ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮ ಪ್ರವೇಶಕ್ಕೆ ಮುಂದಿನ ದಿನಗಳಲ್ಲಿ ಆನ್ಲೈನ್ನಲ್ಲಿಯೂ ಟಿಕೆಟ್ ಲಭ್ಯವಾಗಲಿದೆ. ಇದರಿಂದ ಗಿರಿಧಾಮದ ಪ್ರವೇಶದ್ವಾರದಲ್ಲಿ ಟಿಕೆಟ್ಗಾಗಿ ಕಾಯುವುದು ತಪ್ಪಲಿದೆ.

ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರು ಪ್ರವೇಶ ದ್ವಾರದಲ್ಲಿ ಟಿಕೆಟ್ ಮತ್ತು ವಾಹನಗಳಿಗೆ ಶುಲ್ಕವನ್ನು ಅಲ್ಲಿರುವ ಕೌಂಟರ್ನಲ್ಲಿ ಪಾವತಿಸಬೇಕು. ಕೌಂಟರ್ನಲ್ಲಿ ಟಿಕೆಟ್ ಪಡೆದ ನಂತರ ಮುಖ್ಯಪ್ರವೇಶ ದ್ವಾರದ ಮೂಲಕ ಗಿರಿಧಾಮ ಪ್ರವೇಶಿಸಬೇಕು.

ವಾರಾಂತ್ಯದ ದಿನಗಳಲ್ಲಿ, ಸರ್ಕಾರಿ ರಜೆ ದಿನಗಳು ಸೇರಿದಂತೆ ರಜೆ ದಿನಗಳಲ್ಲಿ ಪ್ರವಾಸಿಗರು ಹೆಚ್ಚು ಭೇಟಿ ನೀಡುವರು. ಬೇಸಿಗೆ ಮತ್ತು ಮಳೆಗಾಲದ ಅವಧಿಯಲ್ಲಿ ಗಿರಿಧಾಮದ ಸೌಂದರ್ಯ ಮತ್ತು ಆಹ್ಲಾದಕ್ಕೆ ಮನಸೋತು ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ದಾಂಗುಡಿ ಇಡುವರು.

ಆಗ ಟಿಕೆಟ್ಗಾಗಿಯೇ ಸರದಿ ಸಾಲು ದೊಡ್ಡದಿರುತ್ತದೆ. ಒಮ್ಮೊಮ್ಮೆ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾದ ಸನ್ನಿವೇಶಗಳೂ ಇವೆ. ‘ನಾ ಮೊದಲು ತಾ ಮೊದಲು’ ಎಂದು ಪ್ರವಾಸಿಗರು ಟಿಕೆಟ್ಗಾಗಿ ಜಟಾಪಟಿ ನಡೆಸಿದ ನಿದರ್ಶನಗಳು ಇವೆ. ಹೀಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡಿದಾಗ ಕೌಂಟರ್ನಲ್ಲಿನ ಸಿಬ್ಬಂದಿ ಸಹ ಟಿಕೆಟ್ ನೀಡಲು ಪರದಾಡ ಬೇಕಾಗುತ್ತದೆ.

ಜಗಳ, ಜಟಾಪಟಿ, ನೂಕುನುಗ್ಗಲು, ಚಿಲ್ಲರೆ ಸಮಸ್ಯೆ...ಹೀಗೆ ಹಲವು ಸಮಸ್ಯೆಗಳು ಸಹ ಎದುರಾಗಿವೆ. ಇವುಗಳಿಗೆ ಮುಕ್ತಿ ನೀಡಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಆನ್ಲೈನ್ನಲ್ಲಿಯೇ ಟಿಕೆಟ್ ಪಡೆಯುವ ವ್ಯವಸ್ಥೆ ರೂಪಿಸಲು ಮುಂದಾಗಿದೆ. ಪ್ರವಾಸಿಗರು ಆನ್ಲೈನ್ನಲ್ಲಿಯೇ ನಂದಿಗಿರಿಧಾಮ ಪ್ರವೇಶದ ಟಿಕೆಟ್ ಮತ್ತು ವಾಹನ ಶುಲ್ಕವನ್ನೂ ಪಾವತಿಸಲು ಅವಕಾಶ ಮಾಡಿಕೊಡುವ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ.

‘ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವುದರಿಂದ ಹೆಚ್ಚಿನ ಸಮಯ ವ್ಯಯವಾಗುತ್ತದೆ. ವಾಹನ ದಟ್ಟಣೆ ಸಹ ಹೆಚ್ಚುತ್ತದೆ. ಕೆಲವು ವೇಳೆ ನೆಟ್ವರ್ಕ್ ಸಮಸ್ಯೆಯಿಂದ ಪ್ರವಾಸಿಗರಿಗೆ ತೊಂದರೆ ಆಗುತ್ತದೆ. ಇದನ್ನು ತಪ್ಪಿಸಲು ಈಗಾಗಲೇ ಕೆಎಸ್ಟಿಡಿಸಿಯಿಂದ ವೆಬ್ಸೈಟ್ ಸಿದ್ಧಪಡಿಸಲಾಗುತ್ತಿದೆ. ದರ ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಮತ್ತು ಕೆಎಸ್ಟಿಡಿಸಿ ಮೂಲಗಳು ತಿಳಿಸುತ್ತವೆ.

