ಚಿಕ್ಕಬಳ್ಳಾಪುರ: ನಗರದ ಗೌರಿಬಿದನೂರು ರಸ್ತೆಯ ಡಿವೈನ್ ಸಿಟಿಯ ಬಳಿ ಬಣ್ಣ (ಪೇಂಟ್) ತುಂಬಿಕೊಂಡು ಹೋಗುತ್ತಿದ್ದ ವಾಹನ ಪಲ್ಟಿಯಾಗಿದೆ. ಅಪಘಾತದಿಂದಾಗಿ ವಾಹನದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಾಹನ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿದೆ. ವಾಹನದಲ್ಲಿ ತುಂಬಿದ್ದ ಬಣ್ಣದ ಡಬ್ಬಗಳು ಒಡೆದು ಬಿದ್ದವು. ಬಣ್ಣವು ರಸ್ತೆಗೆ ಹರಿದ ಪರಿಣಾಮ ಹೆದ್ದಾರಿ ಸಂಪೂರ್ಣ ಬಿಳಿಮಯವಾಗಿತ್ತು. ರಸ್ತೆಯಲ್ಲಿ ವಾಹನ ಸಂಚರಿಸಲು ಸಾಧ್ಯವಾಗದಷ್ಟು ಸಮಸ್ಯೆ ಎದುರಾಗಿತ್ತು. ಕೆಲ ಕಾಲ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.