ಚಿಕ್ಕಬಳ್ಳಾಪುರ: ನಗರದ ಕಂದವಾರ ಬಡಾವಣೆಯಲ್ಲಿ ಗುರುವಾರ ರಾತ್ರಿ ಗೃಹಿಣಿ ಪುಷ್ಪಮಾಲಾ (28) ಎಂಬುವವರ ಕೊಲೆಯಾಗಿದೆ.

ಬೆಂಗಳೂರಿನ ಪುಷ್ಪಮಾಲಾ ಅವರನ್ನು ಕಂದವಾರದ ಭರತ್ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪುಷ್ಪಮಾಲಾ, ಪತಿ ಮತ್ತು ಆತನ ಪೋಷಕರು ದೇಗುಲಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು.

‘ಪತಿ ಮತ್ತು ಆತನ ಕುಟುಂಬ ಸದಸ್ಯರೇ ಈ ಹತ್ಯೆಗೆ ಕಾರಣ. ಹತ್ಯೆಯನ್ನು ಯೋಜಿತವಾಗಿ ಮಾಡಿದ್ದಾರೆ’ ಎಂದು ಪುಷ್ಪಮಾಲಾ ತಾಯಿ ಆರೋಪಿಸಿದ್ದಾರೆ.

‘ಮದುವೆಯಾದ ಮೂರ್ನಾಲ್ಕು ತಿಂಗಳಲ್ಲಿಯೇ ಗಂಡ, ಹೆಂಡತಿ ನಡುವೆ ಜಗಳ ನಡೆದಿತ್ತು. ವರದಕ್ಷಿಣೆ ಕಿರುಕುಳ ಸಹ ನೀಡುತ್ತಿದ್ದರು. ಇದರಿಂದ ಪುಷ್ಪಮಾಲಾ ತವರು ಮನೆಗೆ ಬಂದಿದ್ದರು. ಭರತ್ಗೆ ಮತ್ತೊಂದು ಮದುವೆ ಮಾಡಲು ಮುಂದಾಗಿದ್ದರು. ನಂತರ ಮಾತುಕತೆ ನಡೆದು ಪುಷ್ಪಮಾಲಾ ಅವರನ್ನು ಕರೆದುಕೊಂಡು ಹೋಗಿದ್ದರು. ಭರತ್ ಮನೆಯವರೇ ಈ ಹತ್ಯೆ ನಡೆಸಿದ್ದಾರೆ’ ಎಂದು ಪುಷ್ಪಮಾಲಾ ಸಂಬಂಧಿಕರು ದೂರಿದರು.

‘ಕಳ್ಳರು ಈ ಕೊಲೆ ಮಾಡಿದ್ದಾರೆ. ನಾಲ್ಕು ದಿನಗಳ ಮುನ್ನವೇ ಕೆ.ಆರ್.ನಗರದ ದೇಗುಲಕ್ಕೆ ಹೋಗಲು ನಿಶ್ಚಯಿಸಿಕೊಂಡಿದ್ದೆವು. ದೇಗುಲಕ್ಕೆ ಬರುವಂತೆ ಪುಷ್ಪಮಾಲಾಳನ್ನು ಕರೆದಿದ್ದೆವು. ಅವಳು ಬರಲಿಲ್ಲ’ ಎಂದು ಭರತ್ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-16-1567183492

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.