ಜಿಲ್ಲೆಯಲ್ಲಿ ಸದ್ಯ ನಂದಿಗಿರಿಧಾಮ ಮತ್ತು ಗೌರಿಬಿದನೂರು ತಾಲ್ಲೂಕು ಹೊಸೂರಿನ ಎಚ್.ಎನ್.ವಿಜ್ಞಾನ ಕೇಂದ್ರಗಳಿಗೆ ಮಾತ್ರ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತಿದೆ. ಸ್ಕಂದಗಿರಿಗೆ ಚಾರಣಿಗರು ವೆಬ್ಸೈಟ್ ಮೂಲಕವೇ ಟಿಕೆಟ್ ಪಡೆದು ಬರಬೇಕು. ಅದೇ ಮಾದರಿಯಲ್ಲಿಯೇ ನಂದಿಗಿರಿಧಾಮ ಪ್ರವೇಶದ ಟಿಕೆಟ್ ಪಡೆಯಲು ಸಹ ವೆಬ್ಸೈಟ್ ರೂಪಿಸಲಾಗುತ್ತಿದೆ.

ಕೆಎಸ್ಟಿಡಿಸಿ ಕೇಂದ್ರ ಕಚೇರಿ ಮಟ್ಟದಲ್ಲಿ ಈ ಕಾರ್ಯ ಪ್ರಗತಿಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಆನ್ಲೈನ್ನಲ್ಲಿ ಟಿಕೆಟ್ ಪಡೆಯಲು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಆನ್ಲೈನ್ನಲ್ಲಿ ಟಿಕೆಟ್ ಪಡೆಯದೆ ಬಂದವರು ಗಿರಿಧಾಮದಲ್ಲಿರುವ ಕೌಂಟರ್ನಲ್ಲಿ ಟಿಕೆಟ್ ಪಡೆಯಬಹುದು. ಹೀಗೆ ಆನ್ಲೈನ್ನಲ್ಲಿ ಅವಕಾಶ ನೀಡಿದರೂ ಆಪ್ಲೈನ್ನಲ್ಲಿ ಟಿಕೆಟ್ ಖರೀದಿಸುವ ಅವಕಾಶ ಪ್ರವಾಸಿಗರಿಗೆ ಇರುತ್ತದೆ ಎಂದು ಕೆಎಸ್ಟಿಡಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸುತ್ತವೆ.

ದುರಸ್ತಿಯಲ್ಲಿವೆ ಸಿಸಿ ಟಿವಿ ಕ್ಯಾಮೆರಾ

ನಂದಿಗಿರಿಧಾಮದಲ್ಲಿ ಕೆಲವು ಕಡೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳು ದುರಸ್ತಿಗೆ ಬಂದಿವೆ. ಹೀಗೆ ದುರಸ್ತಿಗೆ ಬಂದು ವರ್ಷಗಳಾದರೂ ರಿಪೇರಿ ಭಾಗ್ಯ ಕಂಡಿಲ್ಲ.

ಗಾಂಧಿ ನಿಲಯದಲ್ಲಿ 8, ನೆಹರೂ ನಿಲಯದಲ್ಲಿ 4, ಮಯೂರ ಹೋಟೆಲ್ನಲ್ಲಿ 12, ಹೋಟೆಲ್ ಮುಂಭಾಗದ ವೃತ್ತದಲ್ಲಿ 4, ವಾಹನ ನಿಲುಗಡೆ ಪ್ರದೇಶದಲ್ಲಿ ಎಂಟು ಸಿಸಿ ಟಿವಿ ಕ್ಯಾಮೆರಾಗಳಿವೆ. ಇವು ಸುಸ್ಥಿತಿಯಲ್ಲಿದ್ದು ಕಾರ್ಯಾಚರಣೆ ನಡೆಸುತ್ತಿವೆ.

ಅಮೃತಸರೋವರ, ರಸ್ತೆಗಳು, ಟಿಪ್ಪು ಡ್ರಾಪ್, ವ್ಯೂ ಪಾಯಿಂಟ್ ಸೇರಿದಂತೆ ಕೆಲವು ಕಡೆಗಳಲ್ಲಿ ಅಳವಡಿಸಿರುವ 10ರಿಂದ 12 ಸಿಸಿ ಟಿವಿ ಕ್ಯಾಮೆರಾಗಳು ಹಾಳಾಗಿವೆ.

ಕಿಯೋನಿಕ್ಸ್ ಸಂಸ್ಥೆಯ ಮೂಲಕ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕ್ಯಾಮೆರಾ ದುರಸ್ತಿಯ ಬಗ್ಗೆ ಹಲವು ಬಾರಿ ಚರ್ಚಿಸಿದ್ದರೂ ಸಹ ದುರಸ್ತಿ ಮಾಡಿಲ್ಲ. ಆದ್ದರಿಂದ ಸಿಸಿ ಟಿವಿ ಕ್ಯಾಮೆರಾಗಳ ನಿರ್ವಹಣೆಯನ್ನು ಮತ್ತೊಂದು ಸಂಸ್ಥೆಯಿಂದ ದುರಸ್ತಿಗೊಳಿಸಲು ಕೆಎಸ್ಟಿಡಿಸಿ ಮುಂದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-16-2049892861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.