದ್ದಿದ್ದೇನೆ. ಇದೇ ರೀತಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮೋಹನ್ ರೆಡ್ಡಿ ಅವರೂ ಮತದಾರರ ಬೆಂಬಲ ಹಾಗೂ ಸಚಿವರ ಸಹಕಾರದಿಂದಲೇ ಗೆದ್ದಿದ್ದಾರೆ. ಇತರರ ಸಹಾಯದಿಂದ ಗೆಲುವು ಸಾಧಿಸಿಲ್ಲ’ ಎಂದು ಹೇಳಿದರು.

‘ರಾಮಣ್ಣ ಅವರು ಒಳ ಒಪ್ಪಂದದಿಂದ ಗೆದ್ದಿದ್ದಾರೆ ಎಂಬ ಹೇಳಿಕೆ ತಪ್ಪು. ನಿಮ್ಮ ಪಕ್ಷಗಳ ವಿಚಾರ ಇದ್ದರೆ ಆ ಬಗ್ಗೆ ಮಾತನಾಡಿ. ಆದರೆ ವೈಯಕ್ತಿಕ ವಿಚಾರಗಳ ಬಗ್ಗೆ ಏಕೆ ಮಾತನಾಡಬೇಕು. ನಾನು ಯಾರ ಜೊತೆಯೂ ಚಿಮುಲ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾನು ಡಾ.ಕೆ.ಸುಧಾಕರ್ ಅವರ ಜೊತೆ ಕೈ ಜೋಡಿಸಿಲ್ಲ. ಭೋಗ ನಂದೀಶ್ವರ ದೇಗುಲದಲ್ಲಿ ಪ್ರಮಾಣ ಮಾಡುತ್ತೇವೆ’ ಎಂದರು.

‘ಶಿಡ್ಲಘಟ್ಟ ಶಾಸಕರು ಉಸ್ತುವಾರಿ ಸಚಿವರಿಗೆ ಕರೆ ಮಾಡಿ ಮೋಹನ ರೆಡ್ಡಿ, ಡಾ.ಕೆ. ಸುಧಾಕರ್ ಜೊತೆಯಲ್ಲಿ ಇದ್ದಾರೆ. ರಾಮಣ್ಣ ಅವರಿಗೆ ಸಹಕಾರ ನೀಡಿ ಎಂದಿದ್ದರು. ಸಚಿವರು ಮೋಹನ್ ರೆಡ್ಡಿ ನಮ್ಮ ಅಭ್ಯರ್ಥಿ. ಹೊಂದಾಣಿಕೆ ರಾಜಕೀಯ ಯಾವತ್ತೂ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆಗ ಶಿಡ್ಲಘಟ್ಟ ಶಾಸಕರು ಯಾರ ಜೊತೆ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲು ಬಂದಿದ್ದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ‘ಡಾ.ಕೆ.ಸುಧಾಕರ್ ಅವರು ಸಚಿವರಾಗಿದ್ದಾಗಲೇ ಅವರ ವಿರುದ್ಧ ಹೋರಾಟ ನಡೆಸಿದ್ದೇವೆ. ಈಗ ನಮ್ಮ ಪಕ್ಷ ಅಧಿಕಾರದಲ್ಲಿ ಇದೆ. ಈಗ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವೇ’ ಎಂದರು.

ಮುಖಂಡ ಜಯರಾಮ್, ಮಿಲ್ಟನ್ ನಾಗರಾಜ್, ಕಣಿತಹಳ್ಳಿ ರವಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-16-1570159210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.