ಚಿಕ್ಕಬಳ್ಳಾಪುರ: ತಾಲ್ಲೂಕಿನ ಆರೂರು ಗ್ರಾಮದ ಬಳಿ ಮಿನಿಟೆಂಪೊ ಚಾಲಕ, ಮಾಲೀಕನೂ ಆಗಿರುವ ವ್ಯಕ್ತಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಕುರುಬರಕುಂಟೆ ಕಾಲೊನಿ ನಿವಾಸಿ ಸುಬ್ರಮಣಿ (48) ಮೃತರು.

ಕಳೆದ ಶನಿವಾರ ಮನೆಯಿಂದ ತುಮಕೂರಿಗೆ ಬಾಡಿಗೆ ಇದೆ ಎಂದು ಹೊರ ಹೋಗಿದ್ದ ಸುಬ್ರಮಣಿ ಮತ್ತೆ ಮನೆಗೆ ಬಂದಿರಲಿಲ್ಲ. ಕರೆ ಮಾಡಿದರೂ ಫೋನ್ ಸ್ವಿಚ್ಡ್ ಅಫ್ ಆಗಿತ್ತು. ಇದರಿಂದ ಆತನ ಸಂಬಂಧಿಕರು ಹುಡಕಾಟ ನಡೆಸಿದಾಗ ಮಿನಿ ಟೆಂಪೊ ಆರೂರು ಬಳಿ ಹೆದ್ದಾರಿ ಪಕ್ಕದಲ್ಲೇ ತುಳಸಿ ಗ್ರಾಂಡ್ ಹೋಟೆಲ್ ಸಮೀಪ ಪತ್ತೆಯಾಗಿದೆ.

ನಿಲ್ಲಿಸಿದ್ದ ಮಿನಿ ಟೆಂಪೊ ಹಿಂಭಾಗದ ಕ್ಯಾಬಿನ್ನಲ್ಲಿ ಸುಬ್ರಮಣಿ ಅವರ ಮೃತದೇಹ ಪತ್ತೆಯಾಗಿದೆ. ಅವರ ತಲೆಗೆ ಗಾಯವಾಗಿದೆ. ಮೃತನು ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಅವರ ಕಡೆಯವರೇ ಕರೆಸಿ, ಕೊಲೆ ಮಾಡಿರಬಹುದು ಎಂದು ಸುಬ್ರಮಣಿ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-15-432185080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.