ಚಿಕ್ಕಬಳ್ಳಾಪುರ: ಯಾವುದೇ ನೋಟಿಸ್ ಇಲ್ಲದೆ ಬಡ್ಡಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಚೋಳಮಂಡಲಂ ಫೈನಾನ್ಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 20 ಸಾವಿರ ದಂಡ ವಿಧಿಸಿದೆ.

ಚೊಕ್ಕಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂ.ಜಿ ಹಾಗೂ ಪದ್ಮಾವತಿ ಸಂಸ್ಥೆಯಿಂದ ಶೇ 12.5ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದರು. ಆದರೆ ನೋಟಿಸ್ ನೀಡದೆ ಬಡ್ಡಿಯನ್ನು ಶೇ 14.5ಕ್ಕೆ ಹೆಚ್ಚಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅವರು ದೂರು ದಾಖಲಿಸಿದ್ದರು.

ಆಯೋಗದ ಅಧ್ಯಕ್ಷ ಕುಮಾರ್ ಎನ್. ಮತ್ತು ಸದಸ್ಯ ಎಚ್.ಜನಾರ್ದನ್ ವಿಚಾರಣೆ ನಡೆಸಿದ್ದರು. ಹಣಕಾಸು ಸಂಸ್ಥೆಯು ಸೇವಾ ನ್ಯೂನ್ಯತೆ ಎಸಗಿರುವುದನ್ನು ಗಮನಿಸಿ ದೂರುದಾರರಿಗೆ ₹ 20,000 ಪರಿಹಾರದ ಹಣ ಮತ್ತು ದಾವೆ ವೆಚ್ಚ ₹ 10 ನೀಡಬೇಕು. ಬಡ್ಡಿಯನ್ನು ಶೇ 14.50 ರಿಂದ ಶೇ 12.50 ಕ್ಕೆ ಪುನರ್ ರಚಿಸಬೇಕು ಎಂದು ಆದೇಶಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-16-1850457729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.