ಚಿಕ್ಕಬಳ್ಳಾಪುರ: ಯುದ್ಧದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆಯು, ಜಿಲ್ಲೆಯಲ್ಲಿ ಗುಲಾಬಿ ಈರುಳ್ಳಿ ರಫ್ತು ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂದಾಜು ಐದು ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಈ ಗುಲಾಬಿ ಈರುಳ್ಳಿಯನ್ನು ಸ್ಥಳೀಯ ಬಳಕೆಗಿಂತಲೂ ರಫ್ತು ಉದ್ದೇಶಕ್ಕಾಗಿಯೇ ಬೆಳೆಯಲಾ ಗುತ್ತದೆ. ಬೆಂಗಳೂರು ಸುತ್ತಮುತ್ತ ಗುಲಾಬಿ ಈರುಳ್ಳಿ ಹೆಚ್ಚು ಬೆಳೆಯುವ ಕಾರಣ ‘ಬೆಂಗಳೂರು ಗುಲಾಬಿ ಈರುಳ್ಳಿ’ ಹೆಸರಿನಲ್ಲಿ ಇದು ಭೌಗೋಳಿಕ ಮಾನ್ಯತೆಯನ್ನು ಪಡೆದಿದೆ.

ಚಿಕ್ಕಬಳ್ಳಾಪುರ ಗುಲಾಬಿ ಈರುಳ್ಳಿ ಮಲೇಷ್ಯಾ, ಬಾಂಗ್ಲಾದೇಶ ಬಿಟ್ಟರೆ ಪಶ್ಚಿಮ ಏಷ್ಯಾ ದೇಶಗಳಿಗೆ ರಫ್ತಾಗುತ್ತದೆ. ಯುದ್ಧದಿಂದಾಗಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ₹100 ರಿಂದ ₹150ಕ್ಕೆ ಮಾರಾಟವಾಗುತ್ತಿದ್ದಒಂದು ಕೆ.ಜಿ ಈರುಳ್ಳಿ ಬೆಲೆ, ಈಗ ₹8ರಿಂದ ₹10ಕ್ಕೆ ಕುಸಿದಿದೆ. 50 ಕೆ.ಜಿಯ ಮೂಟೆ ಗುಲಾಬಿ ಈರುಳ್ಳಿಯನ್ನು ₹300ರಿಂದ ₹400ಕ್ಕೂ ಖರೀದಿ ಮಾಡುವವರೂ ಇಲ್ಲದಂತಾಗಿದೆ. ಈ ಹಿಂದೆ ಮೂಟೆ ದರ ₹6 ಸಾವಿರದಿಂದ ₹8 ಸಾವಿರದವರೆಗೂ ಇತ್ತು.

ಔಷಧ ಗುಣಗಳಿಂದಾಗಿ ಗುಲಾಬಿ ಈರುಳ್ಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿ ಈರುಳ್ಳಿಯನ್ನು ಕೇಳುವವರು ಇಲ್ಲದಂತಾಗಿದೆ. ಮನೆಗೆ ಬಳಸುವುದಕ್ಕಿಂತ ಹೆಚ್ಚಾಗಿ ಹೋಟೆಲ್, ಮದುವೆ, ಶುಭ ಕಾರ್ಯಗಳ ಅಡುಗೆಯಲ್ಲಿ ಈ ಈರುಳ್ಳಿ ಬಳಕೆ ಹೆಚ್ಚು. ಅಡುಗೆ ಅನಿಲ ಕೊರತೆಯಿಂದ ಹೋಟೆಲ್ ಬಾಗಿಲು ಮುಚ್ಚಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕಳೆದುಕೊಂಡಿದೆ.

ಈ ಭಾಗದಲ್ಲಿ ಈರುಳ್ಳಿ ನಿರ್ಜಲೀಕರಣ ಮತ್ತು ಸಂಸ್ಕರಣಾ ಘಟಕಗಳು ಇಲ್ಲದ ಕಾರಣ ರೈತರು ದಾಸ್ತಾನು ಮಾಡಲು ಸಾಧ್ಯವಿಲ್ಲ. ಬೆಳೆದ ಬೆಳೆಯನ್ನು ಜಮೀನಿನಲ್ಲೇ ಬಿಡುವ ಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.

ಗುಲಾಬಿ ಈರುಳ್ಳಿ ಸ್ಥಳೀಯ ಮಾರುಕಟ್ಟೆಗಿಂತ ವಿದೇಶಿ ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಸರ್ಕಾರ ಇದನ್ನು ಮೂರು ಅಥವಾ ನಾಲ್ಕು ತಿಂಗಳು ಸಂರಕ್ಷಿಸಿಡಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಕನಿಷ್ಠ ದರವನ್ನು ನಿಗದಿಪಡಿಸಬೇಕು ಎಂದು ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಗಂಗಾಭವಾನಿ ಎಫ್.ಪಿ.ಒ ಅಧ್ಯಕ್ಷ ವಿಜಯಭಾವರೆಡ್ಡಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1505043535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.