ಚಿಕ್ಕಬಳ್ಳಾಪುರ: ‘ನಂದಿ ಬೆಟ್ಟದ ರೋಪ್ ವೇ’ ಯೋಜನೆಯ ಕಾಮಗಾರಿಗೆ ಈಗ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರ್ಕಾರದತ್ತ ಚಿತ್ತ ಹರಿಸಿದೆ. ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದರೆ ರಾಜ್ಯದಲ್ಲಿ ಕಾರ್ಯಗತದಲ್ಲಿರುವ ಮೊದಲ ರೋಪ್ ವೇ ಯೋಜನೆಯ ಕಾಮಗಾರಿಗಳು ಆರಂಭವಾಗಲಿವೆ.

ಹೌದು, ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ 4.37 ಎಕರೆ ಅರಣ್ಯ ಇಲಾಖೆಯ ಜಮೀನನ್ನು ಯೋಜನೆಗಾಗಿ ಪಡೆಯಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಅನುಮತಿಗಾಗಿ ಕಾಯಲಾಗುತ್ತಿದೆ. ಎರಡು ಎಕರೆಗಿಂತ ಹೆಚ್ಚು ಜಮೀನು ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿಶಾನೆಯತ್ತ ಪ್ರವಾಸೋದ್ಯಮ ಇಲಾಖೆ ಕಾದು ಕುಳಿತಿದೆ.

ಅರಣ್ಯ ಇಲಾಖೆಯ ಅನುಮತಿಗಾಗಿಯೇ ಕಾಯಲಾಗುತ್ತಿದೆ. ಒಂದು ಹೆಕ್ಟೇರ್ನೊಳಗೆ ಇದಿದ್ದರೆ ರಾಜ್ಯದಲ್ಲಿಯೇ ಅನುಮತಿ ಪಡೆಯಬೇಕಾಗಿತ್ತು. ಆದರೆ ಹೆಚ್ಚಿರುವ ಕಾರಣ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸುತ್ತವೆ.

ಯೋಜನೆಯಡಿ ಒಟ್ಟು 10 ಗೋಪುರಗಳು (ಟವರ್) ನಿರ್ಮಾಣವಾಗಲಿವೆ. ಐದು ಗೋಪುಗಳು ಖಾಸಗಿ ಜಮೀನಿನಲ್ಲಿ ಮತ್ತು ಐದು ಗೋಪುರಗಳು ಅರಣ್ಯ ಇಲಾಖೆಯ ಜಮೀನಿನಲ್ಲಿ ನಿರ್ಮಾಣವಾಗಬೇಕು. ಈಗಾಗಲೇ ಎಲ್ಟಿಪಿ ಯಲ್ಲಿ ಸರ್ಕಾರವು ಐದು ಎಕರೆ ಜಮೀನನ್ನು ಯೋಜನೆಗೆ ನೀಡಿದೆ. ಅಪ್ಪರ್ ಟರ್ಮಿನಲ್ ಪಾಯಿಂಟ್ನಲ್ಲಿಯೂ (ಯುಟಿಪಿ) ಎರಡು ಎಕರೆ ಜಮೀನು ನೀಡಲಾಗಿತ್ತು. ಆದರೆ ಅದು ಅರಣ್ಯ ಇಲಾಖೆಗೆ ಸೇರಿದೆ ಎನ್ನುವ ವಿಚಾರವು ತಗಾದೆಗೆ ಕಾರಣವಾಗಿತ್ತು. ಈ ಸರ್ವೆಗಳನ್ನು ನಡೆಸಲಾಗಿದೆ.

4.37 ಎಕರೆ ಅರಣ್ಯ ಇಲಾಖೆಯ ಜಮೀನನ್ನು ಯೋಜನೆಗಾಗಿ ಪಡೆಯಲಾಗಿದೆ. ಇದಕ್ಕೆ ಪರ್ಯಾಯವಾಗಿ ಸರ್ವೆ ನಂ 28ರಲ್ಲಿರುವ ಜಮೀನನ್ನು ಅರಣ್ಯಕ್ಕೆ ಇಲಾಖೆಗೆ ನೀಡಲಾಗಿದೆ. ಹೀಗೆ ನೀಡಿರುವ ಜಮೀನು ಸಹ ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಕೇಂದ್ರ ಅರಣ್ಯ ಇಲಾಖೆಯಿಂದ ಇನ್ನೊಂದು ತಿಂಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆ ಇದೆ. ಅನುಮತಿ ದೊರೆತ ನಂತರ ಕಾಮಗಾರಿಗಳು ವೇಗ ಪಡೆಯಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸುತ್ತವೆ.

ನ್ಯಾಯಾಲಯದಲ್ಲಿಯೂ ತಗಾದೆ: ಒಂದೆಡೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದರೆ ಮತ್ತೊಂದು ಕಡೆ ನ್ಯಾಯಾಲಯದಲ್ಲಿಯೂ ಯೋಜನೆಯ ವಿಚಾರವಾಗಿ ತಗಾದೆಗಳು ಇವೆ.

ಲೋಯರ್ ಟರ್ಮಿನಲ್ ಪಾಯಿಂಟ್ನಲ್ಲಿ (ಎಲ್ಟಿಪಿ) ಕಾಮಗಾರಿಗಳನ್ನು ಆರಂಭಿಸಲಾಗಿದೆ. ಎಲ್ಟಿಪಿಯಲ್ಲಿ ಯೋಜನೆಗೆ ವಶಪಡಿಸಿಕೊಂಡಿದ್ದ ಜಮೀನಿನ ವಿಚಾರವಾಗಿ ರೈತರು ನ್ಯಾಯಾಲಯ ಮೊರೆ ಹೋಗಿದ್ದರು. ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದು ಪ್ರಕರಣ ಮುಕ್ತ ಕಂಡಿತು. ಇದು ಯೋಜನೆಯ ಆರಂಭದಲ್ಲಿ ದೊರೆತ ದೊಡ್ಡ ಯಶಸ್ಸು.

ರೋಪ್ ವೇ ನಿರ್ಮಾಣದಿಂದ ಬೆಟ್ಟದ ಜೀವವೈವಿಧ್ಯಕ್ಕೆ ಧಕ್ಕೆ ಬರುತ್ತದೆ ಎಂದು ಆಕ್ಷೇಪಿಸಿ ಮತ್ತೆ ಪರಿಸರವಾದಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ನಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-18-76090110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.