ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ 18 ವರ್ಷ ಪೂರ್ಣವಾಗಿದೆ. ಆದರೆ ವಿಪರ್ಯಾಸ ಎಂದರೆ ಇಂದಿಗೂ ಜಿಲ್ಲೆಯ ಅರ್ಧದಷ್ಟು ಗ್ರಾಮೀಣ ರಸ್ತೆಗಳು ಡಾಂಬರು ಕಂಡಿಲ್ಲ. ಮಳೆಗಾಲ ಶುರುವಾಗುವುದರಿಂದ ಈ ಮಣ್ಣಿನ ರಸ್ತೆಗಳಲ್ಲಿ ಸುಗಮ ವಾಹನ ಅಂತೂ ಸಂಚಾರ ಕನಸಿನ ಮಾತಾಗಿದೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ನೀಡಿರುವ ಅಂಕಿ ಅಂಶಗಳು ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅವ್ಯವಸ್ಥೆಯನ್ನು ತೆರೆದಿಟ್ಟಿವೆ. ಜಿಲ್ಲೆಯ ಒಟ್ಟು ಗ್ರಾಮೀಣ ರಸ್ತೆಗಳ ಪೈಕಿ ಅರ್ಧದಷ್ಟು ರಸ್ತೆಗಳು ಅಭಿವೃದ್ಧಿ ಕಾಣದೆ ಮಣ್ಣಿನ ರಸ್ತೆಗಳಾಗಿ ದಶಕಗಳಿಂದ ಉಳಿದಿವೆ.

ಜಿಲ್ಲೆಯಲ್ಲಿ ಡಿಆರ್ಆರ್ಪಿ ಪಟ್ಟಿಯಂತೆ ಒಟ್ಟು 4,388.40 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳು ಇವೆ. ಆ ಪೈಕಿ 1,947 ಕಿ.ಮೀ ಉದ್ದದ ರಸ್ತೆಗಳು ಮಾತ್ರ ಡಾಂಬರು ರಸ್ತೆಗಳಾಗಿದ್ದರೆ ಉಳಿದ 398.28 ಕಿ.ಮೀ ಜಲ್ಲಿ ರಸ್ತೆಗಳಾಗಿವೆ.

2,042.75 ಕಿ.ಮೀ ಉದ್ದದ ರಸ್ತೆಗಳು ಮಣ್ಣಿನ ರಸ್ತೆಗಳಾಗಿವೆ. ಹೀಗೆ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ರಸ್ತೆಗಳು ಯೋಗ್ಯವಿಲ್ಲದೇ ಜನರು ನಗರ, ಪಟ್ಟಣಗಳಿಗೆ ಹೋಗಿ ಬರಲು ನರಕಯಾತನೆ ಅನುಭವಿಸುವಂತಾಗಿದೆ.

ಯಾವುದೇ ಹಳ್ಳಿ, ನಗರ, ಪಟ್ಟಣ ಅಭಿವೃದ್ಧಿ ಆಗಬೇಕಾದರೆ ಸಂಪರ್ಕ ಸಾಧಿಸುವ ರಸ್ತೆಗಳ ಅಭಿವೃದ್ಧಿ ಬಹಳ ಮುಖ್ಯ. ಆದರೆ ಜಿಲ್ಲೆಯಾಗಿ ಇನ್ನೂ ಅರ್ಧದಷ್ಟು ಗ್ರಾಮೀಣ ರಸ್ತೆಗಳು ಮಣ್ಣಿನವಾಗಿವೆ.

ಈ ಪರಿಣಾಮ ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರ ಪಾಡು ಹೇಳ ತೀರದಾಗಿದೆ.

ಜಿಲ್ಲೆಯ ನಗರ , ಪಟ್ಟಣಗಳಿಗೆ ಹೊಂದಿಕೊಂಡಿರುವ ಗ್ರಾಮಗಳ ರಸ್ತೆಗಳು ಸ್ವಲ್ಪ ಸುಧಾರಿಸಿವೆ. ಉಳಿದಂತೆ ತಾಲ್ಲೂಕು ಕೇಂದ್ರಗಳಿಂದ 40, 50 ಕಿ.ಮೀ ದೂರದಲ್ಲಿರುವ ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಇಂದಿಗೂ ರಸ್ತೆ ಇಲ್ಲ.

ಜಿಲ್ಲೆಯಲ್ಲಿ ತಮ್ಮ ಗ್ರಾಮಗಳಿಗೆ ಸೂಕ್ತ ರಸ್ತೆ ನಿರ್ಮಿಸಿ, ಡಾಂಬರು ಹಾಕಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ತಾಲ್ಲೂಕು ಆಡಳಿತಕ್ಕೆ, ಚುನಾಯಿತ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ನಾಗರಿಕರು ಅಹವಾಲು ಸಲ್ಲಿಸುತ್ತಲೇ ಇದ್ದಾರೆ. ಆದರೆ ಪರಿಸ್ಥಿತಿಗಳು ಮಾತ್ರ ಸುಧಾರಿಸುತ್ತಿಲ್ಲ.

ಜಿಲ್ಲೆಯಲ್ಲಿ ಸದ್ಯ ಬೇಸಿಗೆ ಮುಗಿಯುವ ಹಂತದಲ್ಲಿದೆ. ಮಳೆಗಾಲ ಶುರುವಾಗಲು ಕೆಲವೇ ದಿನಗಳು ಬಾಕಿ ಇವೆ. ಮಳೆಗಾಲ ಆರಂಭವಾದರೂ ಆರೇಳು ತಿಂಗಳ ಕಾಲ ಈ ರಸ್ತೆಗಳಲ್ಲಿ ಓಡಾಡುವುದು ಸವಾಲಿನ ಕೆಲಸ.

ಗ್ರಾಮೀಣ ಭಾಗದಲ್ಲಿ ಡಾಂಬರ್ ಕಾಣದ ಈ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ಕೆಸರುಗದ್ದೆಗಳಾಗುತ್ತವೆ. ಈ ರಸ್ತೆಗಳಲ್ಲಿ ವಾಹನಗಳು, ಜನರು ಸಂಚರಿಸುವುದು ಕಷ್ಟ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-16-1583163519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.