ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ನಂದಿಗಿರಿ ಪ್ರದಕ್ಷಿಣಿಯಲ್ಲಿ ಅಪಾರ ಸಂಖ್ಯೆ ಜನರು ಪಾಲ್ಗೊಂಡಿದ್ದರು. ಪ್ರತಿ ತಿಂಗಳ ಹುಣ್ಣಿಮೆ ದಿನ ಗಿರಿ ಪ್ರದಕ್ಷಿಣೆ ನಡೆಯುತ್ತದೆ.

ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಸಂಜೆ 4ರ ವೇಳೆ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು. ದೇಗುಲದ ಆವರಣದಲ್ಲಿದ್ದ ಭಕ್ತರು ಓಂ ನಮಃ ಶಿವಾಯ ಎಂದು ಉದ್ಘಾರ ಮೊಳಗಿಸಿದರು. ಭೋಗ ನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು.

ಪಾದಯಾತ್ರಿಗಳಿಗೆ ಅಲ್ಲಲ್ಲಿ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ನಾನಾ ಭಜನಾ ತಂಡಗಳ ಜೊತೆ ಶಿವನಾಮ ಸ್ಮರಣೆ ಮಾಡುತ್ತ ಭಕ್ತರು ಹೆಜ್ಜೆ ಹಾಕಿದರು. ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್ ಹಾದು ಹೆಗ್ಗಡಿಹಳ್ಳಿ ಮಾರ್ಗವಾಗಿ ಕಣಿವೆ ಬಸವಣ್ಣ ದೇಗುಲಕ್ಕೆ ಪಾದಯಾತ್ರಿಗಳು ಬಂದರು. ಇಲ್ಲಿ ಬಸವಣ್ಣನಿಗೆ ಪೂಜೆ ಸಲ್ಲಿಸಿ ಭೋಗ ನಂದೀಶ್ವರ ದೇಗುಲದತ್ತ ಹೆಜ್ಜೆ ಹಾಕಿದರು. ರಾತ್ರಿ 9.30ರ ಸುಮಾರಿಗೆ ಭೋಗ ನಂದೀಶ್ವರ ದೇಗುಲ ತಲುಪುವ ಮೂಲಕ ಗಿರಿ ಪ್ರದಕ್ಷಿಣೆಯು ಸಂಪನ್ನವಾಯಿತು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆನಂದ ಮುನಿ ಸ್ವಾಮೀಜಿ ಪ್ರದಕ್ಷಿಣೆಗೆ ಚಾಲನೆ ನೀಡಿದರು.

ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತವು ಅಧ್ಯಾತ್ಮದ ದೊಡ್ಡ ಪರಂಪರೆ ಹೊಂದಿದೆ. ಸಾಧು, ಸಂತರು, ದಾರ್ಶನಿಕರು ಈ ನೆಲದಲ್ಲಿ ಭಕ್ತಿ, ಭಾವ ಬೆಳೆಸಿದ್ದಾರೆ ಎಂದು ಹೇಳಿದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಭಕ್ತಿ, ಶ್ರದ್ಧೆ ಹಾಗೂ ಅಧ್ಯಾತ್ಮದ ಮಹಾಸಂಗಮಕ್ಕೆ ನಂದಿಗಿರಿ ಸಾಕ್ಷಿ ಆಗಿದೆ ಎಂದರು.

ನಂದಿಗಿರಿಯ ಪವಿತ್ರ ನೆಲದಲ್ಲಿ ಮೊಳಗಿದ ಭಜನೆಗಳು, ಭಕ್ತರ ಜಯಘೋಷ ಹಾಗೂ ಅಧ್ಯಾತ್ಮಿಕ ವಾತಾವರಣವು ಎಲ್ಲರ ಮನಸ್ಸಿಗೆ ದಿವ್ಯ ಅನುಭವವನ್ನು ನೀಡಿದೆ ಎಂದರು.

ಸನಾತನ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿಯ ಮೌಲ್ಯಗಳನ್ನು ಈ ಕಾರ್ಯಕ್ರಮ ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.

ನಂದಿಗಿರಿ ಪ್ರದಕ್ಷಿಣೆ ಕೇವಲ ಒಂದು ಯಾತ್ರೆಯಲ್ಲ. ಅದು ಭಕ್ತಿಯ ಪಥದಲ್ಲಿ ಆತ್ಮಸಾಕ್ಷಾತ್ಕಾರದ ದಿವ್ಯ ಅನುಭವ ಎಂದು ಬಣ್ಣಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-549845950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.