ಚಿಕ್ಕಬಳ್ಳಾಪುರ: ನಂದಿಗಿರಿ ಪ್ರದಕ್ಷಿಣಿಯು ಬುಧವಾರ ಸಾಂಗವಾಗಿ ನಡೆಯಿತು. ಲೋಕಸಭೆಯ ಅಧಿವೇಶನದಲ್ಲಿ ಭಾಗಿಯಾಗಿರುವ ಕಾರಣ ಡಾ.ಕೆ.ಸುಧಾಕರ್ ಗಿರಿ ಪ್ರದಕ್ಷಿಣೆಯಲ್ಲಿ ಈ ಬಾರಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಅವರ ಪತ್ನಿ ಡಾ.ಪ್ರೀತಿ ಮತ್ತು ತಂದೆ ಕೇಶವ ರೆಡ್ಡಿ ಅವರ ನೇತೃತ್ವದಲ್ಲಿ ಗಿರಿ ಪ್ರದಕ್ಷಿಣೆ ನಡೆಯಿತು.

ಫೆಬ್ರುವರಿಯಲ್ಲಿ ಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಲಾಗಿದೆ. ಮಾರ್ಚ್ನಲ್ಲಿ ಗ್ರಹಣದ ಕಾರಣ ಪ್ರದಕ್ಷಿಣೆ ನಡೆದಿರಲಿಲ್ಲ. ಇದು ಎರಡನೇ ಕಾರ್ಯಕ್ರಮವಾಗಿದೆ.

ಮಧ್ಯಾಹ್ನ 3.30ರ ವೇಳೆಗೆ ನಂದಿಯ ಭೋಗ ನಂದೀಶ್ವರ ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆಗೆ ಭಕ್ತರು ಸೇರಿದರು.

ಸಂಜೆ 4ರ ವೇಳೆಯಲ್ಲಿ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು. ದೇಗುಲದ ಆವರಣದಲ್ಲಿದ್ದ ಸಹಸ್ರಾರು ಭಕ್ತರು ಓಂ ನಮಃ ಶಿವಾಯ ಎಂದು ಉದ್ಘಾರ ಮೊಳಗಿಸಿದರು. ಭೋಗ ನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು.

ಪಾದಯಾತ್ರಿಗಳಿಗೆ ಅಲ್ಲಲ್ಲಿ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ನಾನಾ ಭಜನಾ ತಂಡಗಳ ಜೊತೆ ಶಿವನಾಮ ಸ್ಮರಣೆ ಮಾಡುತ್ತ ಭಕ್ತರು ಹೆಜ್ಜೆ ಹಾಕಿದರು. ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್ ಹಾದು ಹೆಗ್ಗಡಿಹಳ್ಳಿ ಮಾರ್ಗವಾಗಿ ಕಣಿವೆ ಬಸವಣ್ಣ ದೇಗುಲಕ್ಕೆ ಪಾದಯಾತ್ರಿಗಳು ಬಂದರು. ಇಲ್ಲಿ ಬಸವಣ್ಣನಿಗೆ ಪೂಜೆ ಸಲ್ಲಿಸಿ ಭೋಗ ನಂದೀಶ್ವರ ದೇಗುಲದತ್ತ ಹೆಜ್ಜೆ ಹಾಕಿದರು. ರಾತ್ರಿ 8.30ರ ಸುಮಾರಿಗೆ ಭೋಗ ನಂದೀಶ್ವರ ದೇಗುಲ ತಲುಪುವ ಮೂಲಕ ಗಿರಿ ಪ್ರದಕ್ಷಿಣೆಯು ಸಂಪನ್ನವಾಯಿತು.

ಡಾ.ಪ್ರೀತಿ ಮಾತನಾಡಿ, ‘ಕಳೆದ ಬಾರಿ ಗ್ರಹಣ ಬಂದಿದ್ದರಿಂದ ಗಿರಿ ಪ್ರದಕ್ಷಿಣೆ ಸಾಧ್ಯವಾಗಲಿಲ್ಲ. ಡಾ.ಕೆ.ಸುಧಾಕರ್ ಅವರು ನವದೆಹಲಿಯಲ್ಲಿ ಇದ್ದಾರೆ. ಆ ಕಾರಣದಿಂದ ನಾನು ಬಂದಿದ್ದೇನೆ’ ಎಂದರು.

ಅರುಣಾಚಲನ ದರ್ಶನಕ್ಕೆ ತಿರುವಣ್ಣಾಮಲೈಗೆ ಹೋಗುತ್ತಿದ್ದರು. ಆದರೆ ನಮ್ಮಲ್ಲಿಯೇ ಅರುಣಾಚಲ ದೇವರು ಇದ್ದಾರೆ. ಆದ್ದರಿಂದ ಇಲ್ಲಿಯೇ ಗಿರಿ ಪ್ರದಕ್ಷಿಣೆ ಆಯೋಜಿಸಲು ತೀರ್ಮಾನಿಸಿದರು ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-16-1222997241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.