ಚಿಕ್ಕಬಳ್ಳಾಪುರ: ಎಚ್.ಡಿ.ದೇವೇಗೌಡ ಅಭಿಮಾನಿಗಳ ಬಳಗದಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜನ್ಮದಿನದ ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ್ಪೇಟೆಯ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದ ವೃದ್ಧರಿಗೆ ಸೋಮವಾರ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.

ವಕೀಲ ಮಟಮಪ್ಪ ಆರ್. ಮಾತನಾಡಿ, ದೇವೇಗೌಡರು ದೀನ ದಲಿತರು, ರೈತರು ಹಾಗೂ ಕಾರ್ಮಿಕರ ಪರ ಸದಾ ಧ್ವನಿ ಎತ್ತಿದವರು. ಅವರಿಗೆ ನ್ಯಾಯ ಸಿಗುವಂತೆ ಹೋರಾಟ ನಡೆಸಿದ್ದಾರೆ ಎಂದರು.

ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ಅನೇಕರು ಜನರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಇಂದಿಗೆ ವಿವಿಧ ಪಕ್ಷಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಅಂದರ್ಲಹಳ್ಳಿ ಶ್ರೀನಿವಾಸ್,ಜಾತವಾರಹೊಸಹಳ್ಳಿ ಜಗದೀಶ್,ತಮ್ಮನಾಯಕನಹಳ್ಳಿ ಕರಗರೆಡ್ಡಿ, ಅನಕನೂರು ರಾಜಣ್ಣ, ಗಂಗಾನಾರಾಯಣ, ನಂಜಾಪುರ ರಾಜಣ್ಣ, ಮಹೇಶ್, ಅಮರ್,ಉಪ್ಪರಹಳ್ಳಿ ಅನಿಲ್ ಮತ್ತಿತರರು ಪಾಲ್ಗೊಂಡಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-16-1224225255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.