ಪ್ರಜಾವಾಣಿ ವಾರ್ತೆ

ಚಿಕ್ಕಬಳ್ಳಾಪುರ: ದೇಶದ ಮೊಟ್ಟಮೊದಲ ಡಿಜಿಟಲ್ ಜನಗಣತಿಗೆ ಏ.1 ರಂದು ಜಿಲ್ಲೆಯಲ್ಲಿ ಚಾಲನೆಯಾಗಲಿದೆ. ಜೆಲ್ಲೆಯ ಸಾರ್ವಜನಿಕರು ಗಣತಿ ಕಾರ್ಯಕ್ಕೆ ಸಹಕರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

2026-27ನೇ ಸಾಲಿನ ಜನಗಣತಿ ಕಾರ್ಯವು ಜಿಲ್ಲೆಯಲ್ಲಿ ಏ.1 ರಿಂದ ಆರಂಭವಾಗಿ ಮೇ 15 ರವರೆಗೆ ನಡೆಯಲಿದೆ. ಈ ಕಾರ್ಯಕ್ಕೆ 2,533 ಜನಗಣತಿದಾರರನ್ನು 422 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 150 ರಿಂದ 200 ಮನೆಗಳನ್ನು ಒಳಗೊಳ್ಳುವಂತೆ ಒಟ್ಟು ಜಿಲ್ಲೆಯಲ್ಲಿ 3,121 ಬ್ಲಾಕ್ಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಒಂದು ಬ್ಲಾಕ್ನಲ್ಲಿ 700 ರಿಂದ 800 ಜನರು ಇರಲಿದ್ದಾರೆ. ಜನಗಣತಿಗಾಗಿ ಒಟ್ಟು ಜಿಲ್ಲೆಯಲ್ಲಿ 16 ಚಾರ್ಜ್ ಗಳನ್ನು ಮಾಡಿ 16 ಅಧಿಕಾರಿಗಳನ್ನು ನೇಮಿಸಲಾಗಿದೆ. ಜನಗಣತಿಗೆ ನಿಯೋಜಿಸಿರುವ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಶಿಕ್ಷಕರು, ಉಪನ್ಯಾಸಕರನ್ನು ಜನಗಣತಿ ಕಾರ್ಯಕ್ಕೆ ಹಾಗೂ ಮೇಲ್ವಿಚಾರಣೆ ಕಾರ್ಯಕ್ಕೆ ನಿಯೋಜಿಸಲಾಗುವುದು. 2 ಮಾಸ್ಟರ್ ತರಬೇತುದಾರರನ್ನು ಜನಗಣತಿ ನಿರ್ದೇಶನಾಲಯದಿಂದ ನೇಮಿಸಲಾಗಿದೆ. ಜಿಲ್ಲೆಯಲ್ಲಿ 50 ಫೀಲ್ಡ್ ಟ್ರೈನರ್ಗಳನ್ನು ನೇಮಿಸಲಾಗಿದೆ. ಇವರಿಗೆ ಜನಗಣತಿ ನಿರ್ದೇಶನಾಲಯದ ಅಧಿಕಾರಿಗಳಿಂದ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜನಗಣತಿಯ ಮೊದಲನೇ ಹಂತವು ಪ್ರತಿ ಕುಟುಂಬ ರಚನೆ ಮತ್ತು ನಕ್ಷೆ ಒಳಗೊಂಡಿರುತ್ತದೆ. ಸರ್ಕಾರ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು, ನೀರು, ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಸೇರಿದಂತೆ ಇನ್ನಿತರ 34 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ಇದು 2027ರ ಫೆಬ್ರುವರಿಯಿಂದ ನಡೆಯುವ ಎರಡನೇ ಹಂತದ ಜನಗಣತಿಗೆ ಅಡಿಪಾಯವಾಗಿರುತ್ತದೆ. ಜನಸಂಖ್ಯೆಯ ಮಾಹಿತಿಯನ್ನು ನಿರ್ದಿಷ್ಟವಾಗಿ ಗಣತಿ ಮಾಡುವುದರಿಂದ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗುವ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಕಾರಿ ಎಂದು ವಿವರಿಸಿದರು.

ನೈಜ ಹಾಗೂ ನಿಖರ ಮಾಹಿತಿಯನ್ನು ನಾಗರಿಕರು ನೀಡಿ ಜನಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

‘ಸ್ವಗಣತಿ; ಕುಟುಂಬದ ಮಾಹಿತಿ ನಮೂದಿಸಬಹುದು’

ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಸ್ವ ಗಣತಿ ಪೋರ್ಟಲ್ https://se.census.gov.in ಮೂಲಕ ತಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ ತಮ್ಮ ಹಾಗೂ ಕುಟುಂಬದ ಮಾಹಿತಿಯನ್ನು ದೋಷರಹಿತವಾಗಿ ನಮೂದಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಐಡಿ (SE ID) ಸೃಜನೆಯಾಗಲಿದೆ. ಸದರಿ ಐಡಿಯ ಮಾಹಿತಿ ಸಂಗ್ರಹಕ್ಕೆ ಗಣತಿದಾರರು ಏ.16 ರಿಂದ ಮೇ. 15 ರವರೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಐಡಿ ಯನ್ನು ಮುಂದಿನ ಪ್ರಕ್ರಿಯೆಗೆ ಗಣತಿದಾರಿಗೆ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.