ಚಿಕ್ಕಬಳ್ಳಾಪುರ: ಧೂಮಪಾನ, ಮದ್ಯಪಾನ, ಒತ್ತಡ, ಚಿಂತೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಪ್ರಮುಖ ಕಾರಣ ಎಂದು ವೈದ್ಯ ಡಾ. ಆಂಜಿನಪ್ಪ ತಿಳಿಸಿದರು.

ತಾಲ್ಲೂಕಿನ ಬೀಡಗಾನಹಳ್ಳಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮವಾಗಿರುವ ದೇಹವನ್ನು ಹೆಚ್ಚು ಒತ್ತಡ, ಜಗಳ ಇತ್ಯಾದಿ ಕಾರಣಗಳಿಂದ ನಾವೇ ಹಾಳುಮಾಡಿಕೊಳ್ಳುತ್ತೇವೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಗ್ಯಾಸ್ಟ್ರಿಕ್ ಮತ್ತು ಗ್ಯಾಸ್ಟ್ರೈಟಿಸ್ ಎರಡು ಬೇರೆ. ಮಾನವ ದೇಹದಲ್ಲಿ ಕರುಳಿನ ಆರೋಗ್ಯ ಬಹಳ ಮುಖ್ಯ. ಕರುಳಿನ ಆರೋಗ್ಯ ಕೆಟ್ಟರೆ ದೇಹದ ಎಲ್ಲಾ ಅಂಗಗಳ ಕಾರ್ಯಕ್ಷಮತೆ ಕುಂಠಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂಜಾಗ್ರತೆವಹಿಸಬೇಕು ಎಂದು ಕಿವಿಮಾತು ಹೇಳಿದರು.

ಉತ್ತಮ ಆರೋಗ್ಯಕ್ಕಾಗಿ ಮನುಷ್ಯ ಸದಾ ನಗುತ್ತಿರಬೇಕು. ಇದರಿಂದ ದೇಹದಲ್ಲಿ 4 ರೀತಿಯ ಹ್ಯಾಪಿ ಹಾರ್ಮೋನ್ಸ್ ಬಿಡುಗಡೆ ಆಗುತ್ತವೆ. ನಗು ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ನಗುವು ಮನುಷ್ಯನಿಗೆ ದಿವ್ಯೌಷಧ ಎಂದರು. ನಗುವಾತ ಪರಿಮಳವ ಪಸರಿಸುವ ಕುಸುಮ ಎಂದು ಡಿವಿಜಿ ಅವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿದರು.

ಪ್ರಾಂಶುಪಾಲ ತಿಪ್ಪೇಸ್ವಾಮಿ ಜಿ., ಐಕ್ಯುಎಸಿ ಸಹ ನಿರ್ದೇಶಕ ಯೋಗೀಶ್, ಸಿ.ಎಸ್.ಇ ವಿಭಾಗದ ಮುಖ್ಯಸ್ಥ ಗೋಪಿನಾಥ್, ಕಾರ್ಯಕ್ರಮ ಸಂಯೋಜಕ ರಾಜ್ ಕುಮಾರ್, ಶಿಲ್ಪಶ್ರೀ, ಸುಧಾಕರ್ ರೆಡ್ಡಿ, ವಿಜಯಕುಮಾರ್ ಜಿ.ಆರ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-16-1546562894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.