ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸದ ಕಾಂಗ್ರೆಸ್, ನಾರಿ ಶಕ್ತಿ ವಂದನಾ ಅಧಿನಿಯಮ ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಸೀಟು ಕೊಡುವ ಕಾಂಗ್ರೆಸ್, ವಿಧಾನಸೌಧಕ್ಕೆ ಹೋಗಲು ಸೀಟು ಕೊಡುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಪ್ರಧಾನಿ ಮೋದಿ ನಾರಿ ಶಕ್ತಿ ವಂದನಾ ಅಧಿನಿಯಮ ತಿದ್ದುಪಡಿ ಮಸೂದೆ ಜಾರಿಗೆಮುಂದಾಗಿದ್ದರು. ಆದರೆ ಕಾಂಗ್ರೆಸ್ ಸೇರಿ ‘ಇಂಡಿ’ ಕೂಟದ ಸದಸ್ಯರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದ್ದಾರೆ ಎಂದರು.

60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿ ನೀಡಲಿಲ್ಲ. 1996 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಹಿಳಾ ಮೀಸಲಾತಿ ತರುವ ಪ್ರಯತ್ನಿಸಿದಾಗ ಯಾರೂ ಬೆಂಬಲ ಕೊಡಲಿಲ್ಲ. ಇದೇ ರೀತಿ ಅಟಲ್ ಬಿಹಾರಿ ವಾಜಪೇಯಿ ಪ್ರಯತ್ನ ಮಾಡಿದ್ದರು. ಮನಮೋಹನ್ ಸಿಂಗ್ ಕಾಲದಲ್ಲೂ ರಾಜ್ಯಸಭೆಯಲ್ಲಿ ಮಾತ್ರ ಮಸೂದೆ ಪಾಸ್ ಆಗಿತ್ತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಇತಿಹಾಸ ಎಂದರು.

2029ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎನ್ನುವ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ. ಸಂವಿಧಾನದ ವಿಧಿ 82ರ ಪ್ರಕಾರ, ಜನಗಣತಿ ಬಳಿಕ ಮರುವಿಂಗಡಣೆಯ ಸಮಿತಿ ರಚಿಸಬೇಕು. ಜನಸಂಖ್ಯೆ ಆಧಾರದಲ್ಲೇ ಮರುವಿಂಗಡಣೆ ನಡೆಯಬೇಕು ಎಂದು ಹೇಳಲಾಗಿದೆ.

ಆ ರೀತಿ ಮಾಡದಿದ್ದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿತ್ತು. ಏಕೆಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿ ಆರ್ಥಿಕವಾಗಿ ಸುದೃಢವಾಗಿವೆ. ಆದರೆ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಸಮರ್ಪಕವಾಗಿ ಜಾರಿಯಾಗಿಲ್ಲ. ಜನಸಂಖ್ಯೆಯ ಆಧಾರದಲ್ಲೇ ಮಾಡಿದ್ದರೆ ಕರ್ನಾಟಕದಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುತ್ತಿತ್ತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಸೂದೆಯಲ್ಲಿ ತಿದ್ದುಪಡಿ ತಂದು ಮತ್ತೆ ಮಂಡಿಸಿದ್ದಾರೆ. ಇದರಿಂದಾಗಿ ಎಲ್ಲ ರಾಜ್ಯಗಳಲ್ಲಿ ಶೇ 50 ರಷ್ಟು ಕ್ಷೇತ್ರ ಹೆಚ್ಚಿಸಲಾಗಿದೆ. ಇದು ಜಾರಿಯಾಗಿದ್ದರೆ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42 ಕ್ಕೆ ಏರುತ್ತಿತ್ತು ಎಂದರು.

ಮಹಿಳೆಯರಿಗೆ ₹ 2,000 ಕೊಟ್ಟರೆ ಸಾಕು, ಅವರಿಗೇಕೆ ರಾಜಕಾರಣ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಅನಿಲ ಸಂಪರ್ಕ ನೀಡಿದೆ. 10 ಕೋಟಿ ಶೌಚಾಲಯಗಳ ನಿರ್ಮಾಣ, ಮಹಿಳೆಯರ ಹೆಸರಲ್ಲಿ ₹ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುದ್ರಾ, ಲಕ್ಪತಿ ದೀದಿ ಮೊದಲಾದ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೆರವಾಗಿದೆ. ಇದರ ಜೊತೆಗೆ ರಾಜಕೀಯ ಶಕ್ತಿ ನೀಡಿದ್ದರೆ ಮಹಿಳೆಯರು ಶಾಸಕರು, ಸಂಸದರು ಆಗುತ್ತಿದ್ದರು. ಇದರಿಂದ ದೊಡ್ಡ ಬದಲಾವಣೆ ಆಗುತ್ತಿತ್ತು ಎಂದರು.

ಕಾಂಗ್ರೆಸ್ ಈ ಮಸೂದೆಗೆ 10 ಸಲ ವಿರೋಧ ವ್ಯಕ್ತಪಡಿಸಿದೆ. ನಮ್ಮ ಸರ್ಕಾರದ ಅವಧಿ ಇನ್ನೂ ಮೂರು ವರ್ಷವಿದೆ. ಅಷ್ಟರಲ್ಲಿ ಈ ಮಸೂದೆ ಜಾರಿಗೊಳಿಸುತ್ತೇವೆ ಎಂದರು.

ಈ ಮಸೂದೆಯ ಸೋಲು ದೇಶದ 70 ಕೋಟಿ ಮಹಿಳೆಯರ ಸೋಲು. ಕಾಂಗ್ರೆಸ್ನ ಈ ಧೋರಣೆಯಿಂದಾಗಿ ಮುಂದೆ ರಾಜ್ಯದಲ್ಲಿ ಸೋಲು ಅನುಭವಿಸಲಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾಡಿನ ಮಹಿಳೆಯರು ತಮ್ಮ ಶಕ್ತಿಯನ್ನು ಕಾಂಗ್ರೆಸ್ಗೆ ತೋರಿಸಬೇಕು ಎಂದರು.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾರಿ ಶಕ್ತಿ ವಂದನಾ ಯೋಜನೆ ವಿರೋಧಿಸಿದ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಲಾಗವುದು ಎಂದರು.

ಮಸೂದೆಗೆ ಸೋಲಾದ ತಕ್ಷಣ ಸಂತೋಷ ವ್ಯಕ್ತಪಡಿಸಿದರು. ಇದು ವಿಕೃತಿ. ಈ ಮೂಲಕ ಭಾರತದ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಚೂರಿ ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿದರು.

ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ನಗರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ಪ್ರಭು, ಪದಾಧಿಕಾರಿಗಳಾದ ನರ್ಮದಾ ರೆಡ್ಡಿ, ಸುಮಿತ್ರಾ, ಮಾಲಿನಿ, ಭಾರತಿ, ಮಲ್ಲಿಕಾ, ತ್ರಿವೇಣಿ, ಶಾಂತಾ ಶಿವರಾಂ, ಭಾಗ್ಯಮ್ಮ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-16-1740598980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.