ಚಿಕ್ಕಬಳ್ಳಾಪುರ: ‘ನಮಗೆ ಕೈಗಾರಿಕೆಯೂ ಬೇಕು, ಕೃಷಿಯೂ ಬೇಕು. ನಮ್ಮ ಜಮೀನುಗಳನ್ನು ನಾವು ಕೈಗಾರಿಕೆಗೆ ನೀಡಲು ಸಿದ್ಧ. ಈ ವಿಚಾರದಲ್ಲಿ ಯಾವುದೇ ರಾಜಕಾರಣ ಬೆಸೆಯುವುದು ಬೇಡ’ ಎಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಸದಸ್ಯರು ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಸುಬ್ರಹ್ಮಣ್ಯ, ‘ನಾವು ಕೆಐಎಡಿಬಿಗೆ ಜಮೀನು ನೀಡುತ್ತೇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೇ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳಿಗೆ ಪ್ರಯತ್ನಗಳು ನಡೆದಿದ್ದವು ಎಂದರು.

ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ವಿಚಾರವಾಗಿ ಸಂಸದ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ಮಾತನಾಡಿರುವುದು ಸೂಕ್ತವಲ್ಲ. ನಮ್ಮ ಜಮೀನು ಉಳಿಸಿಕೊಡಿ ಎಂದು ನಾನು ಅವರ ಮನೆ ಬಾಗಿಲುಗಳಿಗೆ ಹೋಗಿಲ್ಲ ಎಂದು ಹೇಳಿದರು.

ನೀರಾವರಿ ಪ್ರದೇಶ ಉಳಿಸಿಕೊಡಿ ಎಂದು ಸಚಿವರಿಗೆ, ಶಾಸಕರಿಗೆ ಮನವಿ ಮಾಡಿದ್ದೆವು. ಆ ಪ್ರಕಾರ 500 ಎಕರೆ ನೀರಾವರಿ ಜಮೀನನನ್ನು ಉಳಿಸಿಕೊಟ್ಟಿದ್ದಾರೆ. ನಾವು ಯಾರೂ ಭೂ ಮಾಫಿಯಾದವರ ಪರವಾಗಿಲ್ಲ. ಕೆಐಎಡಿಬಿಯು ನಿಗದಿ ಮಾಡಿರುವ ಭೂ ಪರಿಹಾರದ ದರವು ನಮಗೆ ತೃಪ್ತಿ ನೀಡಿಲ್ಲ. ದರ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಜಿಲ್ಲಾಧಿಕಾರಿ ಅವರು ರೈತರ ಕಷ್ಟ ಕೇಳಬೇಕು. ಬೆಳ್ಳೂಟ್ಟಿ ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತೀಶ್ ಮಾತನಾಡಿ, ಸಂಸದರು ತಮ್ಮ ಪ್ರಯತ್ನದ ಮೂಲಕ ಇನ್ನೂ 100 ಎಕರೆ ಜಮೀನು ಕೈ ಬಿಡಿಸಲಿ. ಆದರೆ ದ್ವಂದ್ವದ ನಿಲುವು ಬೇಡ. ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ ಅವರು ಡಾ.ಕೆ.ಸುಧಾಕರ್ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಪ್ರಭುಗೌಡ, ನಾಗರಾಜ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-16-1640275668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.