ಚಿಕ್ಕಬಳ್ಳಾಪುರ: ಇಲ್ಲಿನ ಭಗತ್ ಸಿಂಗ್ ನಗರದ ಕೆಎಸ್ಆರ್ಟಿಸಿ ಗ್ಯಾರೇಜ್ ಮುಂಭಾಗದ ಧರ್ಮರಾಯ ದೇವಾಲಯದಲ್ಲಿ ಏ.25ರಂದು 42ನೇ ವರ್ಷದ ಧರ್ಮರಾಯಸ್ವಾಮಿ ಕರಗ ಮಹೋತ್ಸವ ನಡೆಯಲಿದೆ.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಕರಗದ ವಿವರಗಳನ್ನು ನೀಡಿದ ಧರ್ಮರಾಯಸ್ವಾಮಿ ಕರಗ ಅಭಿವೃದ್ಧಿ ಸಮಿತಿಯ ಅರುಣ್, ಅತ್ಯಂತ ಭಕ್ತಿಭಾವದಿಂದ ಕರಗ ನಡೆಯಲಿದೆ. 22ರಿಂದ 27ರವರೆಗೆ ಕರಗ ಮಹೋತ್ಸವ ಜರುಗಲಿದೆ. ಕುಪ್ಪಂನ ಎಂ. ಬಾಲಾಜಿ ಕರಗ ಹೊರುವವರು ಎಂದರು.

22ರಂದು ಸಂಜೆ 7ಕ್ಕೆ ಕಳಸ ಸ್ಥಾಪನೆ, ಗಣಪತಿ ಹೋಮ, ಧ್ವಜಾರೋಹಣ ಹಾಗೂ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. 23ರಂದು ಕಂದವಾರದ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಪ್ರಮುಖ ಬೀದಿಗಳಲ್ಲಿ ಧರ್ಮರಾಯಸ್ವಾಮಿ ಹಸಿ ಕರಗ ಮೆರವಣಿಗೆ ನಡೆಯಲಿದೆ. 24ರಂದು ಭಕ್ತರಿಂದ ತಂಬಿಟ್ಟು ದೀಪಗಳು, ಸಪ್ತ ಕಳಸ ಕರಗ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

25ರಂದು ಮಧ್ಯಾಹ್ನ 12ಕ್ಕೆ ಅರ್ಜುನ ಹಾಗೂ ದ್ರೌಪತಮ್ಮನವರ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ 9ಕ್ಕೆ ಧರ್ಮರಾಯಸ್ವಾಮಿ ಅವರ 42ನೇ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಚಾಲನೆಗೊಳ್ಳಲಿದೆ. 26ರಂದು ದೇವಾಲಯದ ಸಮೀಪ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ, 27ರಂದು ವಸಂತೋತ್ಸವ ಹಾಗೂ ಒನಕೆ ಕರಗ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಕರಗ ಮಹೋತ್ಸವದ ಅಂಗವಾಗಿ ನಗರದ ರೇಷ್ಮೆಗೂಡಿನ ಮಾರುಕಟ್ಟೆ ಬಳಿ ಪ್ರತಿವರ್ಷದಂತೆ ಈ ವರ್ಷವೂ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಮಹಾಗಣಪತಿ ಕಾರು ಚಾಲಕರು ಹಾಗೂ ಮಾಲೀಕರ ಸಂಘದಿಂದ 26ಕ್ಕೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದರು.

ಕರಗ ಮಹೋತ್ಸವದ ಅಂಗವಾಗಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ, ನಾಟಕ ಪ್ರದರ್ಶನಗಳು, ಪ್ರಮುಖ ಬೀದಿಗಳಲ್ಲಿ ಅನ್ನಸಂತರ್ಪಣೆ, ಕೀಲು ಕುದುರೆ ನೃತ್ಯ ಹಾಗೂ ಡೊಳ್ಳು ಕುಣಿತ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಮಾಜಿ ಸದಸ್ಯ ನರಸಿಂಹಮೂರ್ತಿ, ಚಿನ್ನಪ್ಪ, ಸ್ವಾಮಿ, ಮುನಿರಾಜು, ಸುರೇಂದ್ರ ನಾಯ್ಡು, ಗಂಗಾಧರ್,ರವಿ, ಮುನಿಯಪ್ಪ, ಶರತ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-16-846408957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.