ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಗ್ರಾಮ ದೇವತೆ ಜಾಲಾರಿ ಗಂಗಮ್ಮ ದೇವಾಲಯದ 64ನೇ ವರ್ಷದ ಧರ್ಮರಾಯ ಸ್ವಾಮಿ ಹೂವಿನ ಕರಗ ಮಹೋತ್ಸವವು ಏ.11ರಂದು ನಡೆಯಲಿದೆ ಎಂದು ಕರಗ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲೂರಿನ ಕೆ.ಧರ್ಮೇಂದ್ರ ಅವರು ಕರಗ ಹೊರಲಿದ್ದಾರೆ. ಕರಗ ವೀಕ್ಷಣೆಗೆ ತಮಿಳುನಾಡು, ಆಂಧ್ರ ಸೇರಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರಲಿದ್ದಾರೆ ಎಂದರು.

ಏ.6ರ ಬೆಳಿಗ್ಗೆ 10ಕ್ಕೆ ಗಣಪತಿಹೋಮ, ಮಹಾಮಂಗಳಾರತಿ ಮೂಲಕ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. 7ರಂದು ಚಂಡಿಕಾ ಹೋಮ, ಜಾಲಾರಿ ಗಂಗಾದೇವಿ ಸಹಸ್ರನಾಮಾರ್ಚನೆ, 8ರಂದು ಕಳಶ ಸ್ಥಾಪನೆ, ಧ್ವಜಾರೋಹಣ, ಪ್ರಸಾದ ವಿನಿಯೋಗ, 9ರಂದು ಅಯ್ಯಪ್ಪಸ್ವಾಮಿ ದೇವಾಲಯದಿಂದ ಧರ್ಮ ರಾಯಸ್ವಾಮಿ ಹಸಿ ಕರಗ, 10ರಂದು ಸಂಜೆ 7ಕ್ಕೆ ಧರ್ಮರಾಯರ ಸಪ್ತಕಳಸ ಕರಗ ನಡೆಯಲಿದೆ ಎಂದರು.

11ರಂದು ಬೆಳಿಗ್ಗೆ 11ಕ್ಕೆ ಕರಗದ ಪೂಜಾರಿ ಕೆ.ಧರ್ಮೇಂದ್ರ ಅವರಿಗೆ ಮಡಲಕ್ಕಿ ಸೇವೆ ಮಧ್ಯಾಹ್ನ 12ಕ್ಕೆ ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ಕಲ್ಯಾಣೋತ್ಸವ ಜರುಗಲಿದೆ. ರಾತ್ರಿ 9ಕ್ಕೆ ಧರ್ಮರಾಯನ ಹೂವಿನ ಕರಗ ಮಹೋತ್ಸವವು ನಡೆಯಲಿದೆ ಎಂದು ಹೇಳಿದರು.

ಹೂವಿನ ಕರಗದ ದಿನ ಎಂ.ಜಿ ರಸ್ತೆ, ಎಚ್.ಎಸ್. ಗಾರ್ಡನ್, ಕುರುಬರ ಪೇಟೆ, ಭುವನೇಶ್ವರಿವೃತ್ತ, ಸಂತೆ ಮಾರುಕಟ್ಟೆಯಲ್ಲಿ ರಸಮಂಜರಿ, ವಾದ್ಯಗೋಷ್ಠಿ, ನಾಟಕ ಪ್ರದರ್ಶನ ನಡೆಯಲಿದೆ. 25ಕ್ಕೂ ಹೆಚ್ಚಿನ ಮುತ್ತಿನ ಪಲ್ಲಕ್ಕಿಗಳಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ಜರುಗಲಿದೆ ಎಂದು ವಿವರಿಸಿದರು.

12ರ ಭಾನುವಾರ ರಾತ್ರಿ ಜಾಲಾರಿ ಗಂಗಮ್ಮ ದೇವಾಲಯದ ಮುಂಭಾಗ ಅಗ್ನಿಕೊಂಡ ಪ್ರವೇಶ, 13 ರಂದು ಸಂಜೆ 4.00ಕ್ಕೆ ಭುವನೇಶ್ವರಿ ವೃತ್ತದಲ್ಲಿ ವಸಂತೋತ್ಸವ ನಡೆಯಲಿದೆ ಎಂದು ಹೇಳಿದರು.

ಕರಗ ಸಮಿತಿ ಗೌರವಾಧ್ಯಕ್ಷ ವಿ.ಗಂಗಾಧರಮೂರ್ತಿ, ರಾಮು, ಮುನಿಕೃಷ್ಣ, ನಗರಸಭೆ ಮಾಜಿ ಸದಸ್ಯ ಮೊಬೈಲ್ ಬಾಬು, ಸುದರ್ಶನ್, ರಾಮಕೃಷ್ಣ, ಶೇಖರ್ ಬಾಬು, ರಘು ಲೋಕೇಶ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-18-890239861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.