ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯು ತೋಟಗಾರಿಕಾ ಬೆಳೆಗಳಿಗೆ ಪ್ರಧಾನವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಧಗೆ ಹೆಚ್ಚುತ್ತಿದೆ. ನೀರಿಗೆ ಹಾಹಾಕಾರವೂ ಎದುರಾಗಿದೆ. ಈ ಪರಿಣಾಮ ತೋಟಗಾರಿಕಾ ಬೆಳೆಗಳ ರಕ್ಷಣೆ ರೈತರಿಗೆ ಸವಾಲಾಗಿದೆ.

ಜಿಲ್ಲೆಯಲ್ಲಿ 59,375 ಹೆಕ್ಟೇರ್ನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ 15,250 ಹೆಕ್ಟೇರ್ನಲ್ಲಿ ಹಣ್ಣಿನ ಬೆಳೆಗಳು, 32,640 ಹೆಕ್ಟೇರ್ನಲ್ಲಿ ತರಕಾರಿ ಮತ್ತು 706 ಹೆಕ್ಟೇರ್ನಲ್ಲಿ ಸಾಂಬಾರು ಪದಾರ್ಥದ ಬೆಳೆಗಳು, 8,094 ಹೆಕ್ಟೇರ್ನಲ್ಲಿ ಹೂವಿನ ಬೇಸಾಯ, 2,591 ಹೆಕ್ಟೇರ್ನಲ್ಲಿ ತೋಟದ ಬೆಳೆಗಳು ಮತ್ತು 94 ಹೆಕ್ಟೇರ್ನಲ್ಲಿ ಸುಗಂಧಿತ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಮಾವು, ಬಾಳೆ, ಪಪ್ಪಾಯಿ, ದ್ರಾಕ್ಷಿ, ಆಲೂಗಡ್ಡೆ, ಟೊಮೆಟೊ, ಮೆಣಸಿನ ಕಾಯಿ, ಗುಲಾಬಿ ಈರುಳ್ಳಿ, ಸೊಪ್ಪುಗಳು, ಕೋಸು ಜಾತಿಯ ತರಕಾರಿಗಳು, ಕುಂಬಳ ಜಾತಿಯ ತರಕಾರಿಗಳು, ಗುಲಾಬಿ, ಸೇವಂತಿಗೆ, ಸುಗಂಧರಾಜ, ಚೆಂಡು ಹೂ, ಗ್ಲಾಡಿಯೊಲಸ್, ಕನಕಾಂಬರ, ತೆಂಗು, ಗೋಡಂಬಿ, ಅಡಿಕೆ, ಹುಣಸೆ, ಕರಿಬೇವು...ಜಿಲ್ಲೆಯಲ್ಲಿನ ಪ್ರಮುಖ ತೋಟದ ಬೆಳೆಗಳಾಗಿವೆ.

ಜಿಲ್ಲೆಯಲ್ಲಿ ಯಾವುದೇ ಶಾಶ್ವತವಾದ ನೀರಾವರಿ ಮೂಲಗಳು ಇಲ್ಲ. ನೀರಾವರಿ ಕಾಲುವೆಗಳೂ ಇಲ್ಲ. ಈ ತೋಟಗಾರಿಕಾ ಬೆಳೆಗಳಿಗೆ ಕೊಳವೆ ಬಾವಿಗಳೇ ನೀರಿನ ಮೂಲ ಆಶ್ರಯ. ಆದರೆ ಜಿಲ್ಲೆಯಲ್ಲಿ ಈ ಬಾರಿ ನೀರಿನ ಕೊರತೆ ತೀವ್ರವಾಗಿದೆ. ಈ ಪರಿಣಾಮ ರೈತರು ಈ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಪರಡಾಡುತ್ತಿದ್ದಾರೆ.

