ವ್ಯಾಲಿ ನೀರಿನ ಮೇಲೆ ಅನುಮಾನ!
ಈಗಾಗಲೇ 2 ಹಂತದಲ್ಲಿ ಸಂಸ್ಕರಿಸಿದ ಬೆಂಗಳೂರಿನ ಎಚ್.ಎನ್ ವ್ಯಾಲಿ ತ್ಯಾಜ್ಯ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. 2 ಹಂತದಲ್ಲಿ ಸಂಸ್ಕರಿಸಿದ ವ್ಯಾಲಿ ನೀರಿನಲ್ಲಿ ಹಲವು ರಾಸಾಯನಿಕ ಅಂಶಗಳು ಹಾಗೆಯೇ ಉಳಿಯಲಿದ್ದು, ಇದು ಅಂತರ್ಜಲ ಕಲುಷಿತಕ್ಕೆ ಕಾರಣವಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹೀಗಾಗಿ 3 ಹಂತದಲ್ಲಿ ವ್ಯಾಲಿ ನೀರನ್ನು ಸಂಸ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ಕೆರೆಗಳಿಗೆ ಹರಿಸಬೇಕು ಎಂಬ ಒತ್ತಾಯವನ್ನು ಸರ್ಕಾರದ ಮುಂದಿಟ್ಟಿದ್ದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಂದವಾರ ಸೇರಿ ಹಲವು ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ಹರಿಯುತ್ತಿದ್ದು, ಇದರಿಂದಲೇ ಮೀನುಗಳು ಮೃತಪಟ್ಟಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.