ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ನೀರಿನ ಹಾಹಾಕಾರ ಎದುರಾಗಿದೆ. ಈ ನಡುವೆ ಮತ್ತೊಂದು ಆತಂಕ ಎನ್ನುವಂತೆ ದೊಡ್ಡ ಪ್ರಮಾಣದಲ್ಲಿಯೇ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ.

ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳೂ ವಿಫಲಗೊಳ್ಳುತ್ತಿವೆ. ಕೆಲವು ಕಡೆ ಸಾವಿರ ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆದು ನೀರು ಮೇಲೆತ್ತಲಾಗುತ್ತಿದೆ. ಕೊಳವೆ ಬಾವಿಗಳಿಗಾಗಿ ರೈತರು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ.

ರಾಜ್ಯದಲ್ಲಿ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ದಶಕಗಳಿಂದಲೂ ಇದೆ. ಈಗ ಮತ್ತೆ ಅಂತರ್ಜಲ ಕುಸಿತದ ಪರಿಣಾಮ ಇದೇ ಸ್ಥಿತಿ ಉದ್ಭವವಾಗುವ ಸನ್ನಿವೇಶ ದಟ್ಟವಾಗಿದೆ.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ 20.91 ಮೀಟರ್ಗಳಲ್ಲಿ ಅಂತರ್ಜಲ ಮಟ್ಟವಿತ್ತು. ಅದು ಈಗ (2026ರ ಮಾರ್ಚ್) 38.54 ಮೀಟರ್ಗಳಿಗೆ ತಲುಪಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟದ ಕುಸಿಯುತ್ತಲೇ ಇದೆ.

2025ರ ಸಾಲಿನಲ್ಲಿ ಪ್ರತಿ ತಿಂಗಳಲ್ಲಿಯೂ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಳಿತಗಳನ್ನು ಕಾಣಬಹುದು. 2025ರಲ್ಲಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ 27.61 ಮೀಟರ್ಗಳಲ್ಲಿ ಅಂತರ್ಜಲ ಮಟ್ಟವಿತ್ತು. ಚಿಂತಾಮಣಿಯಲ್ಲಿ 43.07, ಚಿಕ್ಕಬಳ್ಳಾಪುರ 48.40, ಗುಡಿಬಂಡೆ 19.72, ಗೌರಿಬಿದನೂರು ತಾಲ್ಲೂಕಿನಲ್ಲಿ 21.30 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 73.04 ಮೀಟರ್ಗಳಲ್ಲಿ ಅಂತರ್ಜಲ ಮಟ್ಟವಿತ್ತು. ಈ ಕುಸಿತ 2026ರಲ್ಲಿಯೂ ಮುಂದುವರಿದಿದೆ.

ಬಯಲು ಸೀಮೆಯ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದಿದೆ. ರೈತರಿಗೆ ಸುಸ್ಥಿರ ಬದುಕಿಗೆ ನೆರವಾಗಬಲ್ಲ ಸ್ಥಿರ ಅಂತರ್ಜಲ ಮಟ್ಟ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಜಿಲ್ಲೆಗೆ ಯಾವುದೇ ನದಿ, ನಾಲೆಗಳ ಮೂಲಗಳಿಂದ ನೀರು ಹರಿದು ಬರುತ್ತಿಲ್ಲ. ಕೆರೆ, ಕಟ್ಟೆಗಳೇ ನೀರಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಜೀವಾಳ. ಮಳೆಯೇ ಆಧಾರ.

ಭೂಜಲ ಇಲಾಖೆಯ ಅಂಕಿ ಅಂಶಗಳು ಜಿಲ್ಲೆಯಲ್ಲಿ ಈ ವರ್ಷ ಅಂತರ್ಜಲ ಮಟ್ಟ ಕುಸಿದಿರುವುದನ್ನು ಸಾರುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಾರದಿದ್ದರೆ ಅಂತರ್ಜಲ ಮತ್ತಷ್ಟು ಕುಸಿಯುವ ಆತಂಕವೂ ರೈತರಲ್ಲಿದೆ.

ಹಿಂದಿನ ವರ್ಷಗಳಲ್ಲಿ ಹೀಗಿತ್ತು: 2023ರ ಜೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 21.95 ಮೀಟರ್, 2024ರ ಜೂನ್ ಅವಧಿಯಲ್ಲಿ 42.17 ಮೀಟರ್ ಇತ್ತು. 2025ರ ಡಿಸೆಂಬರ್ ಅಂತ್ಯಕ್ಕೆ 38.86 ಮೀಟರ್ಗಳಿಗೆ ಅಂತರ್ಜಲ ಮಟ್ಟ ತಲುಪಿದೆ.

ಹೆಚ್ಚಲಿದೆ ನೀರಿನ ಸಮಸ್ಯೆ: ಜಿಲ್ಲೆಯಲ್ಲಿ ಸದ್ಯ 32 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ 107 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 12 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಈಗಾಗಲೇ ಎದುರಾಗಿದೆ. ಮುಂದಿನ ದಿನಗಳಲ್ಲಿ ಇದರ ಜೊತೆಗೆ ಮತ್ತೆ 20 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿ: ಜಿಲ್ಲೆಯ ಭೂಜಲ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 163 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳು ಜಲಮಟ್ಟವನ್ನು ಮಾಪನ ಮಾಡುತ್ತದೆ. ಈ ಹಿಂದೆ 51 ನಿರೀಕ್ಷಣಾ ಕೊಳವೆ ಬಾವಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಈಗ 163 ಕೊಳವೆ ಬಾವಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆಯಾ ವರ್ಷದ ಸರಾಸರಿಯ ಮಳೆ ಪ್ರಮಾಣ ಪರಿಗಣಿಸಿ ಅಂತರ್ಜಲ ಮಟ್ಟ ನಿರ್ಧರಿಸಲಾಗುತ್ತದೆ.

ಈ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ? ಕುಸಿದಿದೆಯಾ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-16-785255172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.