ವಿಶೇಷವಾಗಿ ಹೂ ಮತ್ತು ಹಣ್ಣಿನ ಬೆಳೆಗಳಿಗೆ ನೀರು ಅಗತ್ಯ. ಆದರೆ ಕೊಳವೆ ಬಾವಿಗಳ ವಿಫಲತೆ ಮತ್ತು ದೊರೆಯುತ್ತಿರುವ ಅತ್ಯಲ್ಪ ನೀರು ತೋಟಗಾರಿಕಾ ಬೆಳೆಗಾರರು ಕೈ ಹಿಸುಕಿಕೊಳ್ಳುವಂತೆ ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸಾವಿರಾರು ಅಡಿಗಳವರೆಗೆ ಕೊಳವೆ ಬಾವಿ ಕೊರೆದು ದೊರೆಯುವ ಅತ್ಯಲ್ಪ ನೀರಿನಲ್ಲಿ ಸಮೃದ್ಧವಾಗಿ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಿಸಿಲಿನ ತಾಪ ಹೆಚ್ಚಿದೆ. ಈ ಪರಿಣಾಮ ನೀರಿಗೆ ಹಾಹಾಕಾರವಿದೆ. ಬೆಳೆ ರಕ್ಷಣೆಯೂ ಸವಾಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿ ಗರಿಷ್ಠವಾಗಿ ಅಂತರ್ಜಲ ಮಟ್ಟ ಕುಸಿದಿದೆ. ರೇಷ್ಮೆ ನಾಡಿನಲ್ಲಿ 2026ರ ಮಾರ್ಚ್ನಲ್ಲಿ ಅಂತರ್ಜಲ ಮಟ್ಟ 79.53 ಮೀಟರ್ಗೆ ತಲುಪಿದೆ. 2025ರಲ್ಲಿಯೂ 73.04 ಮೀಟರ್ಗೆ ಅಂತರ್ಜಲ ಮಟ್ಟ ತಲುಪಿತ್ತು. 2025ರಲ್ಲಿ ಜಿಲ್ಲೆಯ ಯಾವ ತಾಲ್ಲೂಕುಗಳಲ್ಲಿಯೂ ಅಂತರ್ಜಲ ಮಟ್ಟ ಸರಾಸರಿ 50 ಮೀಟರ್ಗಿಂತ ಹೆಚ್ಚು ಕುಸಿದಿಲ್ಲ. ಆದರೆ ಶಿಡ್ಲಘಟ್ಟ ಇದಕ್ಕೆ ಹೊರತಾಗಿದೆ. ಜನವರಿಯಲ್ಲಿ ಈ ತಾಲ್ಲೂಕಿನಲ್ಲಿ 63.99 ಮೀಟರ್ ಇದ್ದ ಅಂತರ್ಜಲ ಮಟ್ಟ ಡಿಸೆಂಬರ್ ವೇಳೆಗೆ 73.04 ತಲುಪಿತ್ತು.

ಶಿಡ್ಲಘಟ್ಟವು ಪ್ರಮುಖವಾಗಿ ರೇಷ್ಮೆ ಕೃಷಿಯನ್ನು ಅವಲಂಬಿಸಿದೆ. ರೇಷ್ಮೆ ಜೊತೆಗೆ ತರಕಾರಿಯೂ ಇಲ್ಲಿನ ಪ್ರಮುಖ ಬೆಳೆಗಳು. ಹೀಗೆ ಅಂತರ್ಜಲ ಮಟ್ಟ ಕುಸಿತ ಮತ್ತು ನೀರಿನ ಕೊರತೆ ತಾಲ್ಲೂಕನ್ನು ಬಾಧಿಸುತ್ತಿದೆ. ಕೃಷಿ ಅವಲಂಬಿಸಿರುವ ರೇಷ್ಮೆನಾಡಿನ ರೈತರಿಗೆ ಈ ಕುಸಿತ ತೀವ್ರ ಆಂತಕ ಉಂಟು ಮಾಡಿದೆ.

ಜಿಲ್ಲೆಯಲ್ಲಿ ಮಳೆಯ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಏಪ್ರಿಲ್ ಕೊನೆಯ ವಾರ ಮತ್ತು ಮೇ ಮೊದಲ ವಾರ ಅಲ್ಲಲ್ಲಿ ಮಳೆ ಸುರಿಯಿತು. ಆದರೆ ನಂತರದ ದಿನಗಳಲ್ಲಿ ಮಳೆಯ ಕೊರತೆ ತೀವ್ರವಾಗಿ ಬಾಧಿಸುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-16-1718802807

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.