ಚಿಕ್ಕಬಳ್ಳಾಪುರ: ಪ್ರೊ.ಕೋಡಿರಂಗಪ್ಪ ಅವರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅವಧಿ ನವೆಂಬರ್ಗೆ ಕೊನೆಗೊಳ್ಳಲಿದೆ. ಚುನಾವಣೆಗೆ ಇನ್ನೂ ಏಳು ತಿಂಗಳಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಲ್ಲಿ ಈಗಿನಿಂದಲೇ ‘ಅಧ್ಯಕ್ಷ’ ಸ್ಥಾನದ ಬಗ್ಗೆ ಚರ್ಚೆಗಳು ಗರಿಗೆದರಿವೆ.

ನಾಲ್ಕಾರು ಜನ ಪರಿಷತ್ ಸದಸ್ಯರು ಸೇರಿದ ಕಡೆ, ಕನ್ನಡ ಚಟುವಟಿಕೆಗಳು ನಡೆಯುವ ಕಡೆ, ಮಾಧ್ಯಮದವರ ಜೊತೆ–ಹೀಗೆ ಪರಿಷತ್ನ ಸದಸ್ಯರು, ಪದಾಧಿಕಾರಿಗಳು ಆಂತರಿಕವಾಗಿ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಲ್ಲಿ ಬಣ ರಾಜಕೀಯವೂ ಜೋರಾಗಿದೆ. ಈ ಬಣ ರಾಜಕೀಯದ ಕಾರಣದಿಂದಲೇ ಕಸಾಪ ಚುನಾವಣೆಗಳು ಪೈಪೋಟಿಯಿಂದ ನಡೆಯುತ್ತವೆ. ಜಾತಿ, ಹಣ, ಪ್ರಭಾವ ಸೇರಿದಂತೆ ವಿವಿಧ ವಿಚಾರಗಳೂ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಪ್ರಧಾನವಾಗಿ ಚರ್ಚೆಗೆ ಒಳಗಾಗುತ್ತವೆ.

ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಷರಿಷತ್ ಚುನಾವಣೆಯು ಈ ಹಿಂದಿನಿಂದಲೂ ಭರಾಟೆಯಿಂದಲೇ ನಡೆಯುತ್ತದೆ. ಪ್ರತಿಷ್ಠೆಯ ಕಣವೂ ಆಗಿದೆ. 2021ರ ನವೆಂಬರ್ನಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ, ಅಧ್ಯಕ್ಷ ಸ್ಥಾನ ವಿಚಾರವಾಗಿ ಆ ವರ್ಷದ ಫೆಬ್ರುವರಿಯಲ್ಲಿಯೇ ಚರ್ಚೆಗಳು ಆರಂಭವಾಗಿದ್ದವು. ಪ್ರೊ.ಕೋಡಿ ರಂಗಪ್ಪ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಗಳು ಚುನಾವಣೆಗೆ ಐದಾರು ತಿಂಗಳಿದೆ ಎನ್ನುವಾಗಲೇ ಆರಂಭವಾಗಿದ್ದವು.

ಈ ಎಲ್ಲ ಲೆಕ್ಕಾಚಾರದಲ್ಲಿ ಈಗಿನಿಂದಲೂ ಪರಿಷತ್ ಚುನಾವಣೆಯ ಚರ್ಚೆಗಳು ಗರಿಗೆದರಿವೆ. ದಿನಗಳು ಕಳೆದಂತೆ ಈ ಚರ್ಚೆಗಳು ಕಾವೇರಲಿವೆ.

2021ರ ನವೆಂಬರ್ 21ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಂದು ಅಧ್ಯಕ್ಷರಾಗಿದ್ದ ಕೈವಾರ ಶ್ರೀನಿವಾಸ್ ಮತ್ತು ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಅವರ ನಡುವೆ ತೀವ್ರ ಸ್ಪರ್ಧೆ ಎದುರಾಗಿತ್ತು.

ಕೋಡಿ ರಂಗಪ್ಪ ಅವರು 3,420 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕೈವಾರ ಶ್ರೀನಿವಾಸ್ 1,041 ಮತಗಳನ್ನು ಪಡೆದರು. 2,379 ಅಂತರಗಳಿಂದ ರಂಗಪ್ಪ ವಿಜಯದ ನಗೆ ಬೀರಿದರು. ಜಿಲ್ಲೆಯಲ್ಲಿ ಕನ್ನಡದ ತೇರನ್ನು ಎಳೆಯುವ ಅವಕಾಶ ಪಡೆದರು. ರಂಗಪ್ಪ ಅವರ ಅಧಿಕಾರದ ಅವಧಿ 2026ರ ನವೆಂಬರ್ಗೆ ಐದು ವರ್ಷಗಳು ಪೂರ್ಣವಾಗಲಿದೆ.

ಮಹಿಳೆಯರಿಗೆ ಸ್ಥಾನ: ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಲ್ಲಿ ಮಹಿಳೆಯರೇ ಪ್ರಮುಖ ಸ್ಥಾನದಲ್ಲಿ ಇದ್ದಾರೆ. ಕನ್ನಡ ಕಾರ್ಯಕ್ರಮಗಳ ಸಂಘಟನೆ, ಆಯೋಜನೆಗಳಲ್ಲಿಯೂ ಪ್ರಮುಖವಾಗಿ ಕೆಲಸ ಮಾಡುವರು. ಆದರೆ ಇಲ್ಲಿಯವರೆಗೆ ಕಸಾಪ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ದೊರೆತಿಲ್ಲ. ಆದ್ದರಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿಯುವರೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಚರ್ಚಿಸಿ ನಿರ್ಧಾರ: ಕೈವಾರ ಶ್ರೀನಿವಾಸ್ ಒಮ್ಮೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಮತ್ತೆ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವರೇ ಎನ್ನುವ ಚರ್ಚೆಗಳು ನಡೆದಿವೆ.

‘ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕೇ ಎನ್ನುವ ಬಗ್ಗೆ ಕಸಾಪ ಸದಸ್ಯರು ಮತ್ತು ಹಿತೈಷಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವೆ. ನಾನು ಅಧ್ಯಕ್ಷನಾಗಿದ್ದ ವೇಳೆ ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿ ಇದೆ’ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ನಡೆಯುತ್ತಿರುವ ಚರ್ಚೆಗಳು ಗಮನಿಸಿದರೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಖಚಿತ ಎನ್ನುವ ಸ್ಥಿತಿ ಇದೆ.

‘ಮತ್ತೆ ಸ್ಪರ್ಧಿಸುವುದಿಲ್ಲ’

ನವೆಂಬರ್ಗೆ ನನ್ನ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಳ್ಳಲಿದೆ. ಮತ್ತೆ ನಾನು ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕನ್ನಡ ಕೆಲಸಗಳನ್ನು ಉತ್ತಮವಾಗಿ ಮಾಡುವವರನ್ನು ಬೆಂಬಲಿಸುವೆ. ಪ್ರೊ.ಕೋಡಿ ರಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.