ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿದೆ. ಬಯಲು ಸೀಮೆಯ ಈ ಜಿಲ್ಲೆಯಲ್ಲಿ ಕೆರೆಗಳಷ್ಟೇ ಹೆಚ್ಚಿವೆ. ಆದರೆ ಈ ಕೆರೆಗಳಲ್ಲಿ ನೀರು ಯಾವ ಪ್ರಮಾಣದಲ್ಲಿದೆ ಎಂದು ಗಮನಿಸಿದರೆ ನಿರಾಸೆ ಎದ್ದು ಕಾಣುತ್ತದೆ.

ಕೆರೆಗಳಲ್ಲಿ ನೀರಿಲ್ಲ. ಇದ್ದರೂ ಅಲ್ಪಸ್ವಲ್ಪವಷ್ಟೇ! ಬಹುತೇಕ ಕೆರೆಗಳು ನೀರಿಲ್ಲದೆ ಒಣಗುತ್ತಿದ್ದರೆ ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ವಿಶೇಷವಾಗಿ ಬೇಸಿಗೆಯ ಈ ದಿನಗಳಲ್ಲಿ ಕೆರೆಗಳಲ್ಲಿ ನೀರು ಇದ್ದರೆ ಅನುಕೂಲವಾಗುತ್ತಿತ್ತು.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 203 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,332 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಒಂದಿಷ್ಟು ಕೆರೆಗಳನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕೆರೆಗಳಲ್ಲಿ ನೀರು ವರ್ಷವಿಡೀ ಇರಬೇಕು. ಎಚ್.ಎನ್.ವ್ಯಾಲಿಯ ನೀರನ್ನು ಕೆಲವು ಕೆರೆಗಳಿಗೆ ಹರಿಸಲಾಗುತ್ತಿದೆ. ವ್ಯಾಲಿ ನೀರಿನ ಕಾರಣ ಆ ಕೆರೆಗಳಲ್ಲಿ ವರ್ಷ ಪೂರ್ಣ ನೀರು ಇರುತ್ತದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಬೋಟಿಂಗ್ ನಡೆಸಲು ಅವಕಾಶ ಸಹ ನೀಡಿದೆ. ಹೀಗೆ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಸದ್ಯ ಶೇ 33.30ರಷ್ಟು ನೀರಿದೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 1,332 ಕೆರೆಗಳು ಜಿಲ್ಲೆಯಲ್ಲಿವೆ. ಈ ಕೆರೆಗಳಲ್ಲಿ ಸದ್ಯ ಶೇ 15.33ರಷ್ಟು ಮಾತ್ರ ನೀರಿದೆ. ಬಹುತೇಕ ಜಿ.ಪಂ ಕೆರೆಗಳು ಬರಡಾಗಿವೆ. ಕೆಲವು ಕಡೆಗಳಲ್ಲಿ ನೀರಿದ್ದರೂ ಅದು ಅಲ್ಪ ಪ್ರಮಾಣ.

ನೀರಾವರಿ ವಿಚಾರವಾಗಿ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಹೋರಾಟಗಳು ನಡೆಯುತ್ತಿವೆ. ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳು, ಕಾಲುವೆಗಳನ್ನು ಪುನಶ್ಚೇತನಗೊಳಿಸಬೇಕು. ಆ ಮೂಲಕ ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತದೆ ಎಂದು ನೀರಾವರಿ ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿಗೂ ರಾಜಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳು ಆಗಿಲ್ಲ.

ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಮತ್ತೊಂದು ಕೆರೆಯತ್ತ ಮುಖ ಮಾಡುತ್ತದೆ. ಹೀಗೆ ಒಂದೊಂದು ಕೆರೆಗೂ ನೀರು ಹರಿವಿನ ವಿಚಾರವಾಗಿ ಪರಸ್ಪರ ಸಂಬಂಧವಿದೆ. ಆದರೆ ಈ ಪರಸ್ಪರ ಸಂಬಂಧದ ಕೊಂಡಿಗಳು ಕಡಿದಿವೆ. ಪರಿಣಾಮ ಮಳೆ ಬಿದ್ದರೂ ಕೆರೆಗಳು ತುಂಬುತ್ತಿಲ್ಲ.

ಹೂಳು ಸಹ ದೊಡ್ಡ ಪ್ರಮಾಣದಲ್ಲಿರುವುದು ಕೆರೆಗಳಲ್ಲಿನ ನೀರು ಬೇಗ ಖಾಲಿಯಾಗಲು ಪ್ರಮುಖ ಕಾರಣವಾಗಿದೆ. ಮಳೆ ಕೊರತೆ, ಹೂಳು, ಒತ್ತುವರಿ, ರಾಜಕಾಲವೆಗಳ ನಾಶ, ಕತ್ತರಿಸಿರುವ ಕೆರೆಗಳ ಕೊಂಡಿ...ಹೀಗೆ ಹಲವು ಕಾರಣಗಳಿಂದ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ.

ಜಿಲ್ಲೆಯ ಜನರ ಜೀವನಾಡಿಗಳೇ ಕೆರೆಗಳು. ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಅಭಿವೃದ್ಧಿಗೊಳ್ಳುತ್ತದೆ. ರೈತರಿಗೂ ಅನುಕೂಲ. ಜಿಲ್ಲಾಡಳಿತ ಕೆರೆಗಳ ಪುನರುಜ್ಜೀವನದ ಜೊತೆಗೆ ನೀರು ಕೆರೆಗಳಿಗೆ ಸರಾಗವಾಗಿ ಹರಿಯುವಂತೆ ಕ್ರಮವಹಿಸಬೇಕು ಎನ್ನುವುದು ಪ್ರಜ್ಞಾವಂತರು ಮತ್ತು ನೀರಾವರಿ ಹೋರಾಟಗಾರರ ಮನವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-16-601480562

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.