ಚಿಕ್ಕಬಳ್ಳಾಪುರ: ಜಿಲ್ಲೆಯ ಕೆರೆಗಳಿಗೆ ಹರಿಸುವ ಎಚ್.ಎನ್ ವ್ಯಾಲಿ ನೀರು ಸಂಗ್ರಹವಾಗುವ ನಗರದ ಕಂದವಾರ ಕೆರೆ ಕಲುಷಿತ ನೀರಿನ ಕಾರಣಕ್ಕೆ ಚರ್ಚೆಗೆ ಒಳಗಾಗಿದೆ. ಆದರೆ ಕಂದವಾರ ಕೆರೆ ಸುತ್ತಲೂ ಘನ ತ್ಯಾಜ್ಯ ಕೆರೆಯನ್ನು ಇನ್ನಷ್ಟು ಮಲಿನಗೊಳಿಸಲಾಗುತ್ತಿದೆ.

ನಗರದ ಮೈಲಪ್ಪನಹಳ್ಳಿ, ಕಳವಾರಕ್ಕೆ ತೆರಳುವ ರಸ್ತೆಯಲ್ಲಿ ಕಂದವಾರ ಕೆರೆ ಸುತ್ತ ನಗರದ ಜನರು ಬಳಸಿರುವ ಪ್ಲಾಸ್ಟಿಕ್, ಅನುಪಯುಕ್ತ ತ್ಯಾಜ್ಯವನ್ನು ಕೆರೆ ಅಂಗಳಕ್ಕೆ ಸುರಿಯಲಾಗುತ್ತಿದೆ. ಈ ಮೂಲಕ ಕೆರೆಯ ಪರಿಸರವನ್ನು ಹಾಳು ಮಾಡಲಾಗುತ್ತಿದೆ.

ಒಮ್ಮೆ ಕಂದವಾರ ಕೆರೆ ಸುತ್ತಲೂ ಕಣ್ಣಾಯಿಸಿದರೆ ಸಾಕು ತೆರವುಗೊಂಡ ಮನೆಗಳ ತ್ಯಾಜ್ಯದ ರಾಶಿ ಕಾಣುತ್ತದೆ. ಬಳಸಿ ಬಿಸಾಡಿರುವ ಹೇರಳ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಕೆರೆಯ ಒಡಲು ಸೇರುತ್ತಿವೆ.

ಕಂದವಾರ ಕೆರೆಯು ಎಚ್.ಎನ್ ವ್ಯಾಲಿ ನೀರು ಬಂದ ಬಳಿಕ ಅದರ ಸಂಪೂರ್ಣ ಚಿತ್ರಣ ಬದಲಾಗಿದೆ. ಕೆರೆಯಲ್ಲಿ ಜುಂಡು ಬೆಳೆದು ಕೆರೆಯು ಕಾಣದಂತೆ ಆಗಿದೆ. ಈ ನಡುವೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ, ಒಣ ಕಸವನ್ನು ನಗರಸಭೆಯ ವಾಹನಗಳಿಗೆ ಕೊಡದೆ ನೇರವಾಗಿ ಕಂದವಾರ ಕೆರೆಯ ಅಕ್ಕಪಕ್ಕ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.

ಹಳೇ ಕಟ್ಟಡಗಳ ಘನ ತ್ಯಾಜ್ಯ ಕೂಡ ಕೆರೆ ಅಂಗಳದಲ್ಲಿ ಬೆಟ್ಟದ ಸಾಲಿನಂತೆ ಶೇಖರಣೆ ಆಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-16-60592346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.