ಚಿಕ್ಕಬಳ್ಳಾಪುರ: ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಕೈವಾರದ ಯೋಗಿ ನಾರೇಯಣ ಮಠದಿಂದ ಒಂದು ವರ್ಷಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯು ತಾಲ್ಲೂಕಿನ ಬಂಡಹಳ್ಳಿ ಮಲ್ಲೆಮ್ಮ ದೇವಾಲಯದಿಂದ ಮಂಡಿಕಲ್ಲು ಆಂಜನೇಯಸ್ವಾಮಿ ದೇವಾಲಯದವರೆಗೆ ಶನಿವಾರ ನಡೆಯಿತು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 6ಕ್ಕೆ ಬಂಡಹಳ್ಳಿ ಮಲ್ಲೆಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು. ಭಕ್ತರು ನಾರೇಯಣ ಧ್ವಜ ಹಿಡಿದು ಭಜನೆ ಮಾಡುತ್ತ ಪಾದಯಾತ್ರೆಯಲ್ಲಿಭಾಗವಹಿಸಿದ್ದರು. ಬಂಡಹಳ್ಳಿ ಶ್ರೀಮಲ್ಲೆಮ್ಮ ದೇವಾಲಯದಲ್ಲಿರುವ ವಿಶೇಷ ಎತ್ತು ಪಾದಯಾತ್ರೆಗೆ ಸಾಥ್ ನೀಡಿತು. ದೇವಾಲಯದಲ್ಲಿ ಎತ್ತಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ನಂತರ ಪಿಲ್ಲಗುಂಡ್ಲಹಳ್ಳಿ, ಶೆಟ್ಟಿಗೆರೆ, ಬೀಸಗಾರಹಳ್ಳಿ, ಅಡ್ಡಗಲ್, ಪಾತೂರು, ಕಾಶಿಕಡದಂ, ಚನ್ನಹಳ್ಳಿ ಕ್ರಾಸ್, ಕೆರೇನಹಳ್ಳಿ, ನಲ್ಲಪ್ಪನಹಳ್ಳಿ, ದೊಡ್ಡಹಳ್ಳಿ ಕ್ರಾಸ್, ಮಾರ್ಗವಾಗಿ ಮಂಡಿಕಲ್ಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಪಾದಯಾತ್ರೆಯ ಸಂಕೀರ್ತನೆಯ ಸಮರ್ಪಣೆ ಮಾಡಲಾಯಿತು.

ಶ್ರೀರಾಮದಂಡು ಪಾದಯಾತ್ರೆಗೆ ಗ್ರಾಮಗಳು ಸಿಂಗಾರಗೊಂಡಿದ್ದವು. ಗ್ರಾಮಸ್ಥರು ದಾರಿಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಿದ್ದರು. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ರಂಗೋಲಿ ಬಿಡಿಸಿದ್ದರು. ಶ್ರೀರಾಮರ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ವಿಶೇಷಪೂಜೆಗಳನ್ನು ಸಲ್ಲಿಸಿ ಆರತಿ ಬೆಳಗಿದರು.

ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳಿಗೆ ನೀರು, ಹಾಲು, ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿದರು. ಪ್ರತಿ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಅಡ್ಡಗಲ್ ಹಾಗೂ ಮಂಡಿಕಲ್ಲುನಲ್ಲಿ ಭಕ್ತರು ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದರು.

ಪಾದಯಾತ್ರೆಯ ಭಜನೆ ಸಂಕೀರ್ತನೆಯ ಉಸ್ತುವಾರಿಯನ್ನು ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ವಹಿಸಿದ್ದರು.

ಪಾದಯಾತ್ರೆಯಲ್ಲಿ ಕೈವಾರ ಮಠ ಟ್ರಸ್ಟ್ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಸದಸ್ಯರಾದ ಕೆ.ನರಸಿಂಹಪ್ಪ, ಕೆ.ವಿ.ಸುರೇಶ್, ರಾಮಕೋಟಿ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ಉಪಾಧ್ಯಕ್ಷ ರಂಗಣ್ಣ ಹಾಗೂ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-1669047551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.