ಚಿಕ್ಕಬಳ್ಳಾಪುರ: ನಗರ ಹೊರವಲಯದ ಹೊನ್ನೇನಹಳ್ಳಿ ಸಮೀಪದ ಆಸ್ತಾನ ಬಹಿಷ್ಟಿ ಗಂಜ್ನಲ್ಲಿ ಹಝರತ್ ಖ್ವಾಜ ಪೀರ್ ಸೈದ್ ಷಾ ಗಯಾಸುಲ್ಲಾ ಷಾ ನಸೀರಿ ಅವರ 21ನೇ ವರ್ಷದ ಉರುಸ್ ಮಹೋತ್ಸವವು ಭಾನುವಾರ ಸಂಜೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಭಕ್ತರು ಉರುಸ್ ಹಾಗೂ ಜಶನ್-ಎ-ಚಿರಾಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತಿ ಮೆರೆದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪ್ರಾರ್ಥನೆಗಳು, ಧಿಕ್ರ್ ಭಕ್ತರನ್ನು ಆಕರ್ಷಿಸಿತು.

ಹೈದರಾಬಾದ್ನ ಧರ್ಮಗುರು ಖ್ವಾಜ ಷಾ ಮಹಮದ್ ಶಜಾಉದ್ದೀನ್ ಚಿಷ್ಟಿ ಖಾದ್ರಿ ಇಫ್ತಖಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ನಡೆಯಿತು ನಜೀಬ ನಸೀರಿ ಇಫ್ತಿಖಾರಿ ಅವರು ಉರುಸ್ ಕಾರ್ಯಕ್ರಮ ಸಂಘಟಿಸಿದ್ದರು.

ಖ್ವಾಜ ಷಾ ಮಹಮದ್ ಶಜಾಉದ್ದೀನ್ ಅವರು ಮಾತನಾಡಿ, ದೇವರ ಆರಾಧನೆಯ ಮೂಲಕ ಮನುಷ್ಯನ ಜೀವನವು ಸಾರ್ಥಕವಾಗುತ್ತದೆ. ದೈವ ಭಕ್ತಿಯೊಂದಿಗೆ ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಶಾಂತಿ ಹಾಗೂ ಸುಖದ ಜೀವನ ಸಾಧ್ಯ ಎಂದರು.

ಬೆಂಗಳೂರಿನ ಖ್ವಾಜ ಸೈದ್ ಮುಖ್ತಾರ್ ಅಹಮದ್ ಅಲಿ ಷಾ ಹಾಗೂ ಸದ್ಗುರು ಯಖೀನಿ ಪೀರ್ ಮಾತನಾಡಿ, ಧರ್ಮಗುರುಗಳು ತೋರಿದ ಶಾಂತಿಯ ಮಾರ್ಗವನ್ನು ಅನುಸರಿಸುವುದೇ ನಿಜವಾದ ಭಕ್ತಿ ಎಂದರು.

ಉರುಸ್ ಮಹೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆಯೂ ಮಾಡಲಾಗಿತ್ತು.

ಸೈದ್ ಆಸೀಪ್ ನಸೀರಿ, ಶೇಖ್ ಇರ್ಫಾನ್ ನಸೀರಿ, ಸೈದ್ ಷಾ ಸುಲ್ತಾನ್ ನಸೀರಿ, ಷಾ ಮಹಮದ್ ಝಾಕೀರ್ ಖಾದ್ರಿ, ಸೈದ್ ಮೊಯಿನ್ ಅಲಿ ಷಾ, ನವೀದ್ ಮೊಯಿನುದ್ದೀನ್ ಷಾ ಖಾದ್ರಿ, ರಿಯಾಝ್ ಅಹ್ಮದ್ ಖಾದ್ರಿ, ಪೀರ್ ಮಹಮ್ಮದ್ ಮೌಲಾ ಅಲಿ ಷಾ ಖಾದ್ರಿ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-16-1572319434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.