ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳು ಕಾರ್ಯಾರಂಭ ಮಾಡಿವೆ. ಶಾಲೆ ಆರಂಭದ ದಿನವೇ ಶಿಕ್ಷಣ ಇಲಾಖೆಯು ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರುವ ಆಂದೋಲನವೂ ಜಿಲ್ಲೆಯಲ್ಲಿ ನಡೆದಿದೆ.

ಈ ಬೆಳವಣಿಗೆಗಳ ನಡುವೆಯೇ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಿದೆ. ಶಾಲೆಗಳಲ್ಲಿ ಕೊಠಡಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಆಟದ ಮೈದಾನ, ಬೆಂಚ್, ಡೆಸ್ಕ್ಗಳ ಕೊರತೆ ಕಾಡುತ್ತಿದೆ.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ಒಟ್ಟು 1,453 ಸರ್ಕಾರಿ ಶಾಲೆಗಳಿವೆ.

ನಗರ ಪ್ರದೇಶದ ಶಾಲೆಗಳಲ್ಲಿ 899 ಮತ್ತು ಗ್ರಾಮೀಣ ಭಾಗದಲ್ಲಿ 5,540 ಸೇರಿ 6,439 ಕೊಠಡಿಗಳು ಇವೆ. ಈ ಪೈಕಿ ನಗರ ಪ್ರದೇಶದ 250 ಮತ್ತು ಗ್ರಾಮೀಣ ಭಾಗದಲ್ಲಿ 1,645 ಸೇರಿದಂತೆ 1,895 ಕೊಠಡಿಗಳು ದುರಸ್ತಿಗೆ ಬಂದಿವೆ.

ಇವುಗಳಲ್ಲಿ 1,243 ಕೊಠಡಿಗಳು ಸಣ್ಣ ಮಟ್ಟದಲ್ಲಿ ಮತ್ತು 652 ಕೊಠಡಿಗಳು ದೊಡ್ಡ ಪ್ರಮಾಣದಲ್ಲಿ ದುರಸ್ತಿ ಆಗಬೇಕಿದೆ. ಶಾಲೆಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಈ ಕೊಠಡಿಗಳನ್ನು ದುರಸ್ತಿಗೊಳಿಸಬೇಕಾದ ತುರ್ತು ಸಹ ಇದೆ.

ಜಿಲ್ಲೆಯಲ್ಲಿ ಬಹಳಷ್ಟು ಶತಮಾನ ಕಂಡ ಶಾಲೆಗಳು ಇವೆ. ಈ ಕೆಲವು ಶಾಲೆಗಳಲ್ಲಿ ಹಲವು ವರ್ಷಗಳ ಹಳೆ ಕೊಠಡಿಗಳು ಇವೆ. ಇಂತಹ ಕೊಠಡಿಗಳು ಅಪಾಯದ ಸ್ಥಿತಿಯಲ್ಲಿದ್ದು ನೆಲಸಮಗೊಳಿಸಬೇಕಾಗಿದೆ. ಹೀಗೆ ನಗರ ಪ್ರದೇಶದಲ್ಲಿ 62 ಮತ್ತು ಗ್ರಾಮೀಣ ಭಾಗದಲ್ಲಿ 663 ಸೇರಿದಂತೆ 725 ಕೊಠಡಿಗಳು ನೆಲಸಮದ ಪಟ್ಟಿಯಲ್ಲಿವೆ.

ಹೀಗೆ ನೆಲಸಮಗೊಂಡ ಕಡೆ ಹೊಸದಾಗಿ ಕೊಠಡಿಗಳು ನಿರ್ಮಾಣವಾಗಬೇಕಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸ ಅಥವಾ ಹೆಚ್ಚುವರಿ 34 ಕೊಠಡಿಗಳು ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ 258 ಸೇರಿ ಒಟ್ಟು 292 ಕೊಠಡಿಗಳನ್ನು ಹೊಸದಾಗಿ ನಿರ್ಮಿಸಬೇಕಾಗಿದೆ.

ಕೊಠಡಿಗಳಷ್ಟೇ ಅಲ್ಲ ಶೌಚಾಲಯಗಳು, ಕಾಂಪೌಂಡ್ಗಳು ಸೇರಿದಂತೆ ಕೆಲವು ಮೂಲಸೌಕರ್ಯಗಳು ಶಾಲೆಗಳನ್ನು ಬಾಧಿಸುತ್ತಿವೆ.

ಇಂದಿಗೂ ಜಿಲ್ಲೆಯ ನಗರ ಪ್ರದೇಶದ 27 ಸರ್ಕಾರಿ ಶಾಲೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದ 423 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆಯೇ ಇಲ್ಲ. ನರೇಗಾ ಅನುದಾನ ಬಳಸಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶವಿದೆ. ಆದರೆ ಇಂದಿಗೂ ಶಾಲೆಗಳಿಗೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಇದರಿಂದ ಶಾಲೆಯ ಆವರಣ ಬಿಡಾಡಿ ದನಗಳ, ಪುಂಡರ ಆಟದ ಮೈದಾನವಾಗಿದೆ.

ಶೌಚಾಲಯದ ಅಧ್ವಾನ: ಮೂಲ ಸೌಕರ್ಯಗಳಲ್ಲಿ ಶೌಚಾಲಯಗಳ ವ್ಯವಸ್ಥೆಯೂ ಒಂದು. ಆದರೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ವ್ಯವಸ್ಥೆ ಇಲ್ಲ. ಶಿಕ್ಷಣ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರವೇ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಶೌಚಾಲಯಗಳು ಶಾಲೆಗಳಿಗೆ ಅಗತ್ಯವಿದೆ.

ಜಿಲ್ಲೆಯ 1,453 ಸರ್ಕಾರಿ ಶಾಲೆಗಳಲ್ಲಿ 59,380 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 30 ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಬಾಲಕರಿಗೆ 1,839, ಬಾಲಕಿಯರಿಗೆ 2,081 ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ 347 ಶೌಚಾಲಯಗಳು ಸದ್ಯ ಇವೆ. ಆದರೆ ಇನ್ನೂ ಶೌಚಾಲಯಗಳ ಅಗತ್ಯವಿದೆ. ಬಾಲಕರಿಗೆ 490, ಬಾಲಕಿಯರಿಗೆ 412 ಮತ್ತು ಅಂಗವಿಕಲರಿಗೆ 158 ಶೌಚಾಲಯಗಳ ನಿರ್ಮಾಣ ಆಗಬೇಕಿದೆ.

ಹೀಗೆ ